Starlink ಭಾರತದ ಆಂತರಿಕ ವಿಷಯ ನಾವು ನೋಡಿ ಕೊಳ್ತೇವೆ, ನಿಮಗ್ಯಾಕೆ ಉಸಾಬರಿ: Mask ಗೆ ಕಮಲ್ ಹಾಸನ್ ತರಾಟೆ

Starlink Row: ಭಾರತದಲ್ಲಿ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆ ಆರಂಭಕ್ಕೆ ಸಂಬಂಧಿಸಿದಂತೆ ಅಮೆರಿಕಾ ಉದ್ಯಮಿ ಎಲಾನ್ ಮಸ್ಕ್ ಹೇಳಿಕೆ ಮತ್ತು ಅವರ ಪರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹುಭಾಷಾ ನಟ ಕಮಲ್ ಹಾಸನ್ ಅವರು ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. 'ಯಾರೇ ದೇಶ ನೀತಿಯನ್ನು ಗೌರವಿಸಬೇಕು' ಎಂದು ತಕ್ಕ ಉತ್ತರ ನೀಡುವ ಮೂಲಕ ಪ್ರಧಾನಿ ಮೋದಿಯವರ ಪರ ಬ್ಯಾಟ್ ಬೀಸಿದ್ದಾರೆ.

ಮಸ್ಕ್, ಹೌದು, ಯಾವುದೇ ಬಿಲಿಯನೇರ್ ಒಂದು ದೇಶದ ನೀತಿಯನ್ನು ನಿರ್ದೇಶಿಸಬಾರದು. ಅಮೆರಿಕನ್ನರೇ ಆಗಲಿ, ಯಾರೇ ಆಗಲಿ ದೇಶದ ನೀತಿಗಳನ್ನು ಗೌರವಿಸಬೇಕು ಎಂದು ಕಮಲ್ ಹಾಸನ್ ಅವರು ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ವಿವಾದದ ಪೋಸ್ಟ್‌ಗೆ ಮರು ಪೋಸ್ಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

Starlink Row Kamal Haasan

'ಭಾರತದ ನಿಜವಾದ ಬಾಸ್ ಅಂಬಾನಿ ಅವರೇ' ಎಂದು ಪ್ರಶ್ನಿಸಿದ್ದ ಮಸ್ ಅವರಿಗೆ, ಸ್ವಾಗತ ಎಂದು ಕೋರಿದ್ದ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ನೀವು ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರ ಹೆಸರು ಹೇಳದೇ ಮಾತನಾಡಿದ್ದರು. ಭಾರತದಲ್ಲಿ ಯಾವುದು ಜಾರಿ ಆಗಬೇಕು, ಯಾವುದು ಆಗಬಾರದು ಎಂಬುದನ್ನು, ನಮ್ಮದನ್ನು ನಿರ್ಧರಿಸುವವರು ನಾವೇ ಹೊರತು ಬೇರೆಯವರಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಹೇಳಿದ್ದೇನು?

ಕಮಲ್ ಹಾಸನ್ ಅವರು, ಪೋಸ್ಟ್‌ನಲ್ಲಿ 'ಭಾರತವು ಉಪಗ್ರಹ ಇಂಟರ್ನೆಟ್‌ನಲ್ಲಿ ಸಂಬಂಧಿಸಿದಂತೆ ಎಲ್ಲರನ್ನು ಸ್ವಾಗತಿಸುತ್ತದೆ. ಪೂರೈಕೆದಾರರು ಸ್ಪರ್ಧೆಯನ್ನು ಸ್ವಾಗತಿಸಬೇಕು, ದೂರದ ಪ್ರದೇಶಗಳಲ್ಲಿರುವವರಿಗೆ ಅತ್ಯಂತ ಪ್ರಾಯೋಗಿಕ ಮತ್ತು ಕೈಗೆಟುಕುವ ಕೊನೆಯ ಮೈಲಿ ಸೇವೆ ನೀಡುವವರು ಯಾರು?. ಕಡಿಮೆ ತಲಾ ಆದಾಯ ಹೊಂದಿರುವ ದೇಶಗಳಲ್ಲಿ, ಉಪಗ್ರಹ ಇಂಟರ್ನೆಟ್ ಸಹ ಕೈಗೆಟುಕುವಂತಿರಬೇಕು. ಹೆಚ್ಚಿನ ಚಂದಾದಾರಿಕೆ ಶುಲ್ಕಗಳು ಮತ್ತು ಸಲಕರಣೆಗಳ ವೆಚ್ಚಗಳು ಅದನ್ನು ಸಾಮಾನ್ಯ ಮನೆಗಳ ವ್ಯಾಪ್ತಿಯಿಂದ ಹೊರಗಿಡುವ ಅಪಾಯವನ್ನುಂಟುಮಾಡುತ್ತವೆ. ಸಂಪರ್ಕವು ಡಿಜಿಟಲ್ ಅಂತರವನ್ನು ಕಡಿಮೆ ಮಾಡಬೇಕು, ಹೊಸದನ್ನು ಸೃಷ್ಟಿಸಬಾರದು. ಇದೆಲ್ಲದರ ಕುರಿತು ಭಾರತವೇ ನಿರ್ಧರಿಸುತ್ತದೆ.

