ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಕೊಲೆ ಪ್ರಕರಣ: ಮಗು ಮತ್ತು ಕುಟುಂಬದ ಬಯಕೆ ಹೊಂದಿದ್ದ ಶ್ರದ್ಧಾ- ಸ್ನೇಹಿತೆ ಹೇಳಿಕೆ

|
Google Oneindia Kannada News

ದೆಹಲಿ ನವೆಂಬರ್ 15: 'ನಾನು ಮಗು ಪಡೆಯಲು ಬಯಸಿದ್ದೇನೆ. ನನ್ನದೊಂದು ಪುಟ್ಟ ಕುಟುಂಬ ಹೊಂದಲು ನಾನು ಯೋಚಿಸಿದ್ದೇನೆ' ಎಂದು ಸಾಯುವ ಮುನ್ನ ಶ್ರದ್ಧಾ ವಾಕರ್‌ ತನ್ನ ಸ್ನೇಹಿತೆ ಹಾಗೂ ಕಾರ್ಯಕರ್ತೆ ಶ್ರೇಹಾ ದರ್ಗಾಲ್ಕರ್ ಅವರಿಗೆ ಹೇಳಿದ್ದಳು ಎಂದು ತಿಳಿದು ಬಂದಿದೆ.

ಮುಂಬೈನ ಜುಹುದಲ್ಲಿ ಬೀಚ್ ಕ್ಲೀನ್-ಅಪ್ ಅಭಿಯಾನದ ಸಂದರ್ಭದಲ್ಲಿ ಧರ್ಗಲ್ಕರ್ ಅವರು ಶ್ರದ್ಧಾ ಅವರನ್ನ ಭೇಟಿಯಾಗಿದ್ದರು. ಅಲ್ಲಿ ಧರ್ಗಲ್ಕರ್ ಅವರು ಶ್ರದ್ಧಾ ವಾಕರ್ ಅವರೊಂದಿಗೆ ಸಂವಾದ ನಡೆಸಿದರು. ''ಅವಳು ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. ಆದರೆ ಅವಳು ಶಾಂತ ಸ್ವಭಾವದ ಮತ್ತು ಒಳ್ಳೆಯ ಹುಡುಗಿ. ಅವಳು ಮಗು ಮತ್ತು ಕುಟುಂಬವನ್ನು ಹೊಂದಲು ಬಯಸಿರುವುದಾಗಿ" ಹೇಳಿಕೊಂಡಿದ್ದಳು ಎಂದು ಧರ್ಗಲ್ಕರ್ ಹೇಳಿದ್ದಾರೆ.

ಶ್ರದ್ಧಾ ಕೊಲೆ ಪ್ರಕರಣ: ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ ಬೆಳೆಸಿದ್ದ ಆರೋಪಿ ಶ್ರದ್ಧಾ ಕೊಲೆ ಪ್ರಕರಣ: ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ ಬೆಳೆಸಿದ್ದ ಆರೋಪಿ

ಆಫ್ತಾಬ್ ಅಮೀನ್ ಪೂನಾವಾಲಾ ಮೇ 18 ರಂದು ತನ್ನ ಪ್ರೇಯಸಿ ಶ್ರದ್ದಾ ವಾಕರ್ ಅವರನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಹೊಸದಾಗಿ ಖರೀದಿಸಿದ 300-ಲೀಟರ್ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದನು. ಬಳಿಕ ಆಕೆಯ ದೇಹವನ್ನು 16 ದಿನಗಳ ಅವಧಿಯಲ್ಲಿ ಮೆಹ್ರೌಲಿ ಅರಣ್ಯ ಪ್ರದೇಶದಾದ್ಯಂತ ಎಸೆದಿದ್ದನು. ಬಳಿಕ ಶ್ರದ್ಧಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಆಫ್ತಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಅಫ್ತಾಬ್ ಬೆರಳಿಗೆ ಗಾಯ

ಅಫ್ತಾಬ್ ಬೆರಳಿಗೆ ಗಾಯ

ಅಫ್ತಾಬ್ ಪೂನವಾಲಾನ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಅಫ್ತಾಬ್ ಶ್ರದ್ಧಾಳ ಮೃತ ದೇಹವನ್ನು 35 ತುಂಡುಗಳಾಗಿ ಕತ್ತರಿಸುವ ವೇಳೆ ಅವನ ಬೆರಳಿಗೆ ಸ್ವಲ್ಪ ಗಾಯವಾಗಿತ್ತು. ಆ ವೇಳೆ ಆತ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಿದ್ದನು. ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಮೇ ತಿಂಗಳಲ್ಲಿ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಿದ್ದು, ಅಲ್ಲಿ ತನ್ನ ಬೆರಳು ಕತ್ತರಿಸಲ್ಪಟ್ಟಿದೆ ಎಂದು ಹೇಳಿದ್ದಾನೆ. ಆರೋಪಿ ಪೂನಾವಾಲಾ ಅವರ ಬಳಿ ಬಂದಿರುವುದಾಗಿ ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಾಗ, ಅವರು ತುಂಬಾ ಕೋಪಗೊಂಡ ಮತ್ತು ಚಂಚಲರಾಗಿ ಕಾಣುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಬೆರಳಿಗೆ ಆದ ಗಾಯದ ಬಗ್ಗೆ ವೈದ್ಯರಿಗೆ ಹೇಳಿದ್ದೇನು?

