ಸಂಪುಟದಲ್ಲಿ ಸುಷ್ಮಾ ಇಲ್ಲ, ಆದರೆ ಕಚಗುಳಿ ಇಟ್ಟ ಆ ಟ್ವೀಟ್ಸ್ ಮರೆಯೋದು ಹೇಗೆ?
ಕೆಲವರ ಅನುಪಸ್ಥಿತಿ ನಿರ್ವಾತವನ್ನು ಸೃಷ್ಟಿಸುತ್ತದೆ. ಛೆ, ಅವರಿರಬೇಕಿತ್ತು ಎಂದು ಸಾವಿರ ಬಾರಿ ಮನಸ್ಸು ಹಲುಬುತ್ತದೆ. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಾವು 2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಾಗ ಮನಸ್ಸನ್ನು ಅಷ್ಟೊಂದು ಕಾಡಿರದ ವಿಷಾದ ಭಾವ, ಸಚಿವ ಸಂಪುಟದಲ್ಲಿ ಅವರಿಲ್ಲ ಎನ್ನುವಾಗ ಇನ್ನಿಲ್ಲದಷ್ಟು ಕಾಡುತ್ತಿದೆ!
ಆದರೆ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದಾಗ ಬೇರೆ ಬೇರೆ ಸಂದರ್ಭದಲ್ಲಿ ಮಾಡಿದ ಟ್ವೀಟ್ ಗಳು ಮಾತ್ರ ಎಂದಿಗೂ ಮರೆಯದಂಥ ಸ್ಥಾನ ಪಡೆದಿವೆ. ತಮ್ಮ ಅವಧಿಯಲ್ಲಿ 'ಅತ್ಯಂತ ಹಾಸ್ಯ ಪ್ರಜ್ಞೆಯ ಸಚಿವೆ' ಎಂಬ ಹೆಗ್ಗಳಿಕೆ ಗಳಿಸಿದ್ದ ಸುಷ್ಮಾ ಸ್ವರಾಜ್ ಹಾಸ್ಯ, ಮೊನಚನ್ನು ಬೆರೆಸಿ ಮಾಡುತ್ತಿದ್ದ ಟ್ವೀಟ್ ಗಳು ಅವರ ವ್ಯಕ್ತಿತ್ವದ ಘನತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಆರೋಗ್ಯದ ಸಮಸ್ಯೆ, ವಯಸ್ಸಿನ ಸಮಸ್ಯೆ ನೀಡಿ ಅವರು ಈ ಬಾರಿ ಸಂಸತ್ತಿನಿಂದ ದೂರ ಉಳಿದರೂ, ಕಳೆದ ಐದು ವರ್ಷಗಳಲ್ಲಿ ವಿದೇಶಾಂಗ ಸಚಿವೆಯಾಗಿ ಅವರು ಬೆಳೆಸಿಕೊಂಡ ವರ್ಚಸ್ವೀ ವ್ಯಕ್ತಿತ್ವ ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗದಂಥದ್ದು. ಸಾಮಾಜಿಕ ಜಾಲತಾಣವನ್ನು ಎಂಥ ಪ್ರಭಾವಶಾಲಿ ಸಾಧನವನ್ನಾಗಿ ಬಳಸಿಕೊಳ್ಳಬಹುದು ಎಂಬುದನ್ನು ಸಮರ್ಥವಾಗಿ ತೋರಿಸಿಕೊಟ್ಟಿದ್ದೇ ಸುಷ್ಮಾ ಸ್ವರಾಜ್.
ಕೊಟ್ಟಕೊನೆಯ ವ್ಯಕ್ತಿಗೂ ಧ್ವನಿ ಇದೆ ಎಂಬುದನ್ನು ತೋರಿಸಿಕೊಟ್ಟವರು. ಸಾಮಾನ್ಯ ಮನುಷ್ಯನೂ ಆಯಕಟ್ಟಿನ ಹುದ್ದೆಯ ಸಚಿವರೊಂದಿಗೆ ಮಾತನಾಡುವುದಕ್ಕೆ, ತನ್ನ ಅಹವಾಲನ್ನು ತೋಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟವರು ಸುಷ್ಮಾ ಮಾ. ಅವರ ಸಂಪುಟದಿಂದ ನಿರ್ಗಮಿಸಿದ ಹೊತ್ತಲ್ಲಿ ಅವರ ಹಾಸ್ಯಪ್ರಜ್ಞೆಯ ಅಭಿವ್ಯಕ್ತಿಯಾದ ಕೆಲವು ಟ್ವೀಟ್ ಗಳು ಇಲ್ಲಿವೆ.