ನಮ್ಮ ನೆಟ್‌ವರ್ಕ್‌ಗಳು ಮತ್ತು ಸ್ಪೆಕ್ಟ್ರಮ್ ಕೇವಲ ವಾಣಿಜ್ಯ ಸ್ವತ್ತುಗಳಲ್ಲ, ಕಾರ್ಯತಂತ್ರದ ಮೂಲಸೌಕರ್ಯ ಎಂದು ನಮ್ಮ ದೇಶಕ್ಕೆ ಗೊತ್ತಿದೆ.. 'ಭಾರತದ ರಾಷ್ಟ್ರೀಯ ಭದ್ರತಾ ಸುರಕ್ಷತೆಗಳು ಮಾತುಕತೆಗೆ ಒಳಪಡುವುದಿಲ್ಲ. ಜಗತ್ತಿನ ಯಾರೇ ಬಂದರು ಅವರನ್ನು ಭಾರತ ಸ್ವಾಗತಿಸುತ್ತದೆ. ಭಾರತೀಯರು ನಾವು ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ. ಅದಕ್ಕಾಗಿ ಬೇರೆ ದೇಶದವರು, ಬಿಲೇನಿಯರ್ ಗಳು, ಅವರ ದ್ವಿಮುಖ ಮಾನದಂಡಗಳು ಬೇಕಿಲ್ಲ' ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಭಾರತ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ

'ಪ್ರತಿಯೊಂದು ದೇಶವು ತನ್ನದೇ ಆದ ಹಿತಾಸಕ್ತಿಗಳನ್ನು ಆಧರಿಸಿ ಆಯ್ಕೆ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುತ್ತದೆ. ಮನೆಯಲ್ಲಿ ರಕ್ಷಣಾವಾದವನ್ನು ಅಭ್ಯಾಸ ಮಾಡುವವರು ಮುಕ್ತ ಮಾರುಕಟ್ಟೆಗಳನ್ನು ಬೋಧಿಸಲು ಸಾಧ್ಯವಿಲ್ಲ. ಭಾರತವು ತನ್ನದೇ ಆದ ದೇಶೀಯ ತಯಾರಕರನ್ನು ರಕ್ಷಿಸುವ ಜವಾಬ್ದಾರಿ ಇದೆ., ಯುಎಸ್ಎ ತನ್ನ ದೇಶೀಯ ಉದ್ಯಮವನ್ನು ರಕ್ಷಿಸಲು ಚೀನೀ ಇವಿಗಳ ಮೇಲೆ 100% ಸುಂಕಗಳನ್ನು ವಿಧಿಸಿದೆ. ಭಾರತ ಮತ್ತು ಯುಎಸ್ ಎರಡೂ ಭದ್ರತಾ ಕಾಳಜಿಗಳ ಮೇಲೆ ಹುವಾವೇಯನ್ನು ನಿರ್ಬಂಧಿಸಿವೆ. ತನ್ನದೇ ಆದ ಕಾರ್ಯಸೂಚಿ ಹೊಂದಿರುವಾಗ ಭಾರತ ಮಾತ್ರ ಇತರರನ್ನು ಕೇಳಲು ಸಾಧ್ಯವಿಲ್ಲ' ಎಂದ್ದಾರೆ.

'ಪ್ರಜಾಪ್ರಭುತ್ವ ರಾಷ್ಟ್ ಭಾರತದಲ್ಲಿ ಏನೇ ಆಂತರಿಕ ಸಮಸ್ಯೆಗಳಿದ್ದರು ನಾವೇ ಚರ್ಚಿಸುತ್ತೇವೆ. ನಾವೇ ಬಗೆಹರಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಬ್ರಾಡ್‌ಬ್ಯಾಂಡ್ ಸೇವೆ ತೆಗೆದುಕೊಳ್ಳಿ, ಸಿಎಜಿಯ 2026 ರ ಲೆಕ್ಕಪರಿಶೋಧನಾ ವರದಿಯು ಕಂಡುಕೊಂಡಂತೆ, ಈ ಕಾರ್ಯಕ್ರಮವು ಅದರ ಮೂಲ ಉದ್ದೇಶಗಳನ್ನು ಪೂರೈಸಲು ಹೆಣಗಾಡುತ್ತಿರುವುದೇಕೆ?ಎಂಬುದು ಪ್ರಶ್ನೆಯಾಗಿದೆ.

₹39,888 ಕೋಟಿ ಖರ್ಚು ಮಾಡಲಾಗಿದ್ದರೂ, ಸೇವೆಗೆ ಸಿದ್ಧವಾಗಿರುವ ಗ್ರಾಮ ಪಂಚಾಯತ್‌ಗಳಲ್ಲಿ ಕೇವಲ 33.2% ಮಾತ್ರ ಏಕೆ ಕಾರ್ಯನಿರ್ವಹಿಸುತ್ತಿವೆ? ಅದೇ ಸಮಯದಲ್ಲಿ, ಇಂಟರ್ನೆಟ್ ಡೇಟಾವನ್ನು ವಿಶ್ವದ ಅತ್ಯಂತ ಕೈಗೆಟುಕುವ ದೇಶಗಳಲ್ಲಿ ಒಂದನ್ನಾಗಿ ಮಾಡಿದ ನಮ್ಮ ಟೆಲಿಕಾಂ ವಲಯ ಮತ್ತು ನಿಯಮಗಳನ್ನು ಜಾರಿಗೊಳಿಸುವುದು ನಮಗೆ ತಿಳಿದಿದೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+