• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಥಾ ಸುದ್ದಿ: ಈ ಮಾಸ್ಕ್ ಧರಿಸಿದರೆ ಕೊರೊನಾವೈರಸ್ ಅಂಟಲ್ಲ!?

|
Google Oneindia Kannada News

ನವದೆಹಲಿ, ಜೂನ್ 14: "ನಿಮ್ಮ ಕೈಗಳನ್ನು ಆಗಾಗ ಶುದ್ಧವಾಗಿ ತೊಳೆದುಕೊಳ್ಳಿ, ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಕೊರೊನಾವೈರಸ್ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸದಾ ಜಾಗೃತರಾಗಿರಿ." ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯದಿಂದ ಈ ರೀತಿ ಎಚ್ಚರಿಕೆ ಸಂದೇಶವನ್ನು ಆಲಿಸುವುದು ಪ್ರತಿನಿತ್ಯದ ಕಾಯಕವಾಗಿದೆ.

ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತಿದೆಯೇ ವಿನಃ ಯಾವ ರೀತಿಯ ಮಾಸ್ಕ್ ಉತ್ತಮ ಹಾಗೂ ಸುರಕ್ಷಿತವಾಗಿರುತ್ತವೆ ಎಂಬುದರ ಬಗ್ಗೆ ಈವರೆಗೂ ಒಂದು ದೃಢ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಎನ್-95 ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.

ಕೊರೊನಾವೈರಸ್ ಕಟ್ಟಿ ಹಾಕಲು ಕೊರೊನಾವೈರಸ್ ಕಟ್ಟಿ ಹಾಕಲು "ಡಬಲ್ ಮಾಸ್ಕ್" ಸೂತ್ರ!?

ಭಾರತದಲ್ಲಿ ಎನ್-95 ಮಾಸ್ಕ್ ಗಿಂತಲೂ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಮಾಸ್ಕ್ ಅನ್ನು ಉತ್ಪಾದಿಸಲಾಗುತ್ತಿದೆ. ಪುಣೆ ಮೂಲದ ನವೋದ್ಯಮ ಸಂಸ್ಥೆ ಥಿಂಕ್ರ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಈ ಮಾಸ್ಕ್ ಅನ್ನು ವೈರಸಿಡ್ಸ್ ಎಂದು ಕರೆಯಲಾಗುತ್ತಿದೆ. ಮುಖಕ್ಕೆ ಅಂಟಿಕೊಳ್ಳಲು ಪ್ರಯತ್ನಿಸುವ ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿಯು ಈ ಮಾಸ್ಕ್ ಮೇಲೆ ಲೇಪಿಸಿದ ಪ್ರತಿಕಾಯಗಳಲ್ಲಿದೆ. ದೇಶದಲ್ಲಿ ಸದ್ದು ಮಾಡುತ್ತಾ ಸುದ್ದಿ ಆಗುತ್ತಿರುವ ವಿಶೇಷ ಮಾಸ್ಕ್ ಗಳ ಕುರಿತು ಒಂದು ವಿಶೇಷ ವರದಿ ನಿಮಗಾಗಿ ಮುಂದಿದೆ.

ವಿಶೇಷ ಮಾಸ್ಕ್ ಯೋಜನೆ ಎಂದರೇನು?

ವಿಶೇಷ ಮಾಸ್ಕ್ ಯೋಜನೆ ಎಂದರೇನು?

ಭಾರತದಲ್ಲಿ ಕೊವಿಡ್-19ರ ವಿರುದ್ಧ ಹೋರಾಡುವುದಕ್ಕೆ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆ ಆಗಿರುವ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ವಾಣಿಜ್ಯೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಆರಂಭಿಕ ಯೋಜನೆಗಳಲ್ಲಿ ವೈರಸಿಡಲ್ ಮಾಸ್ಕ್ ಯೋಜನೆ ಕೂಡಾ ಒಂದಾಗಿದೆ.

2020ರ ಜುಲೈ 8ರಂದು ಒಪ್ಪಂದ

2020ರ ಜುಲೈ 8ರಂದು ಒಪ್ಪಂದ

ದೇಶದಲ್ಲಿ ಕಳೆದ 2020ರ ಮೇ ತಿಂಗಳಿನಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಹಲವು ರೀತಿ ಯೋಜನೆಗಳನ್ನು ಹುಡುಕಾಡುತ್ತಿರುವ ಭಾಗವಾಗಿ ಟಿಡಿಬಿ ಹಣಕಾಸಿನ ನೆರವು ಪಡೆಯಲಾಗಿತ್ತು. ತದನಂತರ, ಮಾಸ್ಕ್ ಅನ್ನು ಅಭಿವೃದ್ಧಿಪಡಿಸಲು 2020ರ ಜುಲೈ 8ರಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಾಮಾನ್ಯವಾಗಿ ಎನ್-95, 3-ಪ್ಲೈ ಮತ್ತು ಬಟ್ಟೆ ಮಾಸ್ಕ್ ಗಳಿಗೆ ಹೋಲಿಸಿದರೆ, ಕೊವಿಡ್ -19ರ ಹರಡುವಿಕೆಯನ್ನು ತಡೆಯುವಲ್ಲಿ ಈ ಮೌಲ್ಯಕ್ಕೆ ತಕ್ಕನಾದ ಮಾಸ್ಕ ಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆಯೊಂದು ಹೇಳಿಕೊಂಡಿದೆ

"ಕೊವಿಡ್-19 ತಡೆಯಲು ಪರಿಣಾಮಕಾರಿಮಾಸ್ಕ್"

"ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ನಾವು ಸಮಸ್ಯೆ ಮತ್ತು ಸಂಭವನೀಯ ಪರಿಹಾರಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದ್ದೇವೆ. ಮಾಸ್ಕ್ ಬಳಕೆಯು ಸೋಂಕು ತಡೆಗಟ್ಟುವಲ್ಲಿ ಪ್ರಮುಖ ಅಸ್ತ್ರವಾಗಿ ಸಾರ್ವತ್ರಿಕವಾಗಲಿದೆ ಎಂದು ತಿಳಿದಿದ್ದೇವೆ. ಆದರೆ ಆಗ ಲಭ್ಯವಿರುವ ಮತ್ತು ಸಾಮಾನ್ಯ ಜನರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಮಾಸ್ಕ್ ಮನೆಯಲ್ಲಿಯೇ ಮತ್ತು ಕಡಿಮೆ ಗುಣಮಟ್ಟದವು ಎಂದು ನಾವು ಅರಿತುಕೊಂಡೆವು. ಉತ್ತಮ ಗುಣಮಟ್ಟದ ಮಾಸ್ಕ್ ಅವಶ್ಯಕತೆ ಇದೆ. ಇದು ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ಉತ್ತಮ ವಿಧಾನವಾಗಿ ಮೌಲ್ಯಕ್ಕೆ ತಕ್ಕನಾದ ಮತ್ತು ಹೆಚ್ಚು ಪರಿಣಾಮಕಾರಿಯಾದ ವೈರಸಿಡಲ್ ಲೇಪಿತ ಮಾಸ್ಕ್ ಅಭಿವೃದ್ಧಿಪಡಿಸಲು ಮತ್ತು ವ್ಯಾಣಿಜ್ಯೀಕರಣಗೊಳಿಸಲು ಒಂದು ಯೋಜನೆಯನ್ನು ಕೈಗೊಳ್ಳಲು ಕಾರಣವಾಯಿತು," ಎಂದು ಸಂಸ್ಥಾಪಕ ನಿರ್ದೇಶಕರಾದ ಡಾ. ಶೀತಲ್ ಕುಮಾರ್ ಜಾಂಬಾದ್ ವಿವರಿಸಿದ್ದಾರೆ.

ಕೊವಿಡ್-19 ನಿಂದ ರಕ್ಷಿಸುವ ಮಾಸ್ಕ್ ಉತ್ಪಾದನೆ?

