• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಪಟೇಲರ ಜ್ಯಾತ್ಯತೀತತೆ ಬೇಕು : ಮೋದಿ

|

ಗುಜರಾತ್, ಅ, 31 ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಅವರು ಇಡೀ ದೇಶದ ನಾಯಕ. ಭಾರತಕ್ಕೆ ಪಟೇಲರ ಜ್ಯಾತ್ಯತೀತತೆಯ ಅಗತ್ಯ ಇದೆ. ವೋಟ್ ಬ್ಯಾಂಕ್ ಜ್ಯಾತ್ಯತೀತತೆ ನಮಗೆ ಬೇಡ ಎಂದು ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಭರೂಚ್‌ನಲ್ಲಿ ಬಳಿ ಕೆವಾಡಿಯಾ ಸರ್ದಾರ್‌ ಸರೋವರ ಡ್ಯಾಂ ಬಳಿ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ನರೇಂದ್ರ ಮೋದಿ, ಇದು ದೇಶದಲ್ಲೇ ಐತಿಹಾಸಿಕ ಶಿಲಾನ್ಯಾಸ ಕಾರ್ಯಕ್ರಮ ಎಂದು ಹೇಳಿದರು. ಸರ್ದಾರ್ ಪಟೇಲರ ಪ್ರತಿಮೆ ಐಕ್ಯತೆಯ ಸಂಕೇತವಾಗಿದ್ದು, ಈ ಪ್ರತಿಮೆ ನಿರ್ಮಿಸಲು ಸ್ಪೂರ್ತಿ ನೀಡಿದವರಿಗೆ ಧನ್ಯವಾದ ಎಂದು ಹೇಳಿದರು.

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಅವರು ಇಡೀ ದೇಶದ ನಾಯಕ. ಆದ್ದರಿಂದ ಅವರ ಪ್ರತಿಮೆ ನಿರ್ಮಿಸುವ ಕಸಸು ಕಂಡಿದ್ದೆ. ಇಂದು ನನ್ನ ಕನಸು ನನಸಾಗುತ್ತಿದೆ ಎಂದರು. ಭಾರತಕ್ಕೆ ಪಟೇಲರ ಜ್ಯಾತ್ಯತೀತತೆಯ ಅಗತ್ಯ ಇದೆ. ವೋಟ್ ಬ್ಯಾಂಕ್ ಜ್ಯಾತ್ಯತೀತತೆಯ ಅಗತ್ಯ ಇಲ್ಲ. ಆದರೆ ಕೆಲವು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಜ್ಯಾತ್ಯತೀತತೆಯಲ್ಲಿ ತೊಡಗಿವೆ ಎಂದು ಮೋದಿ ಆರೋಪಿಸಿದರು.

ನರ್ಮದಾ ಡ್ಯಾಂ ಸರ್ದಾರ್ ಪಟೇಲರ ಕನಸಾಗಿತ್ತು. ಆದರೆ ಸರ್ದಾರ್ ಸರೋವರ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಸರ್ದಾರ್ ಸರೋವರ ಯೋಜನೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನನಗೆ ಮತ್ತು ನನ್ನ ಸರ್ಕಾರಕ್ಕೆ ಪ್ರಶಂಸೆ ಬೇಕಿಲ್ಲ. ರೈತರ ಕಲ್ಯಾಣಕ್ಕಾಗಿ ಈ ಯೋಜನೆ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. (ಚಿತ್ರಗಳಲ್ಲಿ ಮೋದಿ ಮಾತು)

ವೋಟ್ ಬ್ಯಾಂಕ್ ಜ್ಯಾತ್ಯತೀತತೆ ಬೇಡ

ವೋಟ್ ಬ್ಯಾಂಕ್ ಜ್ಯಾತ್ಯತೀತತೆ ಬೇಡ

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಅವರು ಇಡೀ ದೇಶದ ನಾಯಕ. ಭಾರತಕ್ಕೆ ಪಟೇಲರ ಜ್ಯಾತ್ಯತೀತತೆಯ ಅಗತ್ಯ ಇದೆ. ವೋಟ್ ಬ್ಯಾಂಕ್ ಜ್ಯಾತ್ಯತೀತತೆ ನಮಗೆ ಬೇಡ ಎಂದು ಮೋದಿ ಹೇಳಿದರು.

ಐತಿಹಾಸಿಕ ಶಿಲಾನ್ಯಾಸ

ಐತಿಹಾಸಿಕ ಶಿಲಾನ್ಯಾಸ

ಇದು ದೇಶದಲ್ಲೇ ಐತಿಹಾಸಿಕ ಶಿಲಾನ್ಯಾಸ ಕಾರ್ಯಕ್ರಮ ಎಂದು ಹೇಳಿದರು. ಸರ್ದಾರ್ ಪಟೇಲರ ಪ್ರತಿಮೆ ಐಕ್ಯತೆಯ ಸಂಕೇತವಾಗಿದ್ದು, ಈ ಪ್ರತಿಮೆ ನಿರ್ಮಿಸಲು ಸ್ಪೂರ್ತಿ ನೀಡಿದವರಿಗೆ ಧನ್ಯವಾದ ಎಂದು ಹೇಳಿದರು.

