• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಾಯಕ ಆದಿವಾಸಿಯ ಹತ್ಯೆ, ಸೆಲ್ಫಿ ಮತ್ತು ಸಾಮಾಜಿಕ ಮಾಧ್ಯಮ!

|

ಪಾಲಕ್ಕಾಡ್, ಫೆಬ್ರವರಿ 23: ಬುಡಕಟ್ಟು ಯುವಕನೊಬ್ಬ ಕಳ್ಳತನ ಮಾಡಿದ್ದಾನೆಂದು ಆತನನ್ನು ಜನರೆಲ್ಲ ಸೇರಿ ಹೊಡೆದು ಸಾಯಿಸಿದ ಘಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯತ್ತಿದೆ.

ಮಧು(27) ಎಂಬ ಬುಡಕಟ್ಟು ಸಮುದಾಯದ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಕೆಲ ದಿನಗಳ ಹಿಂದೆ ಕೇರಳದ ಪಾಲಕ್ಕಾಡಿನ ಅಟ್ಟಪಾಡಿಯಲ್ಲಿ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ಹದಿನೈದಕ್ಕೂ ಹೆಚ್ಚು ಜನರು ಸೇರಿ ಆತನನ್ನು ಕಟ್ಟಿ ಹಾಕಿದ್ದರು.

ಕಳ್ಳತನ ಮಾಡಿದ್ದಾನೆಂದು ಹೊಡೆದು ಕೊಂದು, ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ!

ನಂತರ ಆತನಿಗೆ ಚಿತ್ರಹಿಂಸೆ ನೀಡಿ, ಹೊಡೆದು ಸಾಯಿಸಿದ್ದ ಘಟನೆ ನಿನ್ನೆ(ಫೆ.22) ನಡೆದಿದೆ. ಆತನನ್ನು ಕಟ್ಟಿಹಾಕಿದ್ದ ಸಮಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಕೃತ ಆನಂದ ಪಟ್ಟಿದ್ದರು. ಹೀಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹೋರಾಟಗಾರರೆಲ್ಲ ಎಲ್ಲಿ?

ಕೇರಳದಲ್ಲಿ ನಡೆದ ಬುಡಕಟ್ಟು ವ್ಯಕ್ತಿಯ ಹತ್ಯೆ ಅಕ್ಷಮ್ಯ. ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿಲ್ಲ! ಹೋರಾಟಗಾರರೆಲ್ಲ ಮೌನವಾಗಿದ್ದಾರಲ್ಲ... ಯಾಕೆ? ಎಂದು ಪ್ರಶ್ನಿಸಿದ್ದಾರೆ ಆನಂದ ರಂಗನಾಥನ್.

ತುಂಬಾ ಬೇಸರವಾಗುತ್ತಿದೆ...

ಕೇರಳದಲ್ಲಿ 27 ವರ್ಷದ ಯುವಕನನ್ನು ಕೊಂದ ಸುದ್ದಿ ಕೇಳಿ ತುಂಬಾ ಬೇಸರವಾಯ್ತು. ಆತನನ್ನು ಕಟ್ಟಿಹಾಕಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂಬುದೂ ಅಷ್ಟೇ ಬೇಸರದ ಸಂಗತಿ. ಕೇರಳದ ಹಿಂಸೆಯ ರಾಜಕೀಯಕ್ಕೆ ಇದೊಂದು ಸಾಕ್ಷಿ ಎಂದಿದ್ದಾರೆ ರಾಜೀವ್ ಚಂದ್ರಶೇಖರ್.

ಅವಾರ್ಡ್ ವಾಪ್ಸಿಯವರೆಲ್ಲ ಎಲ್ಲಿ?