ಕೊವಿಡ್-19 ನಿಂದ ರಕ್ಷಿಸುವ ಮಾಸ್ಕ್ ಉತ್ಪಾದನೆ?

ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಥಿಂಕ್ರ್ ಟೆಕ್ನಾಲಜೀಸ್ ವೈರಸಿಡಲ್ ಲೇಪನ ಸೂತ್ರ ಅಭಿವೃದ್ಧಿಪಡಿಸುವತ್ತ ಲಕ್ಷ್ಯ ನೆಡಲಾಗಿತ್ತು. ಈ ಮಾಸ್ಕ್ ಅನ್ನು ನೆರುಲ್ ನಲ್ಲಿರುವ ಮೆರ್ಕ್ ಲೈಫ್ ಸೈನ್ಸಸ್ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಉದ್ದೇಶಕ್ಕಾಗಿ ಸಂಶೋಧನಾ ಸೌಲಭ್ಯವನ್ನು ಬಳಸಲಾಯಿತು. ಬಟ್ಟೆ ಪದರ ಲೇಪಿತ ಸೂತ್ರೀಕರಣ ಬಳಸಲಾಗಿದೆ. ಲೇಪನದ ಏಕರೂಪತೆಗಾಗಿ 3 ಡಿ ಮುದ್ರಣ ತತ್ವ ಬಳಸಲಾಯಿತು. ಲೇಪಿತ ಪದರವನ್ನು ಮರು ಬಳಸಬಹುದಾದ ಫಿಲ್ಟರ್ ಜೊತೆ ಎನ್ -95 ಮಾಸ್ಕ್, 3-ಪ್ಲೈ ಮಾಸ್ಕ್, ಸರಳ ಬಟ್ಟೆಯ ಮಾಸ್ಕ್, 3 ಡಿ ಮುದ್ರಿತ ಅಥವಾ ಇತರ ಪ್ಲಾಸ್ಟಿಕ್ ಕವರ್ ಮಾಸ್ಕ್ ಗಳಲ್ಲಿ ಹೆಚ್ಚುವರಿ ಪದರವಾಗಿ ಸೇರಿಸಿಕೊಳ್ಳಬಹುದು. ಈ ಮಾಸ್ಕ್ ಶೋಧನೆ ಕಾರ್ಯ ವಿಧಾನಗಳು ಹೆಚ್ಚುವರಿ ರಕ್ಷಣೆ ನೀಡುತ್ತದೆ.

ಮಾಸ್ಕ್ ಮೇಲಿನ ಲೇಪಿತದ ಹಿಂದಿನ ಗುಟ್ಟು?

ಮಾಸ್ಕ್ ಮೇಲಿನ ಲೇಪಿತದ ಹಿಂದಿನ ಗುಟ್ಟು?

ಈ ಲೇಪಿತ ಮಾಸ್ಕ್ ಗಳಿಂದ ಕೊರೊನಾವೈರಸ್ ಸೋಂಕನ್ನು ನಿಷ್ಕ್ರಿಯಗೊಳಿಸುವುದಕ್ಕೆ ಸಾಕ್ಷಿಯಾಗಿದೆ. ಮಾಸ್ಕ್ ಮೇಲಿನ ಲೇಪನಕ್ಕೆ ಸೋಡಿಯಂ ಒಲೆಫಿನ್ ಸಲ್ಫೋನೇಟ್ ಆಧಾರಿತ ಮಿಶ್ರಣವಾಗಿದೆ ಬಳಸಲಾಗಿರುತ್ತದೆ. ಇದು ಹೈಡ್ರೋಫಿಲಿಕ್ ಮತ್ತು ಹೈಡ್ರೋಫೋಬಿಕ್ ಗುಣಲಕ್ಷಣಗಳನ್ನು ಹೊಂದಿರುವ ಸಾಬೂನು ರೂಪಿಸುವ ಏಜೆಂಟ್ ಆಗಿದೆ. ಸುತ್ತುವರೆದ ರೋಗಾಣುಗಳ ಸಂಪರ್ಕದಲ್ಲಿ, ಇದು ರೋಗಾಣುವಿನ ಹೊರ ಪೊರೆಗೆ ಅಡ್ಡಿಪಡಿಸುತ್ತದೆ. ಇದರಲ್ಲಿ ಬಳಸಿದ ವಸ್ತುಗಳು ಕೋಣೆಯ ಉಷ್ಣಾಂಶದಲ್ಲಿ ಸ್ಥಿರವಾಗಿರುತ್ತವೆ ಮತ್ತು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

