Ladakh Protest: ಲಡಾಖ್ ನೆಲದಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿದ್ದ ವ್ಯಕ್ತಿ ಅರೆಸ್ಟ್!
ಭಾರತದ ಗಡಿ ಪ್ರದೇಶ ಸೂಕ್ಷ್ಮವಾಗಿದೆ, ಇದಕ್ಕೆ ಕಾರಣವಾಗಿದ್ದು ಲಡಾಖ್ ನೆಲದಲ್ಲಿ ಎರಡು ದಿನದ ಹಿಂದೆ ನಡೆದಿದ್ದ ಭೀಕರ ಪ್ರತಿಭಟನೆ. ಭಾರತದ ನೆರೆಯ ದೇಶ ನೇಪಾಳ & ಬಾಂಗ್ಲಾದೇಶ ಸೇರಿದಂತೆ ಶ್ರೀಲಂಕಾ ನೆಲದಲ್ಲಿ ಭಾರಿ ದೊಡ್ಡ ದೊಡ್ಡ ಪ್ರತಿಭಟನೆ ನಡೆದು ಹಿಂಸಾಚಾರ ಭುಗಿಲೆದ್ದಿತ್ತು. ಹೀಗೆ ಭಾರಿ ದೊಡ್ಡ ಹೋರಾಟಗಳ ನಂತರ ಈ ದೇಶಗಳು ಈ ಸೈಲೆಂಟ್ ಆಗಿವೆ, ಆದರೆ ಇದೇ ರೀತಿಯಾಗಿ ಭಾರತದಲ್ಲಿ ಹಿಂಸೆಯ ಕಿಡಿ ಹೊತ್ತಿಸುವ ಕುತಂತ್ರ ನಡೆದಿರುವ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಭಾರತದ ಗಡಿಯಲ್ಲಿ ಹೀಗೆ ದೊಡ್ಡ ಗಲಾಟೆ ನಡೆದಿತ್ತು.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಸೇರಿದಂತೆ 6ನೇ ಪರಿಚ್ಛೇದದ ಅಡಿ ಸೇರಿಸಲು ಒತ್ತಾಯಿಸಿ ದಿಢೀರ್ ಅಂತಾ ಪ್ರತಿಭಟನೆ ಆರಂಭವಾಗಿದ್ದವು. ಹೀಗೆ ಶುರುವಾದ ಪ್ರತಿಭಟನೆ ಹಿಂಸೆಯ ಸ್ವರೂಪ ತಾಳಿ ಭಾರಿ ದೊಡ್ಡ ದುರ್ಘಟನೆಗಳು ನಡೆದಿದ್ದವು. ಕಂಡ ಕಂಡಲ್ಲಿ ಬೆಂಕಿ ಹಚ್ಚಿದ್ದ ಉದ್ರಿಕ್ತರ ಗುಂಪು, ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು. ಹೀಗಾಗಿ ಲಡಾಖ್ ಕಾದ ಕಬ್ಬಿಣದಂತೆ ಆಗಿತ್ತು, ಭಾರತದ ಗಡಿ ಭಾಗ ಸೂಕ್ಷ್ಮ ಪರಿಸ್ಥಿತಿಗೆ ಸಿಲುಕಿತ್ತು. ಆದರೆ ಇದೀಗ ಈ ಅಲ್ಲೋಲ ಕಲ್ಲೋಲಕ್ಕೆ ಕಾರಣವಾದ ವ್ಯಕ್ತಿಯನ್ನೇ ಅರೆಸ್ಟ್ ಮಾಡಿದೆ ಎನ್‌ಎಸ್‌ಎ.

ಖ್ಯಾತ ಪರಿಸರವಾದಿ ವಾಂಗ್ಚುಕ್ ವಶಕ್ಕೆ
ಹೌದು, ಲಡಾಖ್ ಭಾರತದ ತುತ್ತ ತುದಿಯಲ್ಲಿ ಇರುವ ಪ್ರದೇಶವಾಗಿದೆ. ಹೀಗಾಗಿ ಗಡಿ ಭಾಗದಲ್ಲಿರುವ ಈ ಪ್ರದೇಶ ಅತ್ಯಂತ ಸೂಕ್ಷ್ಮ ವಲಯವೂ ಹೌದು. ಹೀಗಿದ್ದಾಗ ದಿಢೀರ್ ಅಂತಾ ಪ್ರತಿಭಟನೆಗಳು ಶುರು ಆಗಿದ್ದು ಸಹಜವಾಗಿ ಆತಂಕ ಹೆಚ್ಚು ಮಾಡಿತ್ತು, ಅಲ್ಲದೆ ಲಡಾಖ್ ಬೆಳವಣಿಗೆ ಬಗ್ಗೆ ಕೇಂದ್ರ ಸರ್ಕಾರ ಕೂಡ ಸೂಕ್ಷ್ಮವಾಗಿ ಗಮನ ಹರಿಸಿತ್ತು. ಹೀಗಿದ್ದಾಗ ದಿಢೀರ್ ಅಂತಾ ಇವತ್ತು ನೂರಾರು ಜನ ಬೀದಿಗಿಳಿದು ಪ್ರತಿಭಟಿಸುವ ನೆಪದಲ್ಲಿ ಹಿಂಸಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಲಡಾಖ್ ಭಾಗದ ಲೇಹ್ ಬಳಿ ಬಿಜೆಪಿ ಕಚೇರಿ ಮೇಲೆ ಕೂಡ ದಾಳಿ ಮಾಡಿರುವ ಆರೋಪ ಮಾಡಲಾಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಅರೆಸ್ಟ್ ಆಗಿದ್ದು, ಎನ್‌ಎಸ್‌ಎ ಇದೀಗ ವಿಚಾರಣೆ ನಡೆಸುತ್ತಿದೆ.
ಭಾರತದ ಶತ್ರು ರಾಷ್ಟ್ರಗಳ ಕುತಂತ್ರ?
ಒಟ್ನಲ್ಲಿ ಲಡಾಖ್ ನೆಲದಲ್ಲಿ ಸಂಭವಿಸಿರುವ ಘಟನೆ ಕುರಿತು ಹಲವು ರೀತಿ ಅನುಮಾನ ಕಾಡುತ್ತಿದೆ, ಹೀಗಾಗಿ ಕೇಂದ್ರ ಸರ್ಕಾರ ಕೂಡ ಅತ್ಯಂತ ಸೂಕ್ಷ್ಮ ಹೆಜ್ಜೆ ಇಟ್ಟಿದೆ. ಭಾರತದ ಶತ್ರು ದೇಶಗಳು ನಮ್ಮ ಆಂತರಿಕ ವಿಚಾರದಲ್ಲಿ ಕೈಹಾಕಿ ಹೀಗೆ ಆಟ ಆಡಿದ್ದವಾ? ಅನ್ನೋ ಅನುಮಾನದ ನಡುವೆ ಸಾಕಷ್ಟು ದೊಡ್ಡ ಮಟ್ಟದ ಬೆಳವಣಿಗೆಗೆ ಇದೀಗ ಲಡಾಖ್ ಸಾಕ್ಷಿಯಾಗಿದೆ. ಹೀಗಾಗಿ, ಪರಿಸರವಾದಿ ಸೋನಮ್ ವಾಂಗ್ಚುಕ್ ವಿಚಾರಣೆ ನಡೆಯುತ್ತಿದ್ದು ಶೀಘ್ರದಲ್ಲೇ ಎಲ್ಲಾ ಸತ್ಯ ಹೊರ ಬೀಳುವ ನಿರೀಕ್ಷೆ ಇದೆ.












Click it and Unblock the Notifications