ದುಃಖದಲ್ಲಿ ಯೋಧರ ಕುಟುಂಬ, ಸಾಂತ್ವನದಿಂದಲೂ ನಿಲ್ಲದ ಅಳು

Posted By:
Subscribe to Oneindia Kannada

ಬೆಂಗಳೂರು, ಜನವರಿ,07: ಭಾರತದ ಅತ್ಯುನ್ನತ ಯುದ್ಧ ವಿಮಾನಗಳು, ಹೆಲಿಕಾಫ್ಟರ್ ಗಳನ್ನು ಹೊಂದಿರುವ ಪಂಜಾಬಿನ ಪಠಾಣ್ ಕೋಟ್ ವಾಯುನೆಲೆಯು ಜನವರಿ 2ರ ಶನಿವಾರದಂದು ಉಗ್ರರ ದಾಳಿಗೆ ಒಳಗಾಗಿ ಈ ಸಂದರ್ಭದಲ್ಲಿ ನಾಲ್ವರು ಉಗ್ರರು, ಏಳು ಮಂದಿ ಯೋಧರು ಸಾವನ್ನಪ್ಪಿದ್ದಾರೆ.

ಬಹಳ ಸಂತಸದಿಂದಲೇ ದೇಶ ಸೇವೆಗೆ ತೆರಳಲು ಅನುಮತಿ ನೀಡುವ ತಂದೆ ತಾಯಿಯರಿಗೆ, ದೇಶ ಸೇವೆ ಮಾಡುತ್ತಲೇ ಪ್ರಾಣ ಬಿಡುವ ಯೋಧರಿಗೆ ಯಾವಾಗಲೂ ನಮ್ಮದೊಂದು ನಮನ ಇರಲೇಬೇಕು. ಇವರ ಧೈರ್ಯಕ್ಕೆ ನಮ್ಮದೊಂದು ಸಲಾಂ.

ಪಠಾಣ್ ಕೋಟ್ ದಾಳಿಯಲ್ಲಿ ಪ್ರಾಣವನ್ನಪ್ಪಿದ ಯೋಧರ ಬಗ್ಗೆ ಕುಟುಂಬದವರಿಗೆ ತಮ್ಮ ಮಕ್ಕಳ ಸಾಧನೆ ಒಂದೆಡೆ ಹೆಮ್ಮೆ ಎನಿಸಿದರೆ, ಮತ್ತೊಂದೆಡೆ ಆಕಾಶವೇ ಕಳಚಿಬಿದ್ದಂತೆ ಎನಿಸುತ್ತದೆ. ಆ ಯೋಧ ಮನೆಗೆ ಒಬ್ಬನೇ ಮಗನಾಗಿದ್ದರೆ ತಂದೆ ತಾಯಿ ರೋಧನ ನೋಡಿದವರಿಗೆ ಕರುಳು ಕಿವುಚದೆ ಇರದು, ಗಂಟಲು ಗದ್ಗದಿತವಾಗದೇ ಇರದು, ದುಃಖ ಒತ್ತರಿಸಿ ಬರದೇ ಇರದು, ಕಣ್ಣಿರು ಕೆನ್ನೆಯ ಮೇಲೆ ಹರಿಯದೇ ಇರಲು ಸಾಧ್ಯವೇ ಇಲ್ಲ.

ಪಠಾಣ್ ಕೋಟ್ ಕಾರ್ಯಾಚರಣೆ ನಂತರ ಯೋಧರ ಕುಟುಂಬದವರ ಪರಿಸ್ಥಿತಿ ಏನು, ಪಠಾಣ್ ಕೋಟ್ ನಲ್ಲಿ ವಾತಾವರಣ ಹೇಗಿದೆ, ಇನ್ನಿತರ ಸುದ್ದಿಗಳು ಪಿಟಿಐ ಚಿತ್ರಗಳ ಮೂಲಕ ನಿಮಗಾಗಿ.[ಸಂದರ್ಶನ : ಪಠಾಣ್ ಕೋಟ್ ದಾಳಿ ಬಗ್ಗೆ ದೂರುವುದು ಬಿಡಿ]

