ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರದ್ಧಾ ವಾಕರ್ ದೇಹ ತುಂಡರಿಸಲು ಬಳಸಿದ ಆಯುಧಗಳು ಖಾಕಿ ವಶಕ್ಕೆ

|
Google Oneindia Kannada News

ನವದೆಹಲಿ, ನವೆಂಬರ್ 28: ಶ್ರದ್ಧಾ ವಾಕರ್ ಅನ್ನು ಕೊಂದ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಬಳಸಿದ ಕೊಲೆಯ ಆಯುಧವನ್ನು ದೆಹಲಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ದೆಹಲಿಯ ತಿಹಾರ್ ಜೈಲಿನ ಬ್ಯಾರಕ್ ಸಂಖ್ಯೆ 4ರಲ್ಲಿ ಇರಿಸಲಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಆರೋಪಿ ಅಫ್ತಾಬ್ ತನ್ನ ಫ್ಲಾಟ್‌ಗೆ ಆಹ್ವಾನಿಸಿದ ಇನ್ನೊಬ್ಬ ಹುಡುಗಿಗೆ ಉಡುಗೊರೆಯಾಗಿ ನೀಡಿದ್ದ ಶ್ರದ್ಧಾಳ ಉಂಗುರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹುಡುಗಿಯನ್ನು ತನ್ನ ಮನೆಗೆ ಕರೆಸಿದಾಗ ಶ್ರದ್ಧಾಳ ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು.

ಶ್ರದ್ಧಾ ಪ್ರಕರಣ: ಅಫ್ತಾಬ್‌ಗೆ ಇಂದು ಪಾಲಿಗ್ರಾಫ್ ಪರೀಕ್ಷೆ- ಡಿ.5ಕ್ಕೆ ನಾರ್ಕೋ ಪರೀಕ್ಷೆಶ್ರದ್ಧಾ ಪ್ರಕರಣ: ಅಫ್ತಾಬ್‌ಗೆ ಇಂದು ಪಾಲಿಗ್ರಾಫ್ ಪರೀಕ್ಷೆ- ಡಿ.5ಕ್ಕೆ ನಾರ್ಕೋ ಪರೀಕ್ಷೆ

ಅಫ್ತಾಬ್ ತನ್ನ ಲಿವ್-ಇನ್ ಪಾಲುದಾರೆ ಶ್ರದ್ಧಾಳನ್ನು ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ತನ್ನ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದನು.

ವಶಕ್ಕೆ ಪಡೆದ ಆಯುಧ ಎಫ್‌ಎಸ್‌ಎಲ್ ಕೇಂದ್ರಕ್ಕೆ ರವಾನೆ

ವಶಕ್ಕೆ ಪಡೆದ ಆಯುಧ ಎಫ್‌ಎಸ್‌ಎಲ್ ಕೇಂದ್ರಕ್ಕೆ ರವಾನೆ

ಅಫ್ತಾಬ್‌ನನ್ನು ಬಂಧಿಸಿದ ನಂತರ, ದೆಹಲಿ ಪೊಲೀಸರು ಆತನ ನಿವಾಸದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಐದು ಚಾಕುಗಳು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವುಗಳನ್ನು ಅಪರಾಧದಲ್ಲಿ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಬ್ಬಳ ಉಂಗುರ ಮತ್ತೊಬ್ಬಳಿಗೆ ಆಗಿತ್ತು ಉಡುಗೊರೆ!

ಒಬ್ಬಳ ಉಂಗುರ ಮತ್ತೊಬ್ಬಳಿಗೆ ಆಗಿತ್ತು ಉಡುಗೊರೆ!

ಶ್ರದ್ಧಾ ವಾಕರ್ ಹತ್ಯೆಯ ಹಂತಕನ ವಿಚಾರಣೆ ವೇಳೆ ಅಫ್ತಾಬ್ ಪೂನಾವಾಲಾ ತನ್ನ ಮತ್ತೋರ್ವ ಪ್ರೇಯಸಿ ಬಗ್ಗೆ ತಿಳಿದು ಬಂದಿದೆ. ಮತ್ತೋರ್ವ ಯುವತಿಯ ಜೊತೆಗಿನ ಸಂಬಂಧವೇ ಶ್ರದ್ಧಾ ಕೊಲೆಗೆ ಕಾರಣವಾಯಿತೇ ಎಂಬ ಅನುಮಾನವೂ ಹುಟ್ಟಿಕೊಳ್ಳುತ್ತಿದೆ. ಈ ಮೊದಲು ಶ್ರದ್ಧಾ ವಾಕರ್ ಖರೀದಿಸಿದ ಉಂಗುರವೊಂದು ಅಫ್ತಾಬ್ ಪೂನಾವಾಲಾ ತನ್ನ ಇನ್ನೋರ್ವ ಪ್ರೇಯಸಿಗೆ ನೀಡಿದ್ದ ಎಂದು ತಿಳಿದು ಬಂದಿದೆ. ಈ ಮಾಹಿತಿ ಪಡೆದ ಪೊಲೀಸರು ಅಫ್ತಾಬ್ ಪೂನಾವಾಲಾ ಮತ್ತೋರ್ವ ಪ್ರೇಯಸಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಕೆ ಹಾಕಿಕೊಂಡಿದ್ದ ಉಂಗುರುವನ್ನು ಪಡೆದು ಪರಿಶೀಲನೆಗೆ ಒಳಪಡಿಸಿದ್ದಾರೆ.

ದೆಹಲಿಯಲ್ಲಿ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ

ದೆಹಲಿಯಲ್ಲಿ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ

ಈ ಹಿಂದಿನ ದಿನ ದೆಹಲಿಯ ರೋಹಿಣಿಯಲ್ಲಿ ಎಫ್‌ಎಸ್‌ಎಲ್ ಕೇಂದ್ರದಲ್ಲಿ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲಾಗಿತ್ತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅಫ್ತಾಬ್ ಎಫ್‌ಎಸ್‌ಎಲ್ ಪರೀಕ್ಷೆಯು ಬೆಳಿಗ್ಗೆ 9.50 ಕ್ಕೆ ಮತ್ತು ಸೆಷನ್‌ಗಳು ಸುಮಾರು 11 ಗಂಟೆಗೆ ಪ್ರಾರಂಭವಾಯಿತು. ಕಳೆದ ಶುಕ್ರವಾರ ಆರೋಪಿ ಅಫ್ತಾಬ್ ಅನ್ನು ಅದಾಗಲೇ ಮೂರು ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದನು, ಇದನ್ನು ಸುಳ್ಳು ಪತ್ತೆ ಪರೀಕ್ಷೆ ಎಂದೂ ಕರೆಯುತ್ತಾರೆ.

24 ಗಂಟೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಆರೋಪಿ

24 ಗಂಟೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಆರೋಪಿ

ತಿಹಾರ್‌ನಲ್ಲಿ, ಅಫ್ತಾಬ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದ್ದು, 24 ಗಂಟೆಗಳ ಸಿಸಿಟಿವಿ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ. ಇನ್ನೊಂದು ದಿಕ್ಕಿನಲ್ಲಿ ಆರೋಪಿ ಅಫ್ತಾಬ್ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿರುವ ಶ್ರದ್ಧಾ ವಾಕರ್ ಅವರ ತಲೆಬುರುಡೆ ಮತ್ತು ದೇಹದ ಇತರ ಕೆಲವು ಭಾಗಗಳನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಎಂದು ಗೊತ್ತಾಗಿದೆ.

English summary
Shraddha Walker Case: Delhi Police recovers weapons used by Aaftab to dismember.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X