ಪ್ಯಾನ್ ಆಯ್ತು, ಸದ್ಯದಲ್ಲೇ ಡ್ರೈವಿಂಗ್ ಲೈಸನ್ಸ್ ಗೂ ಆಧಾರ್ ಲಿಂಕ್?

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 15: ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪಡೆದವರು ತಮ್ಮ ಪರವಾನಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ತಿಳಿಸಿದ್ದಾರೆ.

ಟಿಕೆಟ್ ಬುಕ್ಕಿಂಗ್ ವೇಳೆ ಎಂ-ಆಧಾರ್ ಗೆ ಮಾನ್ಯತೆ: ರೈಲ್ವೆ ಇಲಾಖೆ

ಶುಕ್ರವಾರ ನಡೆದ ಹರ್ಯಾಣ ಸಮಿತ್ 2017ರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು. ಈ ಬಗ್ಗೆ ಸದ್ಯದಲ್ಲೇ ತಾವು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

'Soon, Aadhaar to be linked with driver's licence,' says Union minister RS Prasad

ಆದರೆ, ಈ ನಿಯಮವನ್ನು ಯಾವಾಗ ಜಾರಿಗೊಳಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ ಎಂಬುದನ್ನು ರವಿಶಂಕರ್ ಪ್ರಸಾದ್ ತಿಳಿಸಲಿಲ್ಲ. ಇತ್ತೀಚೆಗೆ, ಆಧಾರ್ ಲಿಂಕ್ ಮಾಡುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಬಗ್ಗೆ ಸೂಕ್ತವಾಗಿ ಚರ್ಚಿಸಿ, ಸಮಂಜಸ ನಿರ್ಧಾರ ಕೈಗೊಳ್ಳುವುದಾಗಿ ರವಿಶಂಕರ್ ಪ್ರಸಾದ್ ತಿಳಿಸಿದರು.

ಎನ್ಆರ್ ಐ ಮದುವೆ ನೊಂದಾವಣಿಗೆ ಆಧಾರ್ ಕಡ್ಡಾಯ?

ಈ ವರ್ಷದ ನವೆಂಬರ್ ತಿಂಗಳನಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವಂತೆ ಸಚಿವಾಲಯದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soon, Aadhaar will be linked to one's driver's licence, said Union minister Ravi Shankar Prasad on September 15, 2017. The minister didn't give a time frame to link the unique identification number with driver's licences.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