Get Updates
Get notified of breaking news, exclusive insights, and must-see stories!

ಕೈಲಾಸ ಮಾನಸಸರೋವರ ಯಾತ್ರೆ ರದ್ದುಗೊಳಿಸಿದ ಸಿಕ್ಕಿಂ ಸರ್ಕಾರ

ಸಿಕ್ಕಿಂ, ಏಪ್ರಿಲ್ 22: ಭಾರತ ಹಾಗೂ ಚೀನಾದ ನಡುವೆ ನಡೆಯುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಈ ವರ್ಷ ನಡೆಸದಿರಲು ಸಿಕ್ಕಿಂದ ಸರ್ಕಾರ ನಿರ್ಧರಿಸಿದೆ.

ಕೊರೊನಾ ಭಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ನಡೆಸದಿರಲು ಸಿಕ್ಕಿಂ ಸರ್ಕಾರ ಮುಂದಾಗಿದೆ.ಈ ಯಾತ್ರೆ ನಾತುಲದಿಂದ ಚೀನಾದಲ್ಲಿರುವ ಟಿಬೆಟಿಯನ್ ಆಟೊನೊಮಸ್ ಪ್ರದೇಶದವರೆಗೆ ಇರಲಿದ್ದು ಮುಂದಿನ ತಿಂಗಳು ಯಾತ್ರೆ ಆರಂಭವಾಗಬೇಕಿತ್ತು.

ಈ ಕುರಿತು ರಾಜ್ಯ ಪ್ರವಾಸೋದ್ಯಮ ಮತ್ತು ವಿಮಾನಯಾನ ಸಚಿವ ಬಿಎಸ್ ಪಂಥ್ ಈ ಬಾರಿ ಕೈಲಾಸ ಮಾನಸಸರೋವರ ಯಾತ್ರೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Sikkim Government Decides Not To Host Kailash Mansarovar Yatra This Year

ಕೈಲಾಸ ಯಾತ್ರೆ ಸಮಾನ್ಯವಾಗಿ ಜೂನ್‌ನಿಂದ ಆರಂಭವಾಗುತ್ತದೆ. 21 ದಿನಗಳ ಯಾತ್ರೆ ಇದಾಗಿರುತ್ತದೆ. ದೆಹಲಿಯಿಂದ ಆರಂಭಗೊಳ್ಳುತ್ತದೆ. ಗಾಲಾವರೆಗೆ ವಾಹನಗಳಲ್ಲಿ ಸಂಚರಿಸಬಹುದಾಗಿದೆ. ಲಿಪುಲೇಕ್ ವರೆಗೆ ಕಾಲ್ನಡಿಗೆಯಲ್ಲೇ ತೆರಳಬೇಕಿದೆ.

ಅಷ್ಟೇ ಅಲ್ಲದೆ ಅಕ್ಟೋಬರ್ 2020ರವರೆಗೂ ದೇಶೀಯ ಪ್ರವಾಸಿಗರು ಬರುವಂತಿಲ್ಲ ಹಾಗೆಯೇ ಈ ವರ್ಷ ಮುಗಿಯುವವರೆಗೂ ವಿದೇಶಿ ಪ್ರವಾಸಿಗರಿಗೆ ಅನುಮತಿ ಇಲ್ಲ ಎಂದು ಸಿಕ್ಕಿಂ ಸರ್ಕಾರ ಸೂಚನೆ ನೀಡಿದೆ.

ಮಾನಸಸರೋವರ ಅಥವಾ ಮಾನಸರೋವರ ಟಿಬೆಟ್ ನ ಲ್ಹಾಸಾ ದಿಂದ ಸುಮಾರು 2000 ಕಿ.ಮೀ. ದೂರದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಸಿಹಿನೀರ ಸರೋವರ. ಮಾನಸಸರೋವರದ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ ಕೈಲಾಸಪರ್ವತಗಳಿವೆ.

ಮಾನಸಸರೋವರವು ಸಮುದ್ರಮಟ್ಟದಿಂದ 4556 ಮೀ. ಎತ್ತರದಲ್ಲಿದೆ. ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ.

ಸಿಂಧೂ ನದಿ, ಸಟ್ಲೆಜ್ ನದಿ, ಕರ್ನಾಲಿ ನದಿ ಮತ್ತು ಯಾರ್ಲುಂಗ್ ತ್ಸಾಂಗ್ಪೋ ನದಿ (ಬ್ರಹ್ಮಪುತ್ರ ನದಿ)ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ.

ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. ಭಾರತ, ಟಿಬೆಟ್ ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುವರು.

ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ. ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+