ಮಾಯಾವತಿ ನಂತರ ಲಾಲೂ ರ್ಯಾಲಿಗೆ ಗೈರಾಗುತ್ತಿರುವ ಸೋನಿಯಾ ಗಾಂಧಿ
ಪಾಟ್ನಾ, ಆಗಸ್ಟ್ 24: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಿಜೆಪಿ ವಿರುದ್ಧ ಹಮ್ಮಿಕೊಂಡಿರುವ 'ದೇಶ್ ಬಜಾವೋ, ಭಾಜ್ಪಾ ಭಾಗೋ' ರ್ಯಾಲಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಗೈರಾಗಲಿದ್ದಾರೆ.
ಇತ್ತೀಚೆಗಷ್ಟೇ ಬಿಎಸ್ ಪಿ ನಾಯಕಿ ಮಾಯಾವತಿ ಸಹ ರ್ಯಾಲಿಯಲ್ಲಿ ಭಾಗವಹಿಸುವುದಿಲ್ಲ, ಬದಲಾಗಿ ಬಿಎಸ್ ಪಿ ಹಿರಿಯ ನಾಯಕ ಸತೀಶ್ ಮಿಶ್ರಾ ಅವರು ರ್ಯಾಲಿಯಲ್ಲಿ ಹಾಜರಿರುತ್ತಾರೆ ಎಂದು ಲಾಲೂ ಹೇಳಿದ್ದರು. ಇದೀಗ ಸೋನಿಯಾ ಗಾಂಧಿಯವರು ಸಹ ರ್ಯಾಲಿಯಲ್ಲಿ ಭಾಗವಹಿಸುವುದಿಲ್ಲ, ಆದರೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಲಾಲೂ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜೆಡಿಯು ನ ಬಂಡಾಯ ನಾಯಕ ಶರದ್ ಯಾದವ್ ಸಹ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಆಗಸ್ಟ್ 27 ರಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ರ್ಯಾಲಿ ನಡೆಯಲಿದೆ.












Click it and Unblock the Notifications