3ಡಿ ಮುದ್ರಣದಬಳಸಿ ಮಾಸ್ಕ್ಸಿದ್ಧಪಡಿಸುವುದು

3ಡಿ ಮುದ್ರಣದಬಳಸಿ ಮಾಸ್ಕ್ಸಿದ್ಧಪಡಿಸುವುದು

"ಸಾಮಾನ್ಯವಾಗಿ ಮರುಬಳಕೆ ಮಾಡಬಹುದಾದ ಮಾಸ್ಕ್ ಗಳನ್ನು 3D ಮುದ್ರಣವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಈ ಮಾಸ್ಕ್ ಗಳಲ್ಲಿ ಬ್ಯಾಕ್ಟೀರಿಯಾದ ಶೋಧನಾ ದಕ್ಷತೆ 95ಕ್ಕಿಂತ ಹೆಚ್ಚಿವೆ," ಎಂದು ಡಾ. ಜಾಂಬಾದ್ ಹೇಳದಿದ್ದಾರೆ. "ಈ ಯೋಜನೆಯಲ್ಲಿ, ಮೊದಲ ಬಾರಿಗೆ, ಪ್ಲಾಸ್ಟಿಕ್-ಮೌಲ್ಡಡ್ ಅಥವಾ 3 ಡಿ-ಮುದ್ರಿತ ಮುಖಗವಸುಗಳ ಕವರ್ ಗಳಿಗೆ ನಿಖರವಾಗಿ ಹೊಂದಿಕೊಳ್ಳಲು ಮಲ್ಟಿಲೇಯರ್ ಬಟ್ಟೆ ಫಿಲ್ಟರ್ಗಳನ್ನು ತಯಾರಿಸಲು ನಾವು 3D- ಮುದ್ರಕಗಳನ್ನು ಬಳಸಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.

ಸಿಲಿಕಾನ್ ಸಿಟಿಯ ಆಸ್ಪತ್ರೆಗೆ 6,000 ವಿಶೇಷ ಮಾಸ್ಕ್ ವಿತರಣೆ

ಸಿಲಿಕಾನ್ ಸಿಟಿಯ ಆಸ್ಪತ್ರೆಗೆ 6,000 ವಿಶೇಷ ಮಾಸ್ಕ್ ವಿತರಣೆ

ಥಿಂಕ್ರ್ ಟೆಕ್ನಾಲಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ಈ ಉತ್ಪನ್ನಕ್ಕಾಗಿ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದೆ. ವಾಣಿಜ್ಯ ಪ್ರಮಾಣದ ಉತ್ಪಾದನೆ ಕೂಡ ಪ್ರಾರಂಭವಾಗಿದೆ ಎಂದು ಡಾ.ಜಾಂಬಾದ್ ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ ಮತ್ತು ಬೆಂಗಳೂರಿನ ಬಾಲಕಿಯರ ಶಾಲೆ ಮತ್ತು ಕಾಲೇಜಿಗೆ, ನಂದೂರ್ಬಾರ್, ನಾಸಿಕ್ ಮತ್ತು ಬೆಂಗಳೂರಿನ ನಾಲ್ಕು ಸರ್ಕಾರಿ ಆಸ್ಪತ್ರೆಗಳಿಗೆ 6,000 ವೈರಸಿಡಲ್ ಮುಖಗವಸುಗಳನ್ನು ವಿತರಿಸಲಾಗಿದೆ.

English summary
Special Masks For Fight Against Coronavirus Across India; Read Information In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X