ಮಹಿಳೆ ಕೊರಳಲ್ಲಿದ್ದ ಹಾರ ಮೈಲಿಗೆ ಆಗುತ್ತಾ? ಸ್ಮೃತಿ ಇರಾನಿ Vs ರಮ್ಯಾ

ಉತ್ತರಪ್ರದೇಶದ ಚುನಾವಣಾ ಪ್ರಚಾರದ ವೇಳೆ, ತನ್ನ ಕೊರಳಲ್ಲಿದ್ದ ಹಾರವನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕಿದ ಪ್ರಿಯಾಂಕ ಗಾಂಧಿ ವರ್ತನೆಯನ್ನು ಬಿಜೆಪಿ ನಾಯಕಿ ಮತ್ತು ಸಚಿವೆ ಸ್ಮೃತಿ ಇರಾನಿ ಖಂಡಿಸಿ ಟ್ವೀಟ್ ಮಾಡಿದ್ದರು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಸ್ಮೃತಿ ಟ್ವೀಟಿಗೆ ತಿರುಗೇಟು ನೀಡಿರುವ ಎಐಸಿಸಿ ಸಾಮಾಜಿಕ ತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ಮಹಿಳೆಯ ದೇಹದಲ್ಲಿದ್ದ ಹಾರವನ್ನು ಪ್ರತಿಮೆಗೆ ಬಳಸಿದರೆ ಅದು ಮೈಲಿಗೆ ಆಗುವುದಿಲ್ಲ ಎಂದು ಸ್ಮೃತಿಗೆ ನೀತಿಪಾಠ ಮಾಡಿದ್ದಾರೆ.

ಮಹಿಳೆಯರಲ್ಲಿ ಮಾತ್ರ ಯಾಕೆ ಕೆಟ್ಟದನ್ನು ಸ್ಮೃತಿ ಹುಡುಕುತ್ತಾರೆಂದು ಲೇವಡಿ ಮಾಡಿರುವ ರಮ್ಯಾ, ಮಹಿಳೆ, ಹಾರ ಮತ್ತು ಮೈಲಿಗೆಯ ವಿಚಾರದಲ್ಲಿ ಸ್ಮೃತಿ ಇರಾನಿಯವರನ್ನು ಲೇವಡಿ ಮಾಡಿದ್ದಾರೆ.

vaSmriti seems to find everything with women dirty & offensive, Ramya tweetaSmriti seems to find everything with women dirty & offensive, Ramya tweet

ನಮ್ಮ ಹಿಂದೂ ಧರ್ಮ ಹೇಳುವ ಪ್ರಕಾರ, ದೇವರು ಎಲ್ಲೆಲ್ಲೂ ಇದ್ದಾನೆ. ಹಾಗಾಗಿ, ತನ್ನ ಕೊರಳಲ್ಲಿದ್ದ ಹಾರವನ್ನು ಪ್ರಿಯಾಂಕ ಅವರು ಪ್ರತಿಮೆಗೆ ಹಾಕಿದರೆ, ಅದು ಹೇಗೆ ಅವಮಾನಿಸಿದಂತಾಗುತ್ತದೆ ಎಂದು ರಮ್ಯಾ, ಸ್ಮೃತಿಯನ್ನು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ, ತನ್ನ ಕೊರಳಲ್ಲಿದ್ದ ಹೂವಿನ ಹಾರ ಹಾಕಿದ್ದರು. ಇದಾದ, ಕೆಲವೇ ನಿಮಿಷಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಮೆಯನ್ನು 'ಶುದ್ಧ'ಗೊಳಿಸಿದ ಘಟನೆ ನಡೆದಿತ್ತು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಈಗ ರಮ್ಯಾ ಮಾಡಿರುವ ಟ್ವೀಟ್ ನಂತರ, ತಮ್ಮ ಕೊರಳಿನಲ್ಲಿರುವ ಹೂವಿನ ಹಾರವನ್ನು ಇನ್ನೊಬ್ಬರಿಗೆ ಹಾಕಿದರೆ ಅದು ಮೈಲಿಗೆ ಆಗುತ್ತಾ? ತಾವು ಹಾಕಿಕೊಂಡಿದ್ದ ಹಾರವನ್ನು ಗಣ್ಯರ ಪ್ರತಿಮೆಗಳಿಗೆ, ದೇವರಿಗೆ ಹಾಕುವ ಪದ್ದತಿ ಇದೆಯಾ? ಮಹಿಳೆ ಎನ್ನುವ ಪದವನ್ನು ಸುಮ್ಮನೆ ರಮ್ಯಾ ಎಳೆದು ತಂದರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+