ಅಖಿಲೇಶ್ ರಿಟರ್ನ್ಸ್ ಹೀಗೊಂದು ವಿಡಿಯೋ ಭವಿಷ್ಯ

Posted By:
Subscribe to Oneindia Kannada

ಲಕ್ನೋ, ಫೆಬ್ರವರಿ 17: ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಭವಿಷ್ಯವನ್ನು ಸಮೀಕ್ಷೆ ಮೂಲಕ ತಿಳಿಸುವುದು ಹಳೆ ಕಥೆಯಾಯ್ತು. ಈಗ ಅಣಕು ವಿಡಿಯೋ ಮೂಲಕ ಉತ್ತರಪ್ರದೇಶದ ಚುನಾವಣೆ ಭವಿಷ್ಯ ತೋರಿಸಲಾಗಿದೆ. ಅಖಿಲೇಶ್ ಯಾದವ್ ಅವರು ಸಿಎಂ ಆಗಿ ಮತ್ತೆ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಹರೀಶ್ ರಾವತ್ ಅವರನ್ನು ಬಾಹುಬಲಿಯಂತೆ ಬಿಂಬಿಸಿ ತೋರಿಸಲಾಗಿದ್ದ ವಿಡಿಯೋ ಸಕತ್ ಕ್ಲಿಕ್ ಆಗಿತ್ತು. ಈಗ ಅಖಿಲೇಶ್ ಯಾದವ್ ಅವರು ಶಾರುಖ್ ಖಾನ್ ಅವರ ಡಾನ್ ರಿಟರ್ನ್ಸ್ ಶೈಲಿಯಲ್ಲಿ ಡೈಲಾಗ್ ಹೊಡೆಯುವುದನ್ನು ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.[ಎಬಿಪಿ ಸಮೀಕ್ಷೆ: ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ]

Spoof Video: Akhilesh Returns as CM : UP Assembly Election 2017 Results Prediction

ಈ ಹಿಂದೆ ರಯೀಸ್ ಪಾತ್ರದಲ್ಲಿ ಅಖಿಲೇಶ್ ರನ್ನು ಚಿತ್ರಿಸಿದ್ದ ಅನಿಮೇಟರ್ ಫೈಜಾನ್ ಸಿದ್ದಿಕಿ ಅವರು ಈಗ ಅಖಿಲೇಶ್ ಗೆ ಡಾನ್ ಲುಕ್ ಕೊಟ್ಟಿದ್ದಾರೆ. [ಟೈಮ್ಸ್ ನೌ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಲ್ಪ ಬಹುಮತ]

ಅಖಿಲೇಶ್ ರಿಟರ್ನ್ಸ್ ಎಂಬ ಈ ಅಣಕು ವಿಡಿಯೋದಲ್ಲಿ ಪಂಚಿಂಗ್ ಡೈಲಾಗ್ ಗಳಿವೆ. ಎಲ್ಲಾ ಪ್ರಶ್ನೆಗಳಿಗೂ ಮಾರ್ಚ್ 11 ರಂದು ಉತ್ತರ ಸಿಗಲಿದೆ ಎಂದು ಕೊನೆಯಲ್ಲಿ ಹೇಳಲಾಗಿದೆ.[ಸಮೀಕ್ಷೆ: ಜಾತಿ ಲೆಕ್ಕಾಚಾರದಲ್ಲಿ ಯಾರು ಮುಂದೆ?]

ಅಖಿಲೇಶ್ ರಿಟರ್ನ್ಸ್ ವಿಡಿಯೋ ನೋಡಿ:

ಅಪನಗದೀಕರಣದ ಬಗ್ಗೆ ಕೂಡಾ ಈ ವಿಡಿಯೋದಲ್ಲಿ ಕಾಮೆಂಟ್ ಮಾಡಲಾಗಿದೆ. ಮೋದಿ, ಅರುಣ್ ಜೇಟ್ಲಿ ನಡುವೆ ಡೈಲಾಗ್ ಇದೆ. ಕೊನೆಗೆ ವಿಮಾನದಿಂದ ಮೋದಿ ಅವರನ್ನು ಅಖಿಲೇಶ್ ಅವರು ಕೈಬಿಟ್ಟು ಕೆಳಗೆ ಬೀಳಿಸುತ್ತಾರೆ. ಒಂದು ನಿಮಿಷ 55 ಸೆಕೆಂಡು ಇರುವ ಈ ವಿಡಿಯೋ ಪ್ರಕಾರ ಉತ್ತರರಪ್ರದೇಶದ ಚುನಾವಣೆಯನ್ನು ಅಖಿಲೇಶ್ ಗೆಲ್ಲಲಿದ್ದಾರಂತೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
UP Assembly Election 2017 Results Prediction. Akhilesh Yadav will return as Uttar Pradesh CM predicts a spoof video.
Please Wait while comments are loading...