ಸುಷ್ಮಾ ಸ್ವರಾಜ್ ಅವರ ಟ್ವಿಟ್ಟರ್ ಖಾತೆಯನ್ನು ಅವರು ನಿರ್ವಹಿಸುವುದಿಲ್ಲ, ಯಾರೋ ಅಧಿಕಾರಿ ನಿರ್ವಹಿಸುತ್ತಾರೆ ಎಂದಿದ್ದ ವ್ಯಕ್ತಿಯೊಬ್ಬರಿಗೆ "ಇದು ನಾನೇ, ನನ್ನ ದೆವ್ವವಲ್ಲ"ಎಂದೊಮ್ಮೆ ಸುಷ್ಮಾ ಉತ್ತರಿಸಿದ್ದರು! ಅವರ ಇಂಥ ಹತ್ತಾರು ಟ್ವೀಟ್ ಗಳು ಟ್ವೀಟ್ಟರ್ ನಲ್ಲಿ ಅವರ ಫಾಲೋವರ್ ಗಳ ಸಂಖ್ಯೆಯನ್ನು 12.8 ಮಿಲಿಯನ್ ಗೆ ಏರಿಸಿವೆ.
|
ನೀವು ಮಂಗಳಗ್ರಹದಲ್ಲಿದ್ದರೂ...
ವ್ಯಕ್ತಿಯೊಬ್ಬರು ಬೇಕೆಂದೇ ಸುಷ್ಮಾ ಅವರಲ್ಲಿ, "ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕಾಪಾಡಿ" ಎಂದು ಸಂದೇಶ ಕಳಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ, "ನೀವು ಮಂಗಳಗ್ರಹದಲ್ಲಿದ್ದರೂ ನಮ್ಮ ಭಾರತೀಯ ರಾಯಭಾರಿ ಸಿಬ್ಬಂದಿ ನಿಮ್ಮ ನೆರವಿಗೆ ಅಲ್ಲಿಗೇ ಧಾವಿಸುತ್ತಾರೆ" ಎಂದು ಉತ್ತರ ನೀಡಿದ್ದರು.
|
ರೆಫ್ರಿಜಿರೇಟರ್ ರಿಪೇರಿ!
ವ್ಯಕ್ತಿಯೊಬ್ಬರು ಸುಷ್ಮಾ ಸ್ವರಾಜ್ ಅವರ ಕಾಲೆಳೆಯುವ ಸಲುವಾಗಿ, "ಮೇಡಂ, ದಯವಿಟ್ಟು ಕೆಟ್ಟು ಹೋಗಿರುವ ನಮ್ಮ ರೆಫ್ರಿಜಿರೇಟರ್ ರಿಪೇರಿಗೆ ನೆರವು ನೀಡುತ್ತೀರಾ?" ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ, "ಬ್ರದರ್ ರೆಫ್ರಿಜಿರೇಟರ್ ವಿಷಯದಲ್ಲಿ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ಕಷ್ಟದಲ್ಲಿರುವ ಮನುಷ್ಯರಿಗೆ ನೆರವು ನೀಡುವಲ್ಲಿ ನಾನು ಬ್ಯುಸಿಯಾಗಿದ್ದೇನೆ" ಎಂದಿದ್ದರು.
|
ನನಗೆ ಎಲ್ಲ ರೀತಿಯ ಇಂಗ್ಲಿಷ್ ಅರ್ಥವಾಗುತ್ತೆ!
