• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಟ್ರೋ ಸಂಚಾರ; ಬರಲಿದೆ ಪ್ರತ್ಯೇಕ ಮಾರ್ಗಸೂಚಿ

|

ನವದೆಹಲಿ, ಸೆಪ್ಟೆಂಬರ್ 01: ಅನ್‌ ಲಾಕ್ 4.0 ಮಾರ್ಗಸೂಚಿಯಲ್ಲಿ ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ರೈಲು ಸಂಚಾರದ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಮೆಟ್ರೋ ನಿಗಮಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳ ಜೊತೆ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಸಭೆ ನಡೆಸಿದರು. ಮೆಟ್ರೋ ರೈಲು ಸೇವೆ ಆರಂಭಿಸುವ ಕುರಿತು ಚರ್ಚೆ ನಡೆಸಿದರು.

ಅನ್‌ ಲಾಕ್ ಮಾರ್ಗಸೂಚಿ 4.0; ಇನ್ನು ಮುಂದೆ ಲಾಕ್ ಡೌನ್ ಇಲ್ಲ

"ಮೆಟ್ರೋ ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಶೀಘ್ರದಲ್ಲಿಯೇ ರಾಜ್ಯಗಳಿಗೆ ಕಳಿಸಲಾಗುತ್ತದೆ" ಎಂದು ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ಅನ್ ಲಾಕ್ ಮಾರ್ಗಸೂಚಿ; ಮೆಟ್ರೋ ಸಂಚಾರವಿಲ್ಲ

ಕೇಂದ್ರ ಗೃಹ ಇಲಾಖೆ ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟಿಸುವಾಗ ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಿವೆ. ಮೆಟ್ರೋ ನಿಗಮಗಳು ಮಾರ್ಗಸೂಚಿಗಾಗಿ ಕಾಯುತ್ತಿವೆ.

ನಮ್ಮ ಮೆಟ್ರೋ ಸಂಚಾರ; ಪ್ರಯಾಣಿಕರಿಗೆ ಸೂಚನೆ

ಪ್ರಯಾಣಿಕರು ಕಡ್ಡಾಯವಾಗಿ ಕಾರ್ಡ್ ಬಳಕೆ ಮಾಡಬೇಕು. ರೈಲಿನಲ್ಲಿ ಕಡಿಮೆ ಜನರು ಪ್ರಯಾಣ ಮಾಡಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳು, "ರೈಲು ಓಡಿಸಲು ಸಾವು ಸಿದ್ಧರಾಗಿದ್ದೇವೆ. ಮಾರ್ಗಸೂಚಿ ಪ್ರಕಟಣೆಗಾಗಿ ನಾವು ಕಾಯುತ್ತಿದ್ದೇವೆ" ಎಂದು ಹೇಳಿಕೆ ನೀಡಿದ್ದರು.

English summary
Metro rails are allowed to operate across India from 7 September 7, 2020. SOP will be finalized and shared soon said secretary of ministry of housing & urban affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X