ಬೆರಳಿಗೆ ಆದ ಗಾಯದ ಬಗ್ಗೆ ವೈದ್ಯರಿಗೆ ಹೇಳಿದ್ದೇನು?

ಗಾಯ ಹೇಗಾಯಿತು ಎಂದು ವೈದ್ಯರು ಪೂನಾವಾಲಾ ಅವರನ್ನು ಕೇಳಿದಾಗ, ಅವರು ಬೆರಳು ಹಣ್ಣು ಕತ್ತರಿಸುತ್ತಿದ್ದಾಗ ಕಟ್ ಆಗಿದೆ ಎಂದು ಹೇಳಿದ್ದರು. ಮೇ ತಿಂಗಳಲ್ಲಿ ಅವರು ಮುಂಜಾನೆ ವೈದ್ಯರನ್ನು ತಲುಪಿದ್ದರು. ಗಾಯಗೊಂಡ ವ್ಯಕ್ತಿಯೊಬ್ಬರು ಬಂದಿದ್ದಾರೆ ಎಂದು ನನ್ನ ಸಹಾಯಕ ಹೇಳಿದರು ಎಂದು ವೈದ್ಯರು ಹೇಳಿದರು. ನಾನು ಅವನನ್ನು ನೋಡಿದಾಗ ಅವನ ಗಾಯವು ತುಂಬಾ ಗಂಭೀರವಾಗಿರಲಿಲ್ಲ. ಈ ಗಾಯ ಹೇಗೆ ಆಯಿತು ಎಂದು ಕೇಳಿದಾಗ ಹಣ್ಣು ಕತ್ತರಿಸುವಾಗ ಬೆರಳು ತುಂಡಾಯಿತು ಎಂದು ಹೇಳಿದ್ದರು. ಚಾಕುವಿನಿಂದ ಚಿಕ್ಕದಾಗಿ ಕಟ್ ಆಗಿದ್ದರಿಂದ ನನಗೇನೂ ಅನುಮಾನ ಬರಲಿಲ್ಲ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಅವರು ತುಂಬಾ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರ ಬಳಿ ಹೋಗಿದ್ದ ಅಫ್ತಾಬ್ ಹೇಗಿದ್ದ?

ವೈದ್ಯರ ಬಳಿ ಹೋಗಿದ್ದ ಅಫ್ತಾಬ್ ಹೇಗಿದ್ದ?

ಎರಡು ದಿನಗಳ ಹಿಂದೆ ಪೊಲೀಸರು ಪೂನಾವಾಲಾ ಅವರನ್ನು ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿ ಪೊಲೀಸರು ವೈದ್ಯರಿಗೆ ನೀವು ಚಿಕಿತ್ಸೆ ನೀಡಿದ್ದೀರಾ ಎಂದು ಕೇಳಿದರು. ನಾನು(ವೈದ್ಯರು) ಅವನನ್ನು ಗುರುತಿಸಿದೆ ಮತ್ತು ಹೌದು ನಾನು ಅವನಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ಹೇಳಿದೆ ಎಂದು ವೈದ್ಯರು ಹೇಳಿದ್ದಾರೆ. ಅವನು ನನ್ನೊಂದಿಗೆ ಮಾತನಾಡುವಾಗ ಅವನು ನನ್ನ ಕಣ್ಣುಗಳನ್ನು ನೋಡುತ್ತಿದ್ದನು. ಆತ ತುಂಬಾ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು. ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಆತ ಮುಂಬೈನಿಂದ ಬಂದಿದ್ದು, ಐಟಿ ಕ್ಷೇತ್ರದಲ್ಲಿ ಉತ್ತಮ ಅವಕಾಶಕ್ಕಾಗಿ ದೆಹಲಿಗೆ ಬಂದಿರುವುದಾಗಿ ತಿಳಿಸಿದರು.

ಶ್ರದ್ಧಾ ಕೊಲೆಯ ಹಿಂದೆ ಇದ್ದ ಆಕೆ

ಶ್ರದ್ಧಾ ಕೊಲೆಯ ಹಿಂದೆ ಇದ್ದ ಆಕೆ

ಅಫ್ತಾಬ್ ಬಂಧನದ ಬಳಿಕ ತಾನು ಶ್ರದ್ಧಾ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ಕೊಲೆಗೆ ಕಾರಣವನ್ನೂ ತಿಳಿಸಿದ್ದಾನೆ. ವಿಚಾರಣೆ ವೇಳೆ ಆತ ಮತ್ತೋರ್ವ ಯುವತಿಯೊಂದಿಗೆ ಸಂಪರ್ಕ ಹೊಂದಿರುವುದು ತಿಳಿದ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಅದನ್ನು ಒಪ್ಪದ ಅಫ್ತಾಬ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

English summary
Shraddha murder case: 'Shraddha wanted a baby and a family', says friend Shreha Dargalkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X