Starlink India: ಭಾರತದಲ್ಲಿ ಇಂಟರ್‌ನೆಟ್ ಸೇವೆ ಆರಂಭಕ್ಕೆ ಪ್ರಭಾವಿ ಉದ್ಯಮಿಗಳಿಂದ ಅಡ್ಡಿ; ಎಲಾನ್ ಮಸ್ಕ್‌ ಗಂಭೀರ ಆರೋಪ!

Starlink India: ಸ್ಟಾರ್‌ಲಿಂಕ್ (ಉಪಗ್ರಹ ಇಂಟರ್ನೆಟ್ ಸೇವೆ - Starlink satellite internet service) ಭಾರತಕ್ಕೆ ಸಿಕ್ಕಿಲ್ಲ ಎಂದು ಭಾರತೀಯರು, ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ರಿಯಾಕ್ಟ್‌ ಮಾಡಿರುವ ಉದ್ಯಮಿ ಎಲಾನ್ ಮಸ್ಕ್ ಅವರು, ಭಾರತದಲ್ಲಿ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಕೆಲವು ಪ್ರಭಾವಿ ಉದ್ಯಮಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಟಾರ್‌ಲಿಂಕ್ ಭಾರತದಲ್ಲಿ ಸಿಗದೆ ಇರುವುದರ ಬಗ್ಗೆ ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಎನಾಲ್ ಮಸ್ಕ್‌ ಅವರು, "ದುರದೃಷ್ಟವಶಾತ್, ಕೆಲವರು ತಮ್ಮ ಏಕಸ್ವಾಮ್ಯವನ್ನು ಮುಂದುವರಿಸಿಕೊಳ್ಳಲು ನಮಗೆ ಅಡ್ಡಿಪಡಿಸುತ್ತಿದ್ದಾರೆ. ಅವರು ಯಾರೆಂಬುದು ನಿಮಗೆ ಊಹೆಯಾಗಬಹುದು... ಇದು ಭಾರತದ ಜನರಿಗೆ ಮಾಡುತ್ತಿರುವ ಅನ್ಯಾಯ!' ಅಂತಲೂ ಅವರು ಹೇಳಿದ್ದಾರೆ.

Starlink India Are Influential Business Groups Blocking Its Launch Elon Musk Makes Serious Allegation

ಮಣಿಪುರದಲ್ಲಿ ಸ್ಟಾರ್‌ಲಿಂಕ್ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪವನ್ನು ಎಲಾನ್ ಮಸ್ಕ್‌ ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಭಾರತದಾದ್ಯಂತ ಸ್ಟಾರ್‌ಲಿಂಕ್ ಸೇವೆ ಆಫ್ ಮಾಡಲಾಗಿದೆ, ಆದ್ದರಿಂದ ಅವುಗಳನ್ನು ಯಾರಾದರೂ ಯಾವುದೇ ಕಾರಣಕ್ಕಾಗಿ ಬಳಸಿದ್ದಾರೆ ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಅಂತ ಎಲಾನ್ ಮಸ್ಕ್‌ ಅವರು ತಳ್ಳಿ ಹಾಕಿದ್ದಾರೆ.

Starlink India: ಕನ್ನಡಿಗರು ಹೇಳಿದ್ದೇನು ?

ಕನ್ನಡಿಗರಿಗೆ ಇನ್ನೂ ಉತ್ತಮ ಸೇವೆ ಬೇಕು! ನಮಗೆ ಸ್ಟಾರ್‌ಲಿಂಕ್ ಬೇಕು, ಅದನ್ನು ಬೆಂಬಲಿಸಬೇಕು. ಭಾರತ ಮುಕ್ತ ಮಾರುಕಟ್ಟೆ ಮತ್ತು ಪ್ರಜಾಪ್ರಭುತ್ವದ ದೇಶ. ಹಾಗಿದ್ದರೆ ಕೆಲವು ಗುಜರಾತಿ ಉದ್ಯಮಿಗಳು ಸ್ಟಾರ್‌ಲಿಂಕ್ ಅನ್ನು ಹೇಗೆ ತಡೆಯಬಹುದು, ಅವರಿಗೆ ಸ್ಪರ್ಧೆ ಏಕೆ ಇಷ್ಟವಿಲ್ಲ, ಇಡೀ ಭಾರತವೇ ಅಮೆರಿಕದ ಐಟಿ ಸೇವೆಗಳ ಮೇಲೆ ಅವಲಂಬಿತವಾಗಿದೆ. ನಮ್ಮ ಡೇಟಾ ಈಗಾಗಲೇ ಅವರ ಬಳಿ ಇದೆ, ಹಾಗಾಗಿ ಸ್ಟಾರ್‌ಲಿಂಕ್‌ನಿಂದ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ ಎಂದೂ ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Kannadahelp ಕನ್ನಡ ಸಹಾಯ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಭಾರತಕ್ಕೆ ಅಗತ್ಯವಿದೆ @Starlink ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಭಾರತಕ್ಕೆ Starlink ಲಿಂಕ್ ಅವಶ್ಯವಿದೆ ಎನ್ನುವ ಗಂಭೀರ ಚರ್ಚೆ ನಡೆದಿದೆ. DogeDesigner ಎನ್ನುವ ಖಾತೆಯಿಂದ ಮಾಡಲಾಗಿರುವ ಟ್ವೀಟ್‌ಗೆ ಎಲಾನ್ ಮಸ್ಕ್‌ ರಿಯಾಕ್ಟ್‌ ಮಾಡಿದ್ದಾರೆ.

• ಮೇ 2026 ರ ಹೊತ್ತಿಗೆ ಭಾರತದ ಪಟ್ಟಿ ಮಾಡಲಾದ 11,256 ಹಳ್ಳಿಗಳು ಇನ್ನೂ 4G ವ್ಯಾಪ್ತಿಯನ್ನು ಹೊಂದಿಲ್ಲ.

• ಮಾರ್ಚ್ 2026 ರಲ್ಲಿ ಭಾರತದಲ್ಲಿ 1.093 ಬಿಲಿಯನ್ ಇಂಟರ್ನೆಟ್ ಚಂದಾದಾರಿಕೆಗಳು ಇದ್ದವು, ಆದರೆ ಕೇವಲ 440.87 ಮಿಲಿಯನ್ ಗ್ರಾಮೀಣ ಪ್ರದೇಶಗಳು. ಗ್ರಾಮೀಣ ಚಂದಾದಾರಿಕೆ ಸಾಂದ್ರತೆಯು 100 ಜನರಿಗೆ 48.31 ರಷ್ಟಿತ್ತು, ನಗರ ಭಾರತದಲ್ಲಿ ಇದು 126.80 ರಷ್ಟಿತ್ತು.

• ಭಾರತ್‌ನೆಟ್ 850,000 ರೂಟ್-ಕಿಮೀ ಫೈಬರ್ ಅನ್ನು ಹಾಕಿತ್ತು ಮತ್ತು ಸುಮಾರು 221,000 ಗ್ರಾಮ ಪಂಚಾಯತ್‌ಗಳನ್ನು ಸೇವೆಗೆ ಸಿದ್ಧಗೊಳಿಸಿತ್ತು. ಆದಾಗ್ಯೂ, ಜೂನ್ 2026 ರಲ್ಲಿ ಕೇವಲ 80,472 ಗ್ರಾಮ ಪಂಚಾಯತ್‌ಗಳಲ್ಲಿ ಅದರ ಉಪಸ್ಥಿತಿಯ ಅಂಶಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.

• ಮಾರ್ಚ್ 2026 ರಲ್ಲಿ ಭಾರತದ ಇಂಟರ್ನೆಟ್ ಚಂದಾದಾರಿಕೆಗಳಲ್ಲಿ ಕೇವಲ 4.26% ಮಾತ್ರ ವೈರ್ಡ್ ಸಂಪರ್ಕಗಳಾಗಿದ್ದವು. ಸ್ಟಾರ್‌ಲಿಂಕ್ ಸೇವೆ ಪಡೆಯದ ಸಮುದಾಯಗಳಿಗೆ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್‌ಗೆ ಮತ್ತೊಂದು ಮಾರ್ಗವನ್ನು ನೀಡಬಹುದು.

• ಇಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮಾತನಾಡಿದ ಸ್ಟಾರ್‌ಲಿಂಕ್ ಬಿಸಿನೆಸ್ ಆಪರೇಷನ್ಸ್‌ನ ಸ್ಪೇಸ್‌ಎಕ್ಸ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್ ಅವರ ಪ್ರಕಾರ, ಸ್ಟಾರ್‌ಲಿಂಕ್ ಭಾರತದಲ್ಲಿ ಈಗಾಗಲೇ 20 ಗೇಟ್‌ವೇ ಸೈಟ್‌ಗಳನ್ನು ನಿರ್ಮಿಸಿದೆ.

• ಭಾರತೀಯ ಬಳಕೆದಾರರ ಡೇಟಾವನ್ನು ಭಾರತದೊಳಗೆ ಇರಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಭಾರತ-ನಿರ್ದಿಷ್ಟ ಭದ್ರತಾ ನಿಯಂತ್ರಣಗಳನ್ನು ಅಭಿವೃದ್ಧಿಪಡಿಸಿದೆ ಎಂದು ಸ್ಟಾರ್‌ಲಿಂಕ್ ಹೇಳುತ್ತದೆ.

• ಫೈಬರ್ ಅಥವಾ ಮೊಬೈಲ್ ನೆಟ್‌ವರ್ಕ್‌ಗಳನ್ನು ವಿಸ್ತರಿಸುವುದು ಕಷ್ಟಕರವಾದ ದೂರದ ಹಳ್ಳಿಗಳು, ಪರ್ವತಗಳು ಮತ್ತು ದ್ವೀಪಗಳಿಗೆ ಇದರ ಉಪಗ್ರಹ ಜಾಲವು ಹೈ-ಸ್ಪೀಡ್ ಇಂಟರ್ನೆಟ್ ಅನ್ನು ತರಬಹುದು.

• ಉತ್ತಮ ಸಂಪರ್ಕವು ಗ್ರಾಮೀಣ ಶಾಲೆಗಳು ಆನ್‌ಲೈನ್ ಕಲಿಕೆಯನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ, ಚಿಕಿತ್ಸಾಲಯಗಳು ರಿಮೋಟ್ ಸಮಾಲೋಚನೆಗಳನ್ನು ನೀಡುತ್ತವೆ ಮತ್ತು ಸಣ್ಣ ವ್ಯವಹಾರಗಳು ಹೆಚ್ಚಿನ ಗ್ರಾಹಕರನ್ನು ತಲುಪುತ್ತವೆ. ಸ್ಟಾರ್‌ಲಿಂಕ್ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ದೂರದ ಸಮುದಾಯಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಬೆಂಬಲಿಸುತ್ತದೆ.

• ಪೋರ್ಟಬಲ್ ಸ್ಟಾರ್‌ಲಿಂಕ್ ಟರ್ಮಿನಲ್‌ಗಳು ಪ್ರಪಂಚದಾದ್ಯಂತ ವಿಪತ್ತು ಪ್ರತಿಕ್ರಿಯೆಯನ್ನು ಬೆಂಬಲಿಸಿವೆ. ಪ್ರವಾಹ, ಭೂಕಂಪಗಳು ಅಥವಾ ಬಿರುಗಾಳಿಗಳು ನೆಲದ ನೆಟ್‌ವರ್ಕ್‌ಗಳನ್ನು ಹಾನಿಗೊಳಿಸಿದಾಗ ಅವರು ಭಾರತೀಯ ತುರ್ತು ತಂಡಗಳಿಗೆ ಬ್ಯಾಕಪ್ ಸಂಪರ್ಕವನ್ನು ನೀಡಬಹುದು.

• ಭಾರತೀಯ ಅನುಮೋದನೆಗಳು ಮತ್ತು ಮೊಬೈಲ್ ಆಪರೇಟರ್ ಪಾಲುದಾರಿಕೆಗಳಿಗೆ ಒಳಪಟ್ಟು ಸಾಮಾನ್ಯ 4G ಫೋನ್‌ಗಳು ಟವರ್ ವ್ಯಾಪ್ತಿಯನ್ನು ಮೀರಿ ಸಂಪರ್ಕ ಸಾಧಿಸಲು ಡೈರೆಕ್ಟ್ ಟು ಸೆಲ್ ಸಹ ಸಹಾಯ ಮಾಡುತ್ತದೆ ಎಂದೂ ಹೇಳಲಾಗಿದೆ. ಈ ಕಾರಣಗಳಿಗೆ ಭಾರತಕ್ಕೆ ಸ್ಟಾರ್ ಲಿಂಕ್ ನೆಟ್‌ವರ್ಕ್‌ ಸೇವೆ ಅಗತ್ಯವಿದೆ ಎಂದೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+