ಎಣ್ಣೆ ಮತ್ತಲ್ಲಿ ತೇಲಿ ಹೋಯ್ತು ಆರು ಜನರ ಅಮೂಲ್ಯ ಜೀವ !
ದೇಶದಲ್ಲಿ ಬಹುದೊಡ್ಡ ದುರಂತವೊಂದು ಸಂಭವಿಸಿದೆ. ಮೋಜು ಮಸ್ತಿಯಿಂದ ಆರು ಜನ ಯುವಕರ ಜೀವ ಹಾರಿ ಹೋಗಿದೆ. ಅತಿ ವೇಗ ಹಾಗೂ ಕುಡಿದು ವಾಹನ ಚಲಾಯಿಸಬಾರದು ಎನ್ನುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಜಾಗೃತಿ ಮೂಡಿಸುತ್ತಲ್ಲೇ ಇರುತ್ತಾರೆ. ದಂಡ ವಿಧಿಸುವುದು ಸಹ ಇದೆ. ಆದರೆ, ಇಲ್ಲೊಂದು ತಂಡ ಕುಡಿದು ಪಾರ್ಟಿ ಮಾಡಿ ಅದೇ ಗುಂಗಿನಲ್ಲಿ ಸಾವನ್ನಪ್ಪಿವೆ. ಆ ಆರು ಜನ ಕುಡಿದು ಕುಪ್ಪಳಿಸಿದ್ದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಡೆಹ್ರಾಡೊನ್‌ನಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು. ಇದರಲ್ಲಿ ಆರು ಜನ ಯುವಕರು ಸಾವನ್ನಪ್ಪಿದ್ದಾರೆ. ಈ ದುರಂತ ಸಂಭವಿಸುವುದಕ್ಕೂ ಮೊದಲು ಅವರು ಮಾಡಿದ್ದ ಸಾಹಸ ಹಾಗೂ ಮಸ್ತಿಯ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಲ್ಲಿ ಭಾರೀ ವೈರಲ್ ಆಗುತ್ತಿವೆ. ಡೆಹ್ರಾಡೂನ್‌ನಲ್ಲಿ ಅತೀವೇಗವಾಗಿ ಕಾರು (ಎಂಯುವಿ) ಚಲಾಯಿಸಿ, ಡಿವೈಡರ್ (ರಸ್ತೆ ವಿಭಜಕ) ಆರು ಜನ ಯುವಕರು ಸಾವನ್ನಪ್ಪಿದ್ದಾರೆ. ಈ ದುರಂತ ಸಂಭವಿಸುವುದಕ್ಕೂ ಮೊದಲು ಅವರು ಮಾಡಿದ್ದ ಪಾರ್ಟಿಯ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.

ಈ ಕಾರು ದುರಂತದಲ್ಲಿ ಗುನೀತ್ ಸಿಂಗ್, ಕಾಮಾಕ್ಷಿ ಸಿಂಘಾಲ್, ನವ್ಯಾ ಗೋಯಲ್, ರಿಷಭ್ ಜೈನ್ ಮತ್ತು ಅತುಲ್ ಅಗರವಾಲ್ ಹಾಗೂ ಚಂಬಾದಿಂದ ಕುನಾಲ್ ಕುಕ್ರೇಜಾ ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉತ್ತರಖಂಡದ ಡೆಹ್ರಾಡೊನ್‌ನಲ್ಲಿ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಸಿದ್ಧೇಶ್ ಅಗರವಾಲ್. ಇತನನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವನ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದೆ.
ಈ ಪಾರ್ಟಿಯನ್ನು ಆಯೋಜಿಸಿದ್ದೇ ಸಿದ್ಧೇಶ್ ಎನ್ನಲಾಗಿದೆ. ಆ ಪಾರ್ಟಿಯಲ್ಲಿ ಹಲವು ಜನ ಗೆಳೆಯರು ಸೇರಿದ್ದರು. ಎಲ್ಲರೂ ಕಂಠ ಮಟ ಕುಡಿದಿದ್ದರು. ಕುಡಿದ ಮೇಲೆ ಎಲ್ಲರೂ ಸೇರಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಕುಡಿದ ಅಮಲಿನಲ್ಲಿ ಗಾಡಿ ನಿಯಂತ್ರಣಕ್ಕೆ ಸಿಕ್ಕಿಲ್ಲ. ಅದು ಅಲ್ಲದೇ ಕಾರು ಅತ್ಯಂತ ವೇಗವಾಗಿ ಹೋಗುತ್ತಿದ್ದರಿಂದ ನೇರವಾಗಿ ಸರಕು ಸಾಗಿಸುವ ಟ್ರಕ್‌ವೊಂದಕ್ಕೆ ಗುದ್ದಿದ್ದಾರೆ. ಇದರಿಂದ ಕಾರು ಪೂರ್ತಿ ನುಜ್ಜುಗುಜ್ಜಾಗಿದ್ದು, ಯಾರನ್ನೂ ಗುರುತಿಸಲಾಗದ ಸ್ಥಿತಿಗೆ ಮೃತದೇಹಗಳು ತಲುಪಿವೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಪೊಲೀಸರು ನಡೆಸಿದ್ದು. ಅದರಲ್ಲಿ ಕಾರ್‌ಅನ್ನು ವೇಗವಾಗಿ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಟ್ರಕ್ ಚಾಲಕನ ಯಾವುದೇ ತಪ್ಪು ಇದರಲ್ಲಿ ಕಂಡು ಬಂದಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿರುವುದು ವರದಿಯಾಗಿದೆ.
ಚೇಸಿಂಗ್‌ನಿಂದ ದುರಂತ: ಸ್ಥಳೀಯ ಹೋಟೆಲ್‌ನ ಮಾಲೀಕರೊಬ್ಬರು ಹೇಳಿರುವ ಪ್ರಕಾರ ಅವರು ಸಹ ವೇಗವಾಗಿ ಬರುತ್ತಿದ್ದ ಕಾರ್‌ನಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ರಾತ್ರಿ ಸುಮಾರು 1 ಗಂಟೆಯಷ್ಟೊತ್ತಿಗೆ ಕಾರು ಅತ್ಯಂತ ವೇಗವಾಗಿ ಬರುತ್ತಿತ್ತು. ನಾನು ಸ್ವಲ್ಪದರಲ್ಲೇ ಬಚಾವಾದೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ಕಾರ್ ಚಲಾಯಿಸುತ್ತಿದ್ದವರು ಇನ್ನೊಂದು ಕಾರ್ ಅನ್ನು ಓವರ್ ಟೇಕ್ (ಹಿಂದಿಕ್ಕುವ) ಧಾವಂತದಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಡರಾತ್ರಿ 2 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಳಿಗ್ಗೆ ಸಮಯದಲ್ಲಿ ಸಂಭವಿಸಿದ್ದರೆ, ಈ ಭಾಗದಲ್ಲಿ ಇನ್ನಷ್ಟು ಜನರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಇದೀಗ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಸಂಭವಿಸಿದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications