ಮುದ್ದಿನ ಮಗನಿಗೆ ಸೋನಾಲಿ ಬೇಂದ್ರೆ ಬರೆದ ಕಣ್ಣೀರುಕ್ಕಿಸುವ ಪತ್ರ
Recommended Video

ನವದೆಹಲಿ, ಆಗಸ್ಟ್ 11: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಮಗ ರಣ್ವೀರ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೆದ ಪತ್ರವೊಂದು ಅವರ ಅಭಿಮಾನಿಗಳ ಕಣ್ಣಲ್ಲಿ ನೀರುಕ್ಕಿಸಿದೆ.
ಇಂದು ರಣ್ವೀರ್ ತನ್ನ 13 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಆದರೆ ಸೋನಾಲಿ ಬೇಂದ್ರೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ಮಗನ ಜನ್ಮದಿನದಂದು ಅವನಿಂದ ದೂರವಿರುವ ಸೋನಾಲಿ ಭಾವುಕರಾಗಿ ಪತ್ರ ಬರೆದು ಮಗನಿಗೆ 'ಐ ಮಿಸ್ ಯು ಟೆರಿಬಲಿ' ಎಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ 'ಪ್ರೀತ್ಸೆ' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದ ಸೋನಾಲಿ ಬೇಂದ್ರೆ, ಮೆಟಾಸ್ಟಿಕ್ ಕ್ಯಾನ್ಸರ್(ದೇಹದ ವಿವಿಧ ಭಾಗಗಳಿಗೆ ಹರಡುವ ಕ್ಯಾನ್ಸರ್) ನಿಂದ ಬಳಲುತ್ತಿದ್ದಾರೆ.

"ಕ್ಯಾನ್ಸರ್ ಇದೆ ಎಂಬುದು ತಿಳಿಯುತ್ತಿದ್ದಂತೆಯೇ ಅದನ್ನು ಮಗನಿಗೆ ತಿಳಿಸುವುದೋ ಬೇಡವೋ ಎಂಬ ಗೊಂದಲ ಶುರುವಾಯಿತು. ಆದರೆ ಮುಚ್ಚಿಡುವುದು ಸರಿಯಲ್ಲ ಅನ್ನಿಸಿತು. ಅವನಿಗೆ ಈ ವಿಷಯ ತಿಳಿಸಿದಾಗ ಆತ ಅದನ್ನು ಎಷ್ಟು ಪ್ರಬುದ್ಧವಾಗಿ ಸ್ವೀಕರಿಸಿದ. ನನ್ನನ್ನು ಸಂತೈಸಿದ, ನನ್ನಲ್ಲಿ ಧೈರ್ಯ ತುಂಬಿದ. ಅವನು ಬದುಕನ್ನು ಎಷ್ಟು ಧನಾತ್ಮಕವಾಗಿ ನೋಡುತ್ತಾನಲ್ಲ ಎಂದು ಆಗಲೇ ನನಗೆ ಅನ್ನಿಸಿದ್ದು..." ಹೀಗೇ ಸಾಗುತ್ತದೆ ಸೋನಾಲಿ ಬೇಂದ್ರೆ ಅವರ ಪತ್ರ.
A post shared by Sonali Bendre (@iamsonalibendre) on
"ರನ್ವೀರ್, ನನ್ನ ಮಗ, ನನ್ನ ಚಂದ್ರ, ನನ್ನ ನಕ್ಷತ್ರ, ನನ್ನ ಆಕಾಶ... ನಾನು ಉತ್ಪ್ರೇಕ್ಷೆಯಿಂದ ಹೇಳುತ್ತಿದ್ದೇನೆ ಅನ್ನಿಸಬಹುದು. ಆದರೆ ನಿನ್ನ ಬಗೆಗಿನ ನನ್ನ ಪ್ರೀತಿಯನ್ನು ಅಭಿವ್ಯಕ್ತಿಪಡಿಸುವುದಕ್ಕೆ ತಿಳಿಯುತ್ತಿಲ್ಲ. ನೀನಂದ್ರೆ ನನಗೆಷ್ಟು ಹೆಮ್ಮೆ ಎಂಬುದನ್ನು ನಾನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ನಿನ್ನ ವಿಡಂಬನೆ, ಹಾಸ್ಯ, ಅಕ್ಕರೆ, ಜೊತೆಗೆ ನಿನ್ನ ತುಂಟತನ ಎಲ್ಲವೂ ನನಗಿಷ್ಟ. ಹುಟ್ಟು ಹಬ್ಬದ ಶುಭಾಶಯಗಳು ಮಗನೇ. ಇದೇ ಮೊದಲ ಬಾರಿಗೆ ನಿನ್ನ ಜನ್ಮದಿನದಂದು ನಾವಿಬ್ಬರೂ ಜೊತೆಯಲ್ಲಿಲ್ಲ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನಗೊಂದು ಅಪ್ಪುಗೆ" ಎಮದು ಬೇಂದ್ರೆ ಬರೆದಿದ್ದಾರೆ.
A post shared by Sonali Bendre (@iamsonalibendre) on
43 ವರ್ಷ ವಯಸ್ಸಿನ ಸೋನಾಲಿ ಬೇಂದ್ರೆ, ತಮಗೆ ಕ್ಯಾನ್ಸರ್ ಇರುವ ವಿಷಯ ತಿಳಿಯುತ್ತಲೇ ವಿಚಲಿತರಾಗದೆ, ಇಚ್ಛಾಶಕ್ತಿಯ ಬಲದಿಂದ ಅದರ ವಿರುದ್ಧ ಹೋರಾಟ ನಡೆಸುವ ದೃಢ ನಿಶ್ಚಯಕ್ಕೆ ಬಂದಿದ್ದಾರೆ.












Click it and Unblock the Notifications