• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ ಕೋವಿಡ್ ಲಸಿಕೆ ಪರೀಕ್ಷೆಗೆ DCGI ಅನುಮೋದನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ಲಸಿಕೆಯ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ಭಾರತದಲ್ಲಿ ಶೀಘ್ರವೇ ಪ್ರಯೋಗ ಆರಂಭಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜುಲೈ 30 ರಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯ ಶಿಫಾರಸ್ಸಿನ ಪ್ರಕಾರ, ಸ್ಪುಟ್ನಿಕ್ -ಲೈಟ್ ಕೂಡಾ ಸ್ಪುಟ್ನಿಕ್ ವಿ ಅಂಶಗಳನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎನ್ನಲಾಗಿದೆ.
ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವೆಬ್ ಸೈಟ್ ನಲ್ಲಿ ಅಳವಡಿಸಲಾಗಿತ್ತು.

ಸ್ಪುಟ್ನಿಕ್ -ಲೈಟ್ ಲಸಿಕೆಯ ಮಾರುಕಟ್ಟೆಗೆ ಅನುಮತಿ ಕೋರಿ ಡಿಸಿಜಿಐಗೆ ಪ್ರಸ್ತಾವನೆ ಸಲ್ಲಿಸಿದ್ದ ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರೋಟೋಕಾಲ್ ಅನ್ನು ಸಮಿತಿಯ ಮುಂದೆ ಮಂಡಿಸಿತ್ತು.

ಸ್ಪುಟ್ನಿಕ್ ವಿ (ಅಂದರೆ, ಸ್ಪುಟ್ನಿಕ್-ಲೈಟ್) ನ ಮೊದಲ-ಡೋಸ್ ಅಂಶ ಕುರಿತು ದೇಶದಲ್ಲಿ ಈಗಾಗಲೇ ಡಾ. ರೆಡ್ಡೀಸ್ ಲ್ಯಾಬೋರೆಟರಿ ನೀಡಿರುವ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಪ್ರತ್ಯೇಕ ಮೂರನೇ ಹಂತದ ಪ್ರಯೋಗ ಅಗತ್ಯವಿಲ್ಲ ಎಂದು ವಿಶೇಷ ತಜ್ಞರ ಸಮಿತಿ ತಿಳಿಸಿತ್ತು. ಇದೀಗ ತುರ್ತು ಬಳಕೆಗೆ ಅನುಮತಿ ನೀಡಿದೆ.

ನವದೆಹಲಿ: ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್ ಸೆಪ್ಟೆಂಬರ್ ಗೆ ಲಭ್ಯವಾಗಲಿದೆ. ಈ ಲಸಿಕೆ ಸಿಂಗಲ್ ಡೋಸ್ ಆಗಿದ್ದು, 750 ರೂ. ಬೆಲೆ ನಿಗದಿಪಡಿಸಲಾಗಿದೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ತಯಾರಿಕಾ ರಷ್ಯನ್ ಡೆರೆಕ್ಟ್ ಇನ್‍ವೆಸ್ಟಮೆಂಟ್ ಫಂಡ್ (ಆರ್ ಡಿಎಫ್)ನ ಪಾರ್ಟನರ್ ಕಂಪನಿ ಪೈನಸಿಯಾ ಬಯೋಟೆಕ್ ಭಾರತದಲ್ಲಿ ಬಳಕೆಗೆ ತುರ್ತು ಅನುಮತಿಯನ್ನು ಕೇಳಿದೆ.

ರಷ್ಯಾದ ಲಸಿಕೆಯಾಗಿರುವ ಸ್ಪುಟ್ನಿಕ್ ವಿಗೆ ಏಪ್ರಿಲ್ 12ರಂದು ಭಾರತ ತುರ್ತು ಅನುಮೋದನೆ ನೀಡಿತ್ತು. ಸದ್ಯ ಈ ಲಸಿಕೆ 65 ದೇಶಗಳಲ್ಲಿ ನೀಡಲಾಗುತ್ತಿದೆ. ಏಪ್ರಿಲ್ ನಲ್ಲಿ ಅನುಮತಿ ದೊರೆತರೂ ಮೇನಲ್ಲಿ ಈ ಲಸಿಕೆಯನ್ನ ದೇಶದ ಜನರಿಗೆ ನೀಡಲು ಆರಂಭಿಸಲಾಯ್ತು.

