Monsoon Updates: ದೇಶದ ಶೇ. 80ರಷ್ಟು ಭಾಗಕ್ಕೆ ಮಳೆ, ಕೆಲವೆಡೆ ಪ್ರವಾಹ ಸೃಷ್ಟಿ ಸಾಧ್ಯತೆ: ಐಎಂಡಿ

ನವದೆಹಲಿ, ಜೂನ್ 27: ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮವಾಗಿ ಮುಂಗಾರು ಮಳೆ ಪ್ರಸ್ತುತದಲ್ಲಿ ಎಲ್ಲ ಕಡೆ ಪಸರಿಸಿದೆ. ಸದ್ಯದವರೆಗೆ ಮುಂಗಾರು ಭಾರತದ ಶೇಕಡಾ 80 ರಷ್ಟು ವ್ಯಾಪ್ತಿಯನ್ನು ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಾ.ನರೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿತ್ತು. ಇದು ದೇಶಾದ್ಯಂತ ಮುಂಗಾರು ವಿಸ್ತರಣೆಗೆ ಪೂರಕವಾಗಿದೆ. ಇದರಿಂದ ದೇಶದ ವಿವಿಧ ಭಾಗಗಳಿಗೆ ಮುಂಗಾರು ವೇಗವಾಗಿ ತಲುಪಿದೆ. ಕಳೆದ ಭಾನುವಾರ ಒಂದೇ ದಿನ ದೆಹಲಿ ಮತ್ತು ಮುಂಬೈ ನಲ್ಲಿ ಮುಂಗಾರು ಸುರಿದಿದೆ. ಅಲ್ಲಿ ನಿತ್ಯವು ಬೆಳಗ್ಗೆ ಮಳೆ ಹಿಡಿದುಕೊಂಡಿದೆ. ಇವೆರಡು ನಗರಗಳಿಗೆ ಒಂದೇ ದಿನದಲ್ಲಿ ಮುಂಗಾರು ಸಕ್ರಿಯವಾಗಿರುವುದು 62 ವರ್ಷಗಳ ನಂತರ ಇದೆ ಮೊದಲು ಎಂದು ಅವರು ವಿವರಿಸಿದರು.

 IMD Discovered In New Pattern

ಮುಂಗಾರು ಮಳೆ ಮುಂಬೈ ನಗರದಲ್ಲಿ ಸಕ್ರಿಯಗೊಂಡು ಮಳೆ ಸುರಿಸುವುದು ಸಾಮಾನ್ಯವಾಗಿ ಜೂನ್ 11 ಹಾಗೂ ದೆಹಲಿಯಲ್ಲಿ ಜೂನ್ 27 ರಂದು ಸಕ್ರಿಯಗೊಳ್ಳುತ್ತದೆ. ಆದರೆ ಈ ಎರಡು ಮೆಟ್ರೋ ನಗರಗಳಲ್ಲಿ ಒಂದೇ ದಿನ ಮಳೆ ಚುರುಕುಗೊಳ್ಳುವ ಮೂಲಕ ಸುದ್ದಿಯಾಗಿದೆ. ಇದಕ್ಕೆ ಹವಾಮಾನ ಬದಲಾವಣೆಗಳು ಕಾರಣ ಅಂತಲೂ ಹೇಳಿತಾದರೂ ಸಹ ಈ ಹಿಂದಿನ 30 ರಿಂದ 40 ವರ್ಷಗಳ ಮಳೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಡಾ ನರೇಶ್ ಕುಮಾರ್ ಹೇಳಿದರು.

ಮುಂಗಾರು ಭಿನ್ನ: ಹೊಸ ಮಾದರಿಯಲ್ಲಿ ವಿವಿಧ ಭಾಗ ತಲುಪಿದ

ಸಾಮಾನ್ಯವಾಗಿ ಮುಂಗಾರು ಮಳೆ ಕಡಿಮೆ ಒತ್ತಡದ ಪ್ರದೇಶದಿಂದ ಸಕ್ರಿಯಗೊಳ್ಳುತ್ತದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡದ ವಲಯದಿಂದ ಹೆಚ್ಚಿನ ವೇಗ ಪಡೆಯುವ ಮುಂಗಾರು ಮಳೆ ದೇಶದ ವಿವಿಧ ಭಾಗಗಳನ್ನು ತಲುಪಿದೆ. ಈ ಕಾರಣದಿಂದಲೇ ದೇಶದ ಶೇಕಡಾ 80ರಷ್ಟು ಪ್ರದೇಶಗಳಲ್ಲಿ ಮಳೆ ದಾಖಲಾಗಿದೆ ಎಂದರು.

ಅರಬ್ಬಿ ಸಮುದ್ರದಿಂದ ಪಶ್ಚಿಮ ಮಾರುತಗಳನ್ನು ತಳ್ಳುತ್ತವೆ. ಈ ಪ್ರಕ್ರಿಯೆ ಮುಂಗಾರಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತದೆ. ಮುಂಗಾರು ಮಹಾರಾಷ್ಟ್ರ ರಾಜ್ಯದಲ್ಲಿ ಸಕ್ರಿಯಗೊಂಡಾಗ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಾತಾವರಣ ನಿರ್ಮಾನವಾಗಿತ್ತು.

 IMD Discovered In New Pattern

ಈ ಕಾರಣಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ. ಅದೇ ಸಮಯದಲ್ಲಿ ದೆಹಲಿ ಸೇರಿದಂತೆ ವಾಯುವ್ಯ ಭಾರತದ ಕಡೆಗೆ ಗಾಳಿ ಬೀಸುವಿಕೆ ಪ್ರಯಾಣ ಹೆಚ್ಚಾಗಿದ್ದರಿಂದ ಈ ಎರಡು ಪ್ರದೇಶಗಳಲ್ಲಿ ಮಳೆ ಅಬ್ಬರಿಸಿತು ಎಂದು ಡಾ ಕುಮಾರ್ ಹೇಳಿದರು.

ವಿವಿಧ ನಗರಗಳಲ್ಲೂ ಪ್ರವಾಹದ ಸ್ಥಿತಿ?

ದೇಶದ ಅಸ್ಸಾಂ ರಾಜ್ಯದಲ್ಲಿ ಮೋಡಗಳ ಅಷ್ಟಾಗಿ ಕಂಡು ಬಂದಿಲ್ಲ. ಹೀಗಾಗಿ ಅಲ್ಲಿ ಗಮನಾರ್ಹ ಮಳೆ ನಿರೀಕ್ಷೆಯ ವಾತಾವರಣ ಇಲ್ಲ. ರುದ್ರಪ್ರಯಾಗ ಮತ್ತು ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ 12 ಸೆಂಟಿ ಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಕಳೆದೆರಡು ದಿನಗಳಿಂದ ನೈಋತ್ಯ ಮಾನ್ಸೂನ್ ಮಳೆಯನ್ನು ತಂದ ನಂತರ ದೇಶದ ಹಲವಾರು ನಗರಗಳು ಸಹ ಭಾರೀ ಮಳೆ ಮತ್ತು ಪ್ರವಾಹದಂತಹ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿವೆ ಎಂದು ಐಎಂಡಿ ತಿಳಿಸಿದೆ.

ಉತ್ತರ ಭಾಗದ ಪಂಜಾಬ್ ಮತ್ತು ಹರಿಯಾಣದಲ್ಲಿ ಮಂಗಳವಾರ ಭಾರೀ ಮಳೆ, ಗುಡುಗು ಸಹಿತ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೆರಡು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ. 200 ಕ್ಕೂ ಹೆಚ್ಚು ಜನರು, ಅವರಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಈ ನೆರೆ ಪ್ರವಾಹದಲ್ಲಿ ಅನೇಕ ವಾಹನಗಳು ಕೊಚ್ಚಿಹೋಗಿವೆ. ಅಲ್ಲಿ ನ ಜನಜೀವನ ಸಂಕಷ್ಟದಲ್ಲಿ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+