ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀತಾರಾಂ ಯೆಚೂರಿ ಸಿಪಿಐ(ಎಂ) ಕಾರ್ಯದರ್ಶಿಯಾಗಿ ಮರು ಆಯ್ಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 11: ಸೀತಾರಾಂ ಯೆಚೂರಿ ಸಿಪಿಐ(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಭಾನುವಾರ ಆಯ್ಕೆಯಾಗಿದ್ದಾರೆ. ಮೂರನೇ ಬಾರಿಗೆ ಸಿಪಿಐಎಂನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಆಯ್ಕೆಯಾಗಿದ್ದಾರೆ.

ಕೇರಳದಲ್ಲಿ ಭಾನುವಾರ ನಡೆದ ಐದು ದಿನಗಳ 23 ನೇ ಪಕ್ಷದ ಕಾಂಗ್ರೆಸ್‌ನ ಮುಕ್ತಾಯದಲ್ಲಿ ಸೀತಾರಾಮ್ ಯೆಚೂರಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)] ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು.

ಕೇಂದ್ರದಿಂದ ಜನರಿಗೆ 'ಸ್ಲೋ ಡೆತ್‌': ಇಂಧನ ಬೆಲೆ ಏರಿಕೆಗೆ ಸಿಪಿಐಎಂ ಆಕ್ರೋಶಕೇಂದ್ರದಿಂದ ಜನರಿಗೆ 'ಸ್ಲೋ ಡೆತ್‌': ಇಂಧನ ಬೆಲೆ ಏರಿಕೆಗೆ ಸಿಪಿಐಎಂ ಆಕ್ರೋಶ

ಪುನರ್‌ ರಚನೆ ಮಾಡಲಾದ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಪಾಲಿಟ್ ಬ್ಯೂರೋದಲ್ಲಿ 17 ಸದಸ್ಯರು ಇದ್ದಾರೆ. 15 ಮಹಿಳೆಯರು ಮತ್ತು 17 ಹೊಸ ಮುಖಗಳೊಂದಿಗೆ 85-ಸದಸ್ಯರ ಕೇಂದ್ರ ಸಮಿತಿಯನ್ನು ಸಹ ಪಕ್ಷದ ಸಮ್ಮೇಳನದಲ್ಲಿ ರಚನೆರ ಮಾಡಲಾಗಿದೆ.

Sitaram Yechury Re-elected CPM General Secretary

ಮೊದಲ ಬಾರಿಗೆ ಪಾಲಿಟ್ ಬ್ಯೂರೋದಲ್ಲಿ ದಲಿತ ಸದಸ್ಯ

ಸಿಪಿಐಎಂ ಪಕ್ಷದ 58 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತ ಸದಸ್ಯರು ಪಾಲಿಟ್ ಬ್ಯೂರೋದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಮತ್ತು ಪಶ್ಚಿಮ ಬಂಗಾಳದಿಂದ ಏಳು ಬಾರಿ ಲೋಕಸಭಾ ಸದಸ್ಯರಾಗಿರುವ ರಾಮಚಂದ್ರ ದೊಮೆ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಶೋಕ್‌ ದವಲೆ ಹಾಗೂ ರಾಮಚಂದ್ರ ದೊಮೆ ಅವರ ಹೆಸರುಗಳು ಕೇಳಿಬಂದಿದ್ದವು.

ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆ ದಾಳಿ: ಕ್ರಮ ವಹಿಸಿ, ಇಲ್ಲವೇ ತೊಲಗಿ ಎಂದ ಸಿಪಿಐ(ಎಂ)ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆ ದಾಳಿ: ಕ್ರಮ ವಹಿಸಿ, ಇಲ್ಲವೇ ತೊಲಗಿ ಎಂದ ಸಿಪಿಐ(ಎಂ)

