• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರನೇ ಲಸಿಕೆಗೆ ಸಿದ್ಧವಾಗುತ್ತಿದೆ ಭಾರತ; ಸ್ಪುಟ್ನಿಕ್ ವಿ ಅಂತಿಮ ಪ್ರಯೋಗಕ್ಕೆ ಅನುಮತಿ

|

ನವದೆಹಲಿ, ಜನವರಿ 16: ಭಾರತದಾದ್ಯಂತ ಶನಿವಾರ ಕೊರೊನಾ ಸೋಂಕಿನ ವಿರುದ್ಧ ಬೃಹತ್ ಅಭಿಯಾನ ಆರಂಭಗೊಂಡಿದ್ದು, ದೇಶದೆಲ್ಲೆಡೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ.

ಈ ಎರಡು ಲಸಿಕೆಗಳನ್ನು ದೇಶದಲ್ಲಿ ವಿತರಿಸುತ್ತಿರುವ ನಡುವೆಯೇ ಮೂರನೇ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ದೊರೆತಿದೆ. ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ದೇಶದಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ನೀಡಿದೆ.

"ಏಕಕಾಲಕ್ಕೆ 4 ಕೊರೊನಾ ಲಸಿಕೆ ಸಿದ್ಧವಾಗುತ್ತಿರುವ ಏಕೈಕ ದೇಶ ಭಾರತ"

ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿ ಈ ಲಸಿಕೆಯ ಪ್ರಯೋಗಗಳನ್ನು ನಡೆಸಲಿದೆ. ಸೆಪ್ಟೆಂಬರ್ ನಲ್ಲಿ ರೆಡ್ಡೀಸ್ ಲ್ಯಾಬೊರೇಟರಿ ರಷ್ಯಾ ನೇರ ಬಂಡವಾಳ ಹೂಡಿಕೆ ಪಾಲುದಾರಿಕೆಯಲ್ಲಿ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಗಳ ಪ್ರಯೋಗ ಆರಂಭಿಸಿತ್ತು.

"ಈ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ದೊರೆತಿರುವುದು ಪ್ರಮುಖ ಮೈಲುಗಲ್ಲು. ಈ ತಿಂಗಳಿನಲ್ಲಿಯೇ ಮೂರನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಲಿದ್ದೇವೆ. ನಂತರ ಸುರಕ್ಷಿತ ಲಸಿಕೆಯನ್ನು ಭಾರತದ ಜನರಿಗೆ ಹೊರತರಲಿದ್ದೇವೆ" ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ಉಪಾಧ್ಯಕ್ಷ ಜಿ.ವಿ ಪ್ರಸಾದ್ ತಿಳಿಸಿದ್ದಾರೆ.

ಮೂರನೇ ಹಂತದ ಪ್ರಯೋಗವು 1500 ಮಂದಿಯನ್ನು ಒಳಗೊಳ್ಳಲಿದೆ. ಈ ಮುನ್ನ ದತ್ತಾಂಶ ಹಾಗೂ ಸುರಕ್ಷತಾ ಉಸ್ತುವಾರಿ ಮಂಡಳಿಯು ಸ್ಪುಟ್ನಿಕ್ ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಪರಿಶೀಲಿಸಿ ಮೂರನೇ ಹಂತದ ಪ್ರಯೋಗಕ್ಕೆ ಶಿಫಾರಸ್ಸು ಮಾಡಿತ್ತು. ಲಸಿಕೆ ಸುರಕ್ಷಿತವಾಗಿದ್ದು, ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸಿದೆ ಎಂದು ತಿಳಿಸಿತ್ತು.

   ಕೊರೊನಾ ಲಸಿಕೆಯನ್ನ ಮೊದಲು ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು- ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯ |Oneindia Kannada

   ಗಮಾಲೆಯ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ಸ್ಪುಟ್ನಿಕ್ ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಲಸಿಕೆ 91.4% ಪರಿಣಾಮಕಾರಿ ಎಂದು ರಷ್ಯಾದಲ್ಲಿ ಸಾಬೀತಾಗಿದೆ. ಪ್ರಸ್ತುತ ಈಜಿಪ್ಟ್, ವೆನಿಜುಲಾ, ಬೆಲಾರಸ್ ನಲ್ಲಿ ಈ ಲಸಿಕೆಯ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿವೆ.

   English summary
   The DCGI has approved the phase III clinical trials of Russia's Sputnik V vaccine against Covid-19 in the country
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X