ಮುಂಗಾರಿನ ಮೊದಲ ಮಳೆಯಲ್ಲಿ ಮಿಂದೆದ್ದ ಕೇರಳ
ನೈರುತ್ಯ ಮುಂಗಾರು ಮಂಗಳವಾರ(ಮೇ 30)ದಂದು ಅಧಿಕೃತವಾಗಿ ಕೇರಳರಾಜ್ಯಗಳನ್ನು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಮುಂಗಾರಿನ ಮೊದಲ ಮಳೆಯಲ್ಲಿ ಕೇರಳಿಗರು ಮಿಂದೆದ್ದಿದ್ದಾರೆ.
ತಿರುವನಂತಪುರಂ, ಮೇ 30: ನೈರುತ್ಯ ಮುಂಗಾರು ಮಂಗಳವಾರ(ಮೇ 30)ದಂದು ಅಧಿಕೃತವಾಗಿ ಕೇರಳರಾಜ್ಯಗಳನ್ನು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಮುಂಗಾರಿನ ಮೊದಲ ಮಳೆಯಲ್ಲಿ ಕೇರಳಿಗರು ಮಿಂದೆದ್ದಿದ್ದಾರೆ.
ಕೇರಳಕ್ಕೆ ಮುಂಗಾರು ಪ್ರವೇಶಿಸಲು ಪರಿಸ್ಥಿತಿ ಅನುಕೂಲಕರವಾಗಿತ್ತು. ವಾಡಿಕೆಗಿಂತ ಎರಡು ದಿನ ಮೊದಲೇ ಮುಂಗಾರು ಪ್ರವೇಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳದಲ್ಲಿ ಪ್ರವೇಶ ಪಡೆಯುತ್ತದೆ. ಇದಾದ ಒಂದು ವಾರದ ಬಳಿಕ ಕಾವೇರಿ ಕೊಳ್ಳದ ಮೂಲಕ ಕರ್ನಾಟಕವನ್ನು ಮುಂಗಾರು ಪ್ರವೇಶಿಸುತ್ತದೆ.

ಸೋಮವಾರ ಬೆಳಿಗ್ಗೆಯಿಂದಲೇ ಕೇರಳದ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಮಂಗಳವಾರ ಇನ್ನಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ. ಅಲಪ್ಪುಳ, ಕೊಟ್ಟಾಯಂ,ತ್ರಿಶೂರ್, ಕೋಯಿಕ್ಕೊಡ್ ನಲ್ಲಿ ನಿರಂತರ ಮಳೆ ಸುರಿಯುತ್ತಿದೆ.
Southwest #Monsoon ☔️hits #Kerala and #NorthEastIndia pic.twitter.com/YQIPUdVdz7
— Doordarshan News (@DDNewsLive) May 30, 2017
ಮುಂಗಾರು ಮಳೆಯ ಮೊದಲ ಹನಿಯನ್ನು ಧರೆಗಿಳಿಸಿಕೊಳ್ಳುವ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅವಧಿಗೆ ಮುನ್ನವೇ ಮುಂಗಾರು ಮಾರುತಗಳು ಪ್ರವೇಶಿಸಿವೆ. ಕಳದ ಆರು ದಿನಗಳಿಂಡ ಮಳೆ ಸುರಿಯುತ್ತಿದೆ.
Trivandrum: Monsoon rains arrived in Kerala in line with forecast pic.twitter.com/S7c0A0MZTA
— ANI (@ANI_news) May 30, 2017
ಮೋರಾ ಎಫೆಕ್ಟ್ : ಮೋರಾ ಚಂಡಮಾರತದ ಪ್ರಭಾವದಿಂದ ಈಶಾನ್ಯ ಭಾರತದ ತ್ರಿಪುರ, ಮಿಜೋರಾಮ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಲ್ಲಿ ಎರಡು ದಿನ ಮೊದಲೇ ಮುಂಗಾರು ಮಳೆ ಕಂಡು ಬಂದಿದೆ. ಬಂಗಾಲಕೊಳ್ಳಿ ಹಾದು ಬಾಂಗ್ಲಾದೇಶಕ್ಕೆ ಚಂಡಮಾರತ ಅಪ್ಪಳಿಸಿದೆ.











Click it and Unblock the Notifications