ದುಃಖತಪ್ತನಾದ ಯೋಧರ ತಂದೆ

ದುಃಖತಪ್ತನಾದ ಯೋಧರ ತಂದೆ

ಪಠಾಣ್ ಕೋಟ್ ವಾಯುನೆಲೆ ದಾಳಿ ಸಂದರ್ಭದಲ್ಲಿ ಹುತಾತ್ಮನಾದ ಫತೇ ಸಿಂಗ್ ಪಂಜಾಬಿನ ಗುರುದಾಸ್ ಪುರದ ಚಂದಾ ಗುಜ್ರಾನ್ ನವರು. ಇವರ ತಂದೆ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದು ಆಲ್ ಇಂಡಿಯಾ ಆಂಟಿ ಟೆರರಿಸ್ಟ್ ಮುಖ್ಯಸ್ಥನಾದ ಎಂಎಸ್ ಬಿಟ್ಟಾ ನೋವುಭರಿತ ತಂದೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ತಂದೆಯ ಅಳು ಮಾತ್ರ ಮುಗಿಲು ಮುಟ್ಟಿತ್ತು.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]

ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರು

ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರು

ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ದಾಳಿ ಸಾವನ್ನಪ್ಪಿದ ಮೂವರು ಉಗ್ರರ ಶವಗಳು. ಸುಮಾರು 45 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ.

ಮೂವರು ಅಣ್ಣ-ತಮ್ಮಂದಿರ ಕೈ ಚಳಕದಲ್ಲಿ ಅಕ್ಟೋಪಸ್

ಮೂವರು ಅಣ್ಣ-ತಮ್ಮಂದಿರ ಕೈ ಚಳಕದಲ್ಲಿ ಅಕ್ಟೋಪಸ್

ಮೂವರು ಅಣ್ಣ ತಮ್ಮಂದಿರಾದ, ಇನ್ನೂ ಹದಿಹರೆಯದ ಆಸ್ಟೀನ್ (21), ಟ್ರೇವರ್ (20), ಕಾನೋರ್ (17) ಇವರು ಸೇರಿಕೊಂಡು ಹಿಮದಲ್ಲಿ ತಮ್ಮ ಮನೆ ಎದುರಿಗೆ ೧೮ ಅಡಿ ಎತ್ತರದ ಅಕ್ಟೋಪಸ್ ನಿರ್ಮಾಣ ಮಾಡಿದ್ದಾರೆ.

ಶತ್ರುಘ್ನ ಸಿನ್ಹಾ ಅವರ ಪುಸ್ತಕ ಬಿಡುಗಡೆ

ಶತ್ರುಘ್ನ ಸಿನ್ಹಾ ಅವರ ಪುಸ್ತಕ ಬಿಡುಗಡೆ

ಬಿಜೆಪಿಯ ಎಲ್ ಕೆ ಅಡ್ವಾಣಿ ಮತ್ತು ಯಶ್ವಂತ್ ಸಿನ್ಹಾ ಇನ್ನಿತರ ಗಣ್ಯರ ಸಮಾಗಮದಲ್ಲಿ ರಾಜಕಾರಣಿ ಮತ್ತು ನಟ ಶತ್ರುಘ್ನ ಸಿನ್ಹಾ ಅವರ 'ಎನಿಥಿಂಗ್ ಬಟ್ ಖಾಮೋಶ್' (Anything But Khamosh) ಎಂಬ ಪುಸ್ತಕ ದೆಹಲಿಯಲ್ಲಿ ಬಿಡುಗಡೆಗೊಂಡಿದೆ.[ಧೈರ್ಯವಿದ್ದರೆ ಪಕ್ಷದಿಂದ ಉಚ್ಚಾಟಿಸಿ: ಶತ್ರುಘ್ನ ಸಿನ್ಹ ಸವಾಲು]

ನರೇಂದ್ರ ಮೋದಿ ಜೊತೆ ಜಮ್ಮು ಕಾಶ್ಮೀರದ ಯುವಕರ ಮಾತುಕತೆ

ನರೇಂದ್ರ ಮೋದಿ ಜೊತೆ ಜಮ್ಮು ಕಾಶ್ಮೀರದ ಯುವಕರ ಮಾತುಕತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಯುವಕರ ಜೊತೆ ಮಾತುಕತೆ ನಡೆಸಿದ್ದಾರೆ. ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ಪ್ರಧಾನಿ "Wattan Ko Jano" ಎಂಬ ವಿಚಾರದ ಮೇಲೆ ಮಾತನಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP veterans LK Advani and Yashwant Sinha release the party MP Shatrughan Sinha's book "Anything But Khamosh" at a function and Prime Minister Narendra Modi interacts with youth from J&K, on a visit to Delhi as part of the "Wattan Ko Jano" initiative of MHA, in New Delhi. Bodies of 3 terrorists who had attacked the Indian Air Force base in Pathankot
Please Wait while comments are loading...