ಮಲೇಶಿಯದಲ್ಲಿದ್ದ ತನ್ನ ಸ್ನೇಹಿತನಿಗೆ ಯಾವುದೋ ಸಮಸ್ಯೆ ಉಂಟಾದಾಗ ಸಹಾಯ ಕೇಳಲು ವ್ಯಕ್ತಿಯೊಬ್ಬರು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿದ್ದರು. ಆ ಟ್ವೀಟ್ ನಲ್ಲಿ ಕೆಲವು ವ್ಯಾಕರಣ ದೋಷಗಳಿದ್ದವು. ಅದನ್ನು ಕಂಡ ಇನ್ನೋರ್ವ ವ್ಯಕ್ತಿ, 'ಇಂಗ್ಲಿಷ್ ಬಾರದಿದ್ದರೆ ಹಿಂದಿ ಅಥವಾ ಪಂಜಾಬಿಯಲ್ಲಿ ಟ್ವೀಟ್ ಮಾಡಿ' ಎಂದು ಕಮೆಂಟ್ ಹಾಕಿದ್ದರು. ಆ ಟ್ವೀಟ್ ಗೆ ಉತ್ತರಿಸಿದ್ದ ಸುಷ್ಮಾ, "ಸಮಸ್ಯೆಯಿಲ್ಲ. ನಾನು ವಿದೇಶಾಂಗ ಸಚಿವೆಯಾದ ನಂತರ ಎಲ್ಲ ರೀತಿಯ ಇಂಗ್ಲಿಷ್ ಉಚ್ಚರಣೆ, ವ್ಯಾಕರಣವನ್ನೂ ಅರ್ಥಮಾಡಿಕೊಳ್ಳಬಲ್ಲೆ" ಎಂದಿದ್ದರು.
|
ನಾನು ಚೌಕಿದಾರಳೇ!
ಕಳೆದ ಲೋಕಸಭೆ ಚುನಾವಣೆಯಲ್ಲಿ 'ಚೌಕಿದಾರ್ ಚೋರ್ ಹೈ' ಎಂದ ರಾಹುಲ್ ಗಾಂಧಿ ಅವರಿಗೆ ಮುಖಭಂಗವಾಗುವಂತೆ ಬಿಜೆಪಿಯ ಎಲ್ಲಾ ನಾಯಕರೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಹಿಂದೆ 'ಚೌಕಿದಾರ್' ಎಂಬ ಪದವನ್ನು ಬಳಸಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರು ಸುಷ್ಮಾ ಅವರಲ್ಲಿ, "ಮೇಂಡ ನಾವು ನಿಮ್ಮನ್ನು ವಿದೇಶಾಂಗ ಸಚಿವೆ ಎಂದುಕೊಂಡಿದ್ದೆವು. ಬಿಜೆಪಿಯಲ್ಲಿರುವ ಸೂಕ್ಷ್ಮ ಸಂವೇದನೆಯ ವ್ಯಕ್ತಿ ನೀವು ಮಾತ್ರ. ಆದರೆ ನೀವ್ಯಾಕೆ ನಿಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಸುಷ್ಮಾ, "ಯಾಕಂದ್ರೆ ನಾನು ಭಾರತೀಯ ಹಿತಾಸಕ್ತಿಯ ಮತ್ತು ವಿದೇಶದಲ್ಲಿರುವ ಭಾರತೀಯರ ಚೌಕಿದಾರಿಕೆಯನ್ನು ಮಾಡುತ್ತಿದ್ದೇನೆ" ಎಂದಿದ್ದರು!
|
ಮಾಧ್ಯಮಕ್ಕೆ ಬಿಸಿಮುಟ್ಟಿಸಿದ್ದ ಸುಷ್ಮಾ!
2016 ರಲ್ಲಿ 19 ಕೌನ್ಸಿಲ್ ಸಚಿವರ ಪ್ರಮಾಣವಚನ ಸ್ವೀಕಾರಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಬರಲು ಸುಷ್ಮಾ ಅವರಿಗೆ ವೈಯಕ್ತಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅಂದೇ ಅವರು ಮಾಧ್ಯಮಗಳಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದರು. "ಮಾಧ್ಯಮದವರೇ-ದಯವಿಟ್ಟು'ಸುಷ್ಮಾಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರು!' ಎಂಬ ಹೆಡ್ ಲೈನ್ ಅನ್ನು ಬಳಸಬೇಡಿ! " ಎಂದಿದ್ದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications