ಸೋನಿಯಾಜಿ, ಸ್ವಾರ್ಥಕ್ಕಾಗಿ ಹಣ, ಸಮಯ ವ್ಯಯಿಸಬೇಡಿ!
ಬೆಂಗಳೂರು, ಡಿಸೆಂಬರ್ 15 : ಸಂಸತ್ತಿನ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ. ನಾವು ಕಷ್ಟಪಟ್ಟು ದುಡಿದ ಹಣವನ್ನು ಈ ರೀತಿ ಪೋಲು ಮಾಡಲು ಯಾವ ರಾಜಕಾರಣಿಗೂ ಹಕ್ಕಿಲ್ಲ. ತಮ್ಮ ಸ್ವಾರ್ಥಕ್ಕಾಗಿ ದೇಶದ ಸಂಪತ್ತನ್ನು, ಶಕ್ತಿಯನ್ನು ಈ ರೀತಿ ಬಳಸಿಕೊಳ್ಳಲು ಯಾವ ನಾಗರಿಕನಿಗೂ ಹಕ್ಕಿಲ್ಲ.
ಆದರೆ, ಇಂದು ಸಂಸತ್ತಿನಲ್ಲಿ ನಡೆಯುತ್ತಿರುವುದೇನು? ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪಕ್ಷ ಸಂಸತ್ ಅಧಿವೇಶನದಲ್ಲಿ ಎಬ್ಬಿಸಿರುವ ಗದ್ದಲ ಭಾರೀ ಟೀಕೆಗೆ ಗುರಿಯಾಗಿದೆ.
ಸೋನಿಯಾ ಅವರೆ, ದಯವಿಟ್ಟು ನಿಲ್ಲಿಸಿ, ಸಂಸತ್ತಿಗೆ ಮರ್ಯಾದೆ ನೀಡಿ ಎಂದು ಜ್ಯೋತಿ ನಾಯರ್ ಎಂಬುವವರು ಚೇಂಜ್.ಆರ್ಗ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಐವತ್ತು ಸಾವಿರಕ್ಕೂ ಹೆಚ್ಚು ಜನರಿಂದ ಬೆಂಬಲ ಪಡೆದಿರುವ ಆ ಅರ್ಜಿಯಲ್ಲಿ ಏನಿದೆ ಮುಂದೆ ಓದಿರಿ... [ಆತ್ಮಚರಿತ್ರೆಯಲ್ಲಿ ಸೋನಿಯಾ ವಿರುದ್ಧ ಪವಾರ್ ಬಾಂಬ್!]

ಪ್ರೀತಿಯ ಮಿಸಸ್ ಗಾಂಧಿ,
ನಮಗೆ ತುಂಬಾ ನೋವಾಗಿದೆ ಮತ್ತು ಆಘಾತವಾಗಿದೆ.
ಇದು ನಮ್ಮ ರಾಷ್ಟ್ರ ಮತ್ತು ಸಂಸತ್ತು ಸರಾಗವಾಗಿ ಕಾರ್ಯನಿರ್ವಹಿಸಬೇಕು ಎಂಬು ಇಚ್ಛಿಸುತ್ತೇವೆ. ನಮ್ಮ ತಂದೆತಾಯಿ, ಸ್ನೇಹಿತರು, ಬಂಧುಗಳು ಕಷ್ಟಪಟ್ಟು ದುಡಿದ ಹಣದಿಂದಲೇ ಸರಕಾರದ ಆಡಳಿತ ಯಂತ್ರ ಕೆಲಸ ಮಾಡುತ್ತದೆ. ತಮ್ಮ ಮಕ್ಕಳು ಸುರಕ್ಷಿತವಾಗಿರಲಿ, ಚೆನ್ನಾಗಿ ಓದಲಿ, ತಿನ್ನಲಿ ಎಂಬ ಆಶಯದಿಂದ ಮೈಮುರಿ ದುಡಿದಿರುತ್ತಾರೆ. ಅವರು ದುಡಿದ ಹಣ ಈರೀತಿ ವ್ಯರ್ಥವಾಗಬಾರದು.
ನಿಮಗೆ ಸರಕಾರದ ನಿಲುವಿನ ಬಗ್ಗೆ ಸಹಮತವಿಲ್ಲದಿದ್ದರೆ ಅದಕ್ಕೆ ಸಕಾರಣ ನೀಡಿ, ತರ್ಕಬದ್ಧವಾಗಿ ಅವರನ್ನು ಸೋಲಿಸಿ. ಆದರೆ, ಕಿರಚುತ್ತ, ಅರಚುತ್ತ ಅಲ್ಲ. ನಮ್ಮದು ಮಹಾನ್ ದೇಶ. ಬೇಕಿದ್ದರೆ ಮತ್ತೆ ಮತ ಹಾಕಿದವರ ಬಳಿ ಹೋಗಿ. ನೀವು ಏನನ್ನು ನಂಬಿದ್ದೀರೋ ಅದನ್ನು ಅವರ ಬಳಿ ಹೇಳಿ. ಸರಕಾರ ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅವರ ಬಳಿ ಸಾರಿರಿ. [ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್ VS ಅರುಣ್ ಜೇಟ್ಲಿ]
ಆದರೆ, ಸಂಸತ್ತನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ವಿನಾಕಾರಣ ಸರಕಾರದ ದಿಕ್ಕು ತಪ್ಪಿಸಲು, ನಮ್ಮ ಹಣವನ್ನು ದುಂದು ಮಾಡಲು ಯಾರಿಗೂ ಹಕ್ಕಿಲ್ಲ. ನಮ್ಮ ದೇಶ ಗಳಿಸಿದ ಕೀರ್ತಿಯನ್ನು ಈರೀತಿ ಹಾಳುಮಾಡಲು ಯಾವ ರಾಜಕಾರಣಿಗೂ ಅಧಿಕಾರವಿಲ್ಲ. ಇಷ್ಟು ಸ್ವಾರ್ಥಿಯಾಗಲು ಯಾವ ಪುಢಾರಿಗೂ ಹಕ್ಕಿಲ್ಲ.
ಕೆಟ್ಟುಕೆರಹಿಡಿದಿರುವ ರಾಜಕೀಯದಿಂದ ಹೊರಬಂದು ನಿಮ್ಮಲ್ಲಿರುವ ನಿಜವಾದ ನಾಯಕತ್ವವನ್ನು ದೇಶಕ್ಕೆ ತೋರಿಸಿ. [ಖರ್ಗೆಯವರೇ, ನೀವಾದರೂ ನಿಮ್ಮ ಪಕ್ಷದವರಿಗೆ ಬುದ್ದಿ ಹೇಳಬಾರದೇ?]












Click it and Unblock the Notifications