• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪನಗದೀಕರಣದಿಂದ ನಕಲಿ ನೋಟುಗಳ ಹಾವಳಿಗೆ ಭರ್ತಿ ಪೆಟ್ಟು: ಇಲ್ಲಿದೆ ಲೆಕ್ಕಾಚಾರ

|

ಅಪನಗದೀಕರಣದ ನಂತರ ಭಾರತದ ನಕಲಿ ನೋಟುಗಳ ಕಳ್ಳಸಾಗಣೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ನಕಲಿ ನೋಟುಗಳ ಗುಣಮಟ್ಟ ಕೂಡ ಅಂಥ ಚೆನ್ನಾಗಿಲ್ಲವಾದ್ದರಿಂದ ಅವುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ರೀತಿ ನಕಲಿ ನೋಟುಗಳನ್ನು ದೇಶದೊಳಕ್ಕೆ ತರಲು ಹೆಚ್ಚಿನ ಭಾಗ ಬಾಂಗ್ಲಾದೇಶದ ಪ್ರದೇಶವನ್ನೇ ಬಳಸಲಾಗುತ್ತಿದೆ. ಈ ವರ್ಷ ಇಲ್ಲಿಯ ತನಕ ಹನ್ನೊಂದು ಲಕ್ಷ ರುಪಾಯಿ ಮಾತ್ರ ವಶಪಡಿಸಿಕೊಳ್ಳಲಾಗಿದೆ.

-ದೇಶದಲ್ಲಿ ಅಪನಗದೀಕರಣದ ನಂತರ ಆಗಿರುವ ಬದಲಾವಣೆಯನ್ನು ಬಿಎಸ್ ಎಫ್ ನ ಡಿಜಿ ಕೆ.ಕೆ.ಶರ್ಮಾ ವಿವರಿಸುವುದು ಹೀಗೆ. ದೇಶದಲ್ಲಿ ಈಗಾಗಲೇ ಇರುವ ರೋಹಿಂಗ್ಯಾ ಮುಸ್ಲಿಮರು ಕೆಲ ಪ್ರದೇಶಗಳಲ್ಲಿ ಭಾರೀ ಒತ್ತಡದಲ್ಲಿದ್ದಾರೆ. ಅವರ ಪಾಲಿಗೆ ಸ್ವಲ್ಪ ಮಟ್ಟಿಗೆ ಅನುಕೂಲಕರ ವಾತಾವರಣ ಇರುವ ಹಾಗೂ ದೇಶದೊಳಗೆ ಇರುವ ರೋಹಿಂಗ್ಯಾ ಮುಸ್ಲಿಮರಿಗೆ ಶಿಬಿರ ಮಾಡಿರುವ ಪಶ್ಚಿಮ ಬಂಗಾಲಕ್ಕೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

ಬಾಂಗ್ಲಾದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ಜಮೆಯಾಗಿದ್ದಾರೆ ಎಂಬ ಬಗ್ಗೆ ನಮಗೆ ಗೊತ್ತಿದೆ. ಸಣ್ಣ ಸಣ್ಣ ತಂಡಗಳಾಗಿ ಅವರು ಭಾರತದೊಳಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುತ್ತಿಲ್ಲ. ರೋಹಿಂಗ್ಯಾ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ದೇಶದೊಳಗೆ ಪ್ರವೇಶಿಸಿದ ಉದಾಹರಣೆ ಇಲ್ಲ ಎಂದು ಶರ್ಮಾ ಹೇಳಿದ್ದಾರೆ.

ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ

ಈಗಾಗಲೇ ಜಮ್ಮುವಿನ ಗಡಿಯಲ್ಲಿ 'ಸ್ಮಾರ್ಟ್' ಬೇಲಿಯನ್ನು ಪ್ರಾಯೋಗಿಕವಾಗಿ ಹಾಕಲಾಗಿದೆ. ಸದ್ಯಕ್ಕೆ ಸೆಪ್ಟೆಂಬರ್ ಹದಿನೇಳನೇ ತಾರೀಕು ಗೃಹ ಸಚಿವರಿಂದ ಉದ್ಘಾಟನೆ ಮಾಡಿಸಬೇಕು ಎಂದುಕೊಂಡಿದ್ದೇವೆ. ಆ ದಿನಾಂಕದಲ್ಲಿ ಬದಲಾವಣೆ ಆದರೂ ಆಗಬಹುದು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Smuggling of Fake Indian Currency Note (FICN) has come down considerably after demonetisation. Quality also isn't good so they can be easily detected. Mostly, we find that Bangladeshi territory is being used as a transit. This yr, the seizure was 11 lakhs only, said BSF DG KK Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more