ಮಹಿಳಾ ಮೀಸಲಾತಿ ಮಸೂದೆ: ಮುಸ್ಲಿಂ ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ ಕೇಳಿದ ಜಯಾ ಬಚ್ಚನ್‌

ನವದೆಹಲಿ, ಸೆಪ್ಟೆಂಬರ್‌ 21: ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ನಿನ್ನೆ ಮಂಡಿಸಲಾಗಿದೆ. ಕಾಂಗ್ರೆಸ್‌ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಮೀಸಲಾತಿಯನ್ನು ಬೆಂಬಲಿಸಿವೆ. ಈ ಕುರಿತು ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್‌ ಅವರು ಮಾಹಿಳಾ ಮೀಸಲಾತಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

'ನಮ್ಮ ಪಕ್ಷವು ಮಹಿಳಾ ಮೀಸಲಾತಿಯನ್ನು ಬೆಂಬಲಿಸುವುದಿಲ್ಲವೆಂದು ಕೆಲವರು ಪುಕಾರು ಹಬ್ಬಿಸುತ್ತಿದ್ದಾರೆ. ಆದರೆ, ಸಮಾಜವಾದಿ ಪಕ್ಷವು ಈ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದರೆ, ನಾವು ಕೆಲ ಬೇಡಿಕೆಗಳನ್ನು ಹೊಂದಿದ್ದೇವೆ' ಎಂದು ಜಯಾ ಬಚ್ಚನ್‌ ಹೇಳಿದ್ದಾರೆ.

SP Member Jaya Bachchan Backs Womens Reservation Bill with 15-20% OBC Preference Clause

'ನಾನು ನನ್ನ ಪಕ್ಷದ ಪರವಾಗಿ ವಿನಂತಿಸುತ್ತೇನೆ. ಮಹಿಳಾ ಮೀಸಲಾತಿಯೊಳಗೆ ಮೀಸಲಾತಿ ಬೇಕಿದೆ. ವಿಶೇಷವಾಗಿ ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ, ಮುಸ್ಲಿಂ ಅಲ್ಪಸಂಖ್ಯಾತರಿಗೆ ಶೇ 15ರಿಂದ 20ರಷ್ಟು ಸ್ಥಾನಗಳನ್ನು ಮೀಸಲಿಡಬೇಕು' ಎಂದು ಜಯಾ ಬಚ್ಚನ್‌ ಒತ್ತಾಯಿಸಿದ್ದಾರೆ.

'ರಾಜಕೀಯ ಪಕ್ಷಗಳು ಮಹಿಳೆಯರಿಗೆ 30 ಪ್ರತಿಶತ ಮೀಸಲಾತಿಯನ್ನು ಖಚಿತಪಡಿಸಿಕೊಳ್ಳಬೇಕು' ಎಂದು ಅವರು ಒತ್ತಿ ಹೇಳಿದರು.

ಆರಂಭದಲ್ಲಿ ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಈ ಮಸೂದೆಯ ಪರವಾಗಿ ಧ್ವನಿ ಎತ್ತಿದ್ದರು ಎಂದು ಜಯಾ ಬಚ್ಚನ್‌ ನೆನಪಿಸಿಕೊಂಡರು.

SP Member Jaya Bachchan Backs Womens Reservation Bill with 15-20% OBC Preference Clause

ಹೆಚ್ ಡಿ ದೇವೇಗೌಡರ ಅವಧಿಯಲ್ಲಿ ಮಸೂದೆ ಮಂಡಿಸಲಾಗಿತ್ತು. ಆ ಸಂದರ್ಭದಲ್ಲಿ ಎಸ್‌ಪಿ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಇದನ್ನು ವಿರೋಧಿಸಿಲ್ಲವೆಂದು ಎಂದು ಜಯಾ ತಿಳಿಸಿದ್ದಾರೆ.

ಮೀಸಲಾತಿ ಬೆಂಬಲಿಸಿದ ಮಾಯಾವತಿ

ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಮಹಿಳಾ ಮೀಸಲಾತಿಯನ್ನು ಬೆಂಬಲಿಸಿದ್ದಾರೆ. ಆದರೆ, ಅವರು ಸಹ ಮೀಸಲಾತಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

'ಈ ಮಸೂದೆಯ ಪ್ರಕಾರ, ಮಹಿಳೆಯರಿಗೆ 15-16 ವರ್ಷಗಳವರೆಗೆ ಮೀಸಲಾತಿ ನೀಡಲಾಗುವುದಿಲ್ಲ. ಏಕೆಂದರೆ ಮೊದಲು ಜನಗಣತಿಯನ್ನು ನಡೆಸಬೇಕು. ನಂತರ ಸೀಟುಗಳ ಡಿಲಿಮಿಟೇಶನ್ ಮಾಡಬೇಕು. ಜನಗಣತಿಗೆ ಬಹಳ ಸಮಯ ಹಿಡಿಯುತ್ತದೆ. ಅದರ ನಂತರವೇ ಮಸೂದೆಯನ್ನು ಜಾರಿಗೆ ತರಲಾಗುತ್ತದೆ' ಎಂದು ಮಾಯಾವತಿ ಹೇಳಿದ್ದಾರೆ.

'ಮಹಿಳೆಯರಿಗೆ ಮೀಸಲಾತಿ ನೀಡುವುದು ಬಿಜೆಪಿಯ ಉದ್ದೇಶವಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಮಹಿಳೆಯರನ್ನು ಸೆಳೆಯಲು ಈ ಮಸೂದೆಯನ್ನು ತರಲಾಗುತ್ತಿದೆ' ಎಂದು ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ಜನಗಣತಿ ಮತ್ತು ಕ್ಷೇತ್ರ ಮರು ವಿಂಗಡನೆಗೆ ಸಂಬಂಧಿಸಿದ ಎರಡು ನಿಬಂಧನೆಗಳನ್ನು ಕೈಬಿಡಬೇಕು. ಇದರಿಂದ ಮಹಿಳೆಯರಿಗೆ ತಕ್ಷಣವೇ ಮೀಸಲಾತಿಯ ಲಾಭ ದೊರೆಯುತ್ತದೆ ಎಂದು ಮಾಯಾವತಿ ಪ್ರತಿಪಾದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+