ಈ ಹಿಂದೆ ಪ್ರಕಾಶ್‌ ಕಾರಟ್ ಕೂಡ ಎರಡು ಸಲ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದರು. ಅವರು 2005 ರಿಂದ 2015ರವರೆಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇನ್ನು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದ ಸೀತಾರಾಂ ಅವರನ್ನು 2015ರಲ್ಲಿ ನಡೆದ ಪಕ್ಷದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. 2018ರಲ್ಲಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಈಗ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

Sitaram Yechury Re-elected CPM General Secretary

ಈ ಹಿಂದಿನ ಕೇಂದ್ರ ಸಮಿತಿಯು 95 ಸದಸ್ಯರನ್ನು ಹೊಂದಿತ್ತು. ನೂತನ ಕೇಂದ್ರ ಸಮಿತಿಯಲ್ಲಿ ಒಂದು ಸ್ಥಾನವನ್ನು ಖಾಲಿ ಇಡಲಾಗಿದೆ. ಇನ್ನು ಪಕ್ಷದ ಪಾಲಿಟ್ ಬ್ಯೂರೋದಲ್ಲಿ ರಾಮಚಂದ್ರ ದೊಮೆ ಜೊತೆಗೆ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಸಂಚಾಲಕ ಎ. ವಿಜಯರಾಘವನ್ ಮತ್ತು ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಯ ಮುಂದಾಳುಗಳಲ್ಲಿ ಒಬ್ಬರಾದ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ ಇದ್ದಾರೆ.

ಉತ್ತರಾಖಂಡ ಮತ್ತು ಛತ್ತೀಸ್‌ಗಢದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಸಿಂಗ್ ನೇಗಿ ಮತ್ತು ಸಂಜಯ್ ಪರಾಟೆ ಅವರು ಕೇಂದ್ರ ಸಮಿತಿಗೆ ಶಾಶ್ವತ ಆಹ್ವಾನಿತರಾಗಿರುತ್ತಾರೆ. ಎ.ಕೆ. ಪದ್ಮನಾಭನ್ ಅವರು ಹೊಸ ನಿಯಂತ್ರಣ ಆಯೋಗದ ಅಧ್ಯಕ್ಷ ಮತ್ತು ಕೇಂದ್ರ ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ. ನಿರೀಕ್ಷೆಯಂತೆ ಕೇರಳದಿಂದ ಕೆ.ಎನ್. ಬಾಲಗೋಪಾಲ್, ಪಿ.ರಾಜೀವ್, ಸಿ.ಎಸ್.ಸುಜಾತಾ ಮತ್ತು ಪಿ.ಸತೀದೇವಿ ನೂತನ ಕೇಂದ್ರ ಸಮಿತಿಗೆ ಸ್ಥಾನ ಪಡೆದರೆ, ಪಿ.ಕರುಣಾಕರನ್, ವೈಕಂ ವಿಶ್ವನ್ ಮತ್ತು ದಿವಂಗತ ಎಂ.ಸಿ. ಜೋಸೆಫೀನ್ ಕೈಬಿಡಲಾಯಿತು.

Recommended Video

KL Rahulಗೆ ಪಾಪ ಹೀಗಾಗಬಾರದಿತ್ತು | Oneindia Kannada

ಪೊಲಿಟ್ ಬ್ಯೂರೋ ಸದಸ್ಯರಾಗಿ ಮುಂದುವರಿಯಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವಯಸ್ಸಿನ ನಿಯಮದಿಂದ ವಿನಾಯಿತಿ ನೀಡಲಾಗಿದೆ. ರಾಜ್ಯ ಸಮಿತಿ ಸದಸ್ಯ ಎಂ.ವಿಜಯಕುಮಾರ್ ಅವರಿಗೆ ಕೇಂದ್ರ ನಿಯಂತ್ರಣ ಆಯೋಗದ ಸದಸ್ಯರಾಗಿ ಅವಕಾಶ ಕಲ್ಪಿಸಲಾಗಿದೆ.

English summary
Sitaram Yechury Re-elected CPM General Secretary, 1st Dalit in CPM's politburo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X