ಜೂನ್, ಜುಲೈನಲ್ಲಿ ವ್ಯಾಕ್ಸಿನ್ ಪೂರೈಕೆಯನ್ನು ಏರುಪೇರಾಗಿದ್ದರಿಂದ ಲಸಿಕಾಕರಣ ಕೊಂಚ ನಿಧಾನಗತಿಯಲ್ಲಿದೆ. ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಸ್ಪುಟ್ನಿಕ್ ವಿ ಲಸಿಕಾಕರಣ ವೇಗ ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ.

 ಸ್ಪುಟ್ನಿಕ್ ಲೈಟ್ ಎಂದರೇನು?

ಸ್ಪುಟ್ನಿಕ್ ಲೈಟ್ ಎಂದರೇನು?

ಸ್ಪುಟ್ನಿಕ್ ಲೈಟ್ ಹೊಸ ಲಸಿಕೆ ಅಲ್ಲ. ರಷ್ಯಾ ನೀಡುತ್ತಿರುವ ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳ ಮೊದಲನೇ ಡೋಸ್. ಸ್ಪುಟ್ನಿಕ್ ವಿಯ ಎರಡು ಡೋಸ್ ಗಳು ಬೇರೆ ಬೇರೆ ವೈರಲ್ ಫ್ಯಾಕ್ಟರ್ ಗಳಲ್ಲಿದೆ. ಸ್ಪುಟ್ನಿಕ್ ವಿ ಮೊದಲ ಡೋಸ್ ಶೇ.79.4ರಷ್ಟು ಪರಿಣಾಮಾಕಾರಿಯಾಗಿದ್ದರಿಂದ ಇದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಡಲಾಗಿದೆ.

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆಯ ಎರಡು ಡೋಸ್ ಪಡೆಯಬೇಕು. ಎರಡೂ ಡೋಸ್ ಪಡೆದ್ರೂ ಇದರ ಪರಿಣಾಮ ಶೇ.80. ಹಾಗಾಗಿ ಸ್ಪುಟ್ನಿಕ್ ವಿಯ ಮೊದಲನೇ ಡೋಸ್ ಲೈಟ್ ಇವರೆಡಕ್ಕಿಂತೂ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗಲಾಯದಲ್ಲಿ ಸಾಬೀತಾಗಿದೆ. ಕಳೆದ ವಾರ ಭಾರತದಲ್ಲಿ ಜಾನ್‍ಸನ್ ಆ್ಯಂಡ್ ಜಾನ್‍ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ

 ಸ್ಪುಟ್ನಿಕ್ ಲೈಟ್ ಲಾಭ

ಸ್ಪುಟ್ನಿಕ್ ಲೈಟ್ ಲಾಭ

* ಈ ಲಸಿಕೆ ಶೇ.79.4 ಪರಿಣಾಮಕಾರಿಯಾಗಿದ್ದು, ಎರಡದಿಂದ ಎಂಟು ಡಿಗ್ರಿ ತಾಪಮಾನದಲ್ಲಿ ಶೇಖರಿಸಡಬಹುದಾಗಿದೆ.

* ಶೇ.100ರಷ್ಟು ಜನರಲ್ಲಿ 10 ದಿನಗಳಲ್ಲಿಯೇ 40 ಪಟ್ಟು ಆಂಟಿಬಾಡಿಗಳ ಉತ್ಪಾದನೆ ಆಗಲಿದೆ.* ಕೊರೊನಾ ವೈರಸ್ ನ ಎಲ್ಲ ರೂಪಾಂತರಿಗಳ ವಿರುದ್ಧ ಸ್ಪುಟ್ನಿಕ್ ಲೈಟ್ ಕೆಲಸ ಮಾಡಲಿದೆ.* ವೈರಸ್ ಎಸ್-ಪ್ರೋಟಿನ್ ವಿರುದ್ಧ ಇಮ್ಯೂನ್ ರೆಸ್ಪಾನ್ಸ್ ಡೆವಲಪ್ ಆಗಲಿದೆ.
 ಸ್ಪುಟ್ನಿಕ್ ಲೈಟ್ ಬೆಲೆ