ನನ್ನ ಕನಸು

ನನ್ನ ಕನಸು

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಅವರು ಇಡೀ ದೇಶದ ನಾಯಕ. ಆದ್ದರಿಂದ ಅವರ ಪ್ರತಿಮೆ ನಿರ್ಮಿಸುವ ಕಸಸು ಕಂಡಿದ್ದೆ. ಇಂದು ನನ್ನ ಕನಸು ನನಸಾಗುತ್ತಿದೆ ಎಂದು ಮೋದಿ ಹೇಳಿದರು.

ಅಡ್ವಾಣಿ ಆಗಮಿಸಿದ್ದರು

ಅಡ್ವಾಣಿ ಆಗಮಿಸಿದ್ದರು

ಸಮಾರಂಭಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಗಮಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಓರ್ವ ಮಹಾಪುರುಷ. ಪಟೇಲರ ಪ್ರತಿಮೆ ನಿರ್ಮಾಣದಿಂದ ದೇಶದಲ್ಲಿ ಒಗ್ಗಟ್ಟು ಹೆಚ್ಚಾಗಲಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಟೇಲರ ಹೋರಾಟ ಸ್ಮರಣೀಯ. ಅಂದು ವಲ್ಲಭ್ ಭಾಯ್ ಪಟೇಲ್ ಹೋರಾಡದಿದ್ದದ್ದರೆ, ಇಂದು ಭಾರತ ಒಗ್ಗಾಟ್ಟಾಗಿರಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಣ್ಣಿಸಿದರು.

ಹೇಗಿರಲಿದೆ ಪ್ರತಿಮೆ

ಹೇಗಿರಲಿದೆ ಪ್ರತಿಮೆ

597 ಅಡಿ (182 ಮೀಟರ್‌) ಎತ್ತರದ ಈ ಮೂರ್ತಿಯನ್ನು ಬರೋಬ್ಬರಿ 2,500 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬುಡಮಟ್ಟದಿಂದ 787 ಅಡಿ (240 ಮೀಟರ್‌) ಎತ್ತರವಿರುವ ಈ ಪುತ್ಥಳಿ ನಿರ್ಮಾಣಗೊಂಡ ಬಳಿಕ, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಪ್ರತಿಮೆ ನಿರ್ಮಾಣಕ್ಕೆ ಚಾಲನೆ

ಪ್ರತಿಮೆ ನಿರ್ಮಾಣಕ್ಕೆ ಚಾಲನೆ

ನರ್ಮದಾ ನದಿಯ ಮಧ್ಯದಲ್ಲಿ ದ್ವೀಪದಂತೆ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ. ಎರಡು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ ನದಿಯ ಮಧ್ಯದಲ್ಲಿ ಪ್ರತಿಮೆ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗುತ್ತದೆ. ಸರ್ದಾರ್‌ ಸರೋವರ ಡ್ಯಾಂ ಕಡೆ ನೋಡುತ್ತಿರುವಂತೆ ಈ ಮೂರ್ತಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ರೈತರಿಂದ ಕಬ್ಬಿಣ ಸಂಗ್ರಹ

ರೈತರಿಂದ ಕಬ್ಬಿಣ ಸಂಗ್ರಹ

ಪ್ರತಿಮೆಗಾಗಿ ಬಿಜೆಪಿ ದೇಶಾದ್ಯಂತ ರೈತರಿಂದ ಕಬ್ಬಿಣದ ತುಂಡು ಸಂಗ್ರಹಿಸುತ್ತಿದೆ. 7 ಲಕ್ಷ ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸುವ ಗುರಿ ಹಾಕಿಕೊಂಡಿರುವ ಬಿಜೆಪಿ, ಪ್ರತಿಯೊಬ್ಬ ರೈತರೂ 250 ಗ್ರಾಂ ಕಬ್ಬಿಣ ನೀಡಿದರೆ ಅದು 5 ಸಾವಿರ ಟನ್‌ನಷ್ಟಾಗುತ್ತದೆ ಎಂದು ಅಂದಾಜಿಸಿದೆ. ಎರಡನೇ ಹಂತದಲ್ಲಿ ಸ್ಮಾರಕ ಉದ್ಯಾನ, ಕೃತಕ ಜಲಾಶಯ, ಪ್ರವಾಸಿ ಕೇಂದ್ರ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ

English summary
A historic event is taking place on the banks of the Narmada said, Narendra Modi. On October 31, Thursday addressed people in foundation stone laying ceremony for the Statue of Unity at Kevadia and said, this was a dream for many years. Many people added new color to this dream, they gave suggestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X