ಆಟಿಕೆ ವಸ್ತುವಿನಂತೆ ರಾವಿ ನದಿಗೆ ಮುರಿದು ಬಿದ್ದ ಸೇತುವೆ
ಶಿಮ್ಲಾ, ಅಕ್ಟೋಬರ್ 20: ಹಿಮಾಚಲ ಪ್ರದೇಶದ ರಾವಿ ನದಿಗೆ ಕಟ್ಟಿದ್ದ ಸೇತುವೆಯೊಂದು ಮುರಿದು ಬಿದ್ದಿದೆ. ಚಂಬಾ ನಗರ ಮತ್ತು ಪಂಜಾಬಿನ ಪಠಾನ್ ಕೋಟ್ ಸಂಪರ್ಕಿಸುವ ಸೇತುವೆ ಇದಾಗಿದೆ.
ಚಂಬಾ-ಪಠಾನ್ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದ್ವಿಪಥದ ಈ ಸೇತುವೆ ಆಟಿಕೆ ವಸ್ತುವಿನಂತೆ ಮುರಿದು ಬಿದ್ದಿದ್ದು ಆರು ಜನರಿಗೆ ಗಾಯವಾಗಿದೆ.

ಪರೇಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೇತುವೆ ಮುರಿದು ಬೀಳುವಾಗ ಕಾರು ಮತ್ತೊಂದು ಟ್ರಕ್ ಸೇತುವೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿವೆ.

12 ವರ್ಷದ ಕೆಳಗೆ ಅಂದರೆ 2005ರಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಈ ಸೇತುವೆ ಉದ್ಘಾಟಿಸಿದ್ದರು. ಸದ್ಯ ಸೇತುವೆ ಕುಸಿದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
Bridge collapsed at Chamba near Parel pic.twitter.com/Z0cmH16hnX
— [email protected] (@nagrishu7) October 19, 2017












Click it and Unblock the Notifications