ಸ್ಪುಟ್ನಿಕ್ ಲೈಟ್ ಬೆಲೆ

ಈ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್ ಲೈಟ್ ಆರಂಭದಲ್ಲಿ ಸೀಮಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಇದರ ಬೆಲೆ ಸುಮಾರು 750 ರೂ. ಎಂದು ವರದಿ ಹೇಳಿದೆ. ಪ್ಯಾನೇಸಿಯಾ ಬಯೋಟೆಕ್ ರಷ್ಯಾದ ನೇರ ಹೂಡಿಕೆ ನಿಧಿಯನ್ನು ಪಾಲುದಾರಿಕೆ ಮಾಡಿಕೊಂಡಿದ್ದು, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಆರಂಭಿಸಿದೆ. ದೇಶದಲ್ಲಿ ಲಸಿಕೆ ತಯಾರಿಸಲು ಆರ್‌ಡಿಐಎಫ್ ಈಗಾಗಲೇ ಡಾ ರೆಡ್ಡಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಬ್ಬರೂ ವರ್ಷಕ್ಕೆ 100 ಮಿಲಿಯನ್ ಸ್ಪುಟ್ನಿಕ್ ವಿ ಡೋಸ್‌ಗಳನ್ನು ತಯಾರಿಸುವ ಗುರಿ ಹೊಂದಿದ್ದಾರೆ.

 ಎಷ್ಟು ಪರಿಣಾಮಕಾರಿ

ಎಷ್ಟು ಪರಿಣಾಮಕಾರಿ

ಸ್ಪುಟ್ನಿಕ್ ಲೈಟ್ ಸ್ಪುಟ್ನಿಕ್ V ಯ ಮೊದಲ ಘಟಕವಾಗಿದೆ (ಮರುಸಂಯೋಜಕ ಮಾನವ ಅಡೆನೊವೈರಸ್ ಸೆರೊಟೈಪ್ ಸಂಖ್ಯೆ 26 (rAd26)) - ಕರೋನವೈರಸ್ ವಿರುದ್ಧ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಇದು ಸುಮಾರು 80 ಪ್ರತಿಶತದಷ್ಟು ಪರಿಣಾಮಕಾರಿತ್ವದ ಮಟ್ಟವನ್ನು ಹೊಂದಿದೆ ಮತ್ತು ಇದು ಎರಡು-ಡೋಸ್ ಲಸಿಕೆಗಳಿಗಿಂತ ಹೆಚ್ಚಾಗಿದೆ.

ಕೊರೊನಾವೈರಸ್‌ನ ಎಲ್ಲಾ ಹೊಸ ತಳಿಗಳ ವಿರುದ್ಧ ಸ್ಪುಟ್ನಿಕ್ ಲೈಟ್ ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು ಪ್ರಮಾಣಿತ ಲಸಿಕೆ ಸಂಗ್ರಹಣೆ ಮತ್ತು ಲಾಜಿಸ್ಟಿಕ್ಸ್ ಅವಶ್ಯಕತೆಗಳಿಗೆ ಸಹ ಹೊಂದುತ್ತದೆ ಎಂದು ಹೇಳಿಕೊಂಡಿದೆ.

ಭಾರತವನ್ನು ಹೊರತುಪಡಿಸಿ, 65 ದೇಶಗಳಲ್ಲಿ ಸ್ಪುಟ್ನಿಕ್ ವಿ ಅನ್ನು ನೋಂದಾಯಿಸಲಾಗಿದೆ. ಲಸಿಕೆ ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ 97.6 % ಪರಿಣಾಮಕಾರಿ ಎಂದು ಸಾಬೀತಾಗಿದೆ.

ಆರ್ಡಿಐಎಫ್ ಪ್ರಕಾರ, ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಪರಿಣಾಮಕಾರಿಯಾಗಿ ಇತರ ಲಸಿಕೆಗಳ ಜೊತೆಯಲ್ಲಿ ಬಳಸಬಹುದಾಗಿದೆ. ಇದು ಹಲವಾರು ದೇಶಗಳಲ್ಲಿನ ಅಧ್ಯಯನಗಳಿಂದ ಸಾಬೀತಾಗಿದೆ.

English summary
Sputnik's single-dose Covid-19 vaccine, Sputnik Light, has received the approval of the Drugs Controller General of India (DCGI) to conduct phase III bridging trials on the Indian population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X