ಹಸಿವಿನಿಂದ ಬಳಲುತ್ತಿದ್ದ ಓರ್ವ ಬುಡಕಟ್ಟು ವ್ಯಕ್ತಿಯನ್ನು ಕೇರಳದಲ್ಲಿ ಸಾಯಿಸಲಾಗಿದೆ. ಈಗ ಅವಾರ್ಡ್ ವಾಪ್ಸಿ ಗುಂಪು ಎಲ್ಲಿದೆ? ನಿಮಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬಂತೆ ಮಾತನಾಡುತ್ತಿದ್ದಿರಲ್ಲ! ಇದೀಗ ನಿಮ್ಮದೇ ಕಮ್ಯುನಿಸ್ಟ್ ನೆಲದಲ್ಲಿ ಇಂಥ ಘಟನೆ ನಡೆದಿದೆ. ಇಂಥವರಿಗಾಗಿ ದನಿ ಎತ್ತುವುದಕ್ಕೆ ಶುರಾಡಿ ನೋಡೋಣ ಎಂದು ಸವಾಲೆಸೆದಿದ್ದಾರೆ ಗಿರೀಶ್ ಆಳ್ವಾ.

ನಿಜಕ್ಕೂ ನಾಚಿಕೆಗೇಡು!

ಆಹಾರವಿಲ್ಲದೆ, ಹಸಿವಿನಿಂದ ಕಂಗೆಟ್ಟಿದ್ದ ಮಧು ಎಂಬ ಬುಡಕಟ್ಟು ವ್ಯಕ್ತಿಯನ್ನು ಕೊಂದ ಘಟನೆ ಕೇಳಿ ನೋವಾಯಿತು. ಇದು ನಿಜಕ್ಕೂ ನಾಚಿಕೆಗೇಡು. ಕಮ್ಯುನಿಸಂ ಎಂಬುದು ಮಾನವೀಯತೆಯನ್ನು ಸೋಲಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಡಾ.ಸಂಧ್ಯಾ ಪಟೇಲ್.

ನಾವು ಅವರಿಂದ ಎಲ್ಲವನ್ನೂ ಕಿತ್ತುಕೊಂಡಿದ್ದೇವೆ!

ನಾವು ಬುಡಕಟ್ಟು ಜನರಿಂದ ಎಲ್ಲವನ್ನೂ ಕಿತ್ತುಕೊಂಡಿದ್ದೇವೆ. ಅವರ ಜಮೀನು, ಅನ್ನ. ಆದರೂ ನಮ್ಮ ದುರಾಸೆಗೆ ನಾವವರ ಮೇಲೆ ದಬ್ಬಾಳಿಕೆ ನಡೆಸುತ್ತೇವೆ. ಅವರು ಊಟವಿಲ್ಲದೆ ಕಳ್ಳತನ ಮಾಡಿದರೆ ನಾವವರನ್ನು ಸಾಯಿಸುತ್ತೇವೆ! ಅಧಿಕಾರ ಇರುವವರಿಗೆ ಇದು ಅರ್ಥವಾಗುವುದಿಲ್ಲ. ಕರುಣೆ ಮತ್ತು ಮಾನವೀಯತೆ ನಮ್ಮಿಂದ ದೂರವಾಗಿದೆ! ಮಧು ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ರಂಗ್ನಾರೊಕ್!

ದೇವರ ರಾಜ್ಯ ಬದಲಾಗಿದೆ...

ಕಮ್ಯುನಿಸ್ಟರ ನೆಲದಲ್ಲಿ ಗೂಂಡಾಗಳು ಬುಡಕಟ್ಟು ಸಮುದಾಯದ ಅಸಾಯಕ ವ್ಯಕ್ತಿಗೆ ಹಿಂಸೆ ನೀಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು, ಸಾಯಿಸಿದ್ದಾರೆ. ದೇವರ ರಾಜ್ಯದಿಂದ ಕೇರಳ ಪಿಎಫ್ ಐ ಗಳ ರಾಜ್ಯವಾಗಿ, ಲವ್ ಜಿಹಾದ್ ರಾಜ್ಯವಾಗಿ, ರಕ್ತಪೀಪಾಸುಗಳ ರಾಜ್ಯವಾಗಿ, ಪ್ರಾಣಿಗಳ ರಾಜ್ಯವಾಗಿ ಬದಲಾಗಿದೆ ಎಂದಿದ್ದಾರೆ ರಿತು ರಾಥೋರ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
27-year-old tribal youth Madhu, was beaten to death by a group of people at Kadukumanna hamlet in Attappady, near Palakkad, on Feb 22nd evening. People in social media strongly condemn this brutal killing.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more