ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರದ್ಧಾ ಪ್ರಕರಣ: ಅಫ್ತಾಬ್‌ಗೆ ಇಂದು ಪಾಲಿಗ್ರಾಫ್ ಪರೀಕ್ಷೆ- ಡಿ.5ಕ್ಕೆ ನಾರ್ಕೋ ಪರೀಕ್ಷೆ

|
Google Oneindia Kannada News

ದೆಹಲಿ ನವೆಂಬರ್ 28: ಶ್ರದ್ಧಾ ಹಂತಕನ ವಿಕೃತಿ ಬಗೆದಷ್ಟು ಬಯಲಾಗುತ್ತಿದೆ. ಪ್ರೇಯಸಿಯ ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಅಫ್ತಾಬ್ ಪೂನಾವಾಲಾಗೆ ಡಿಸೆಂಬರ್ 5 ರಂದು ನಾರ್ಕೋ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ನವೆಂಬರ್ 28 ಮತ್ತು 29 ಮತ್ತು ಡಿಸೆಂಬರ್ 5 ರಂದು ಎಫ್‌ಎಸ್‌ಎಲ್ ನಿರ್ದೇಶಕರ ಮುಂದೆ ಅಫ್ತಾಬ್ ಪೂನಾವಾಲಾ ಅವರನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಆಡಳಿತಕ್ಕೆ ಆದೇಶಿಸಿದೆ. ಹಾಗಾಗಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಸೋಮವಾರ ನಾರ್ಕೋ ಪರೀಕ್ಷೆ ನಡೆಸಬೇಕೆಂಬ ನಿಯಮವಿರುವುದರಿಂದ ಡಿಸೆಂಬರ್ 5ರಂದು ಪರೀಕ್ಷೆ ನಡೆಯಬಹುದು ಎನ್ನಲಾಗುತ್ತಿದೆ.

ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಶನಿವಾರ ದೆಹಲಿ ನ್ಯಾಯಾಲಯ ಅಫ್ತಾಬ್ ಪೂನಾವಾಲಾ ಅವರನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್ (27) ಅನ್ನು ಮೇ ತಿಂಗಳಲ್ಲಿ ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದನ್ನು. ಬಳಿಕ ದೇಹದ ತುಂಡುಗಳನ್ನು ತನ್ನ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ನಂತರ ಹಲವಾರು ದಿನಗಳವರೆಗೆ ನಗರದಾದ್ಯಂತ ಎಸೆದಿದ್ದಾನೆ.

ಪೂನಾವಾಲಾಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ಪೂನಾವಾಲಾಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ಅಲ್ಲದೆ, ಅಫ್ತಾಬ್ ಪೂನಾವಾಲಾ ಅವರ ಪಾಲಿಗ್ರಾಫ್ ಪರೀಕ್ಷೆಯು ಇಂದು ನಡೆಯುವ ನಿರೀಕ್ಷೆಯಿದೆ. ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಹಾಜರುಪಡಿಸಲು ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ, ವಲಯ II) ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ.

ಪೂನಾವಾಲಾ ಅವರ ಪಾಲಿಗ್ರಾಫ್ ಪರೀಕ್ಷೆಯು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಪೂನಾವಾಲಾ ಅವರು ಪಾಲಿಗ್ರಾಫ್ ಪರೀಕ್ಷೆಗಾಗಿ ರೋಹಿಣಿಯಲ್ಲಿರುವ ಎಫ್‌ಎಸ್‌ಎಲ್‌ಗೆ ಶುಕ್ರವಾರ ಸಂಜೆ 4 ಗಂಟೆಗೆ ತಲುಪಿದರು ಮತ್ತು ಸಂಜೆ 6:30 ರ ನಂತರ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆಗೆ ಸಾಕೇತ್ ಜಿಲ್ಲಾ ನ್ಯಾಯಲಯ ಅನುಮತಿ ನೀಡಿದ ಬಳಿಕ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ತೀವ್ರವಾಗುತ್ತಿದ್ದಂತೆ ಕೆಮ್ಮು ಆರಂಭಿಸಿದ ಅಫ್ತಾಬ್ ನಾಡಿ ಮಿಡಿತ, ಹೃದಯ ಬಡಿತ, ಮಾನಸಿಕ ಒತ್ತಡ ಸರಿಯಾಗಿ ದಾಖಲಾಗದ ಹಾಗೇ ಮಾಡಿದ ಎನ್ನಲಾಗಿದೆ. ಅಫ್ತಾಬ್ ಉದ್ದೇಶ ಪೂರ್ವಕವಾಗಿ ಅನಾರೋಗ್ಯಕ್ಕೆ ಈಡಾದಂತೆ ಕಂಡು ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಿ ಶುಕ್ರವಾರ ಪರೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮುಂದಿನ ಪರೀಕ್ಷೆಯಲ್ಲಿ ಅಫ್ತಾಬ್ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದಲ್ಲಿ ನಾರ್ಕೊ ವಿಶ್ಲೇಷಣೆ ಪರೀಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ಹೇಳಿವೆ.

ಪಾಲಿಗ್ರಾಫ್ ಪರೀಕ್ಷೆ ಎಂದರೇನು?

ಪಾಲಿಗ್ರಾಫ್ ಪರೀಕ್ಷೆ ಎಂದರೇನು?

ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಹೇಳಲಾಗುತ್ತದೆ.

ಫ್ಲಾಟ್‌ನಿಂದ ಐದು ಚಾಕುಗಳು ವಶ

ಫ್ಲಾಟ್‌ನಿಂದ ಐದು ಚಾಕುಗಳು ವಶ

ದೆಹಲಿ ಪೊಲೀಸರು ಪೂನಾವಾಲಾ ಅವರ ಫ್ಲಾಟ್‌ನಿಂದ ಐದು ಚಾಕುಗಳನ್ನು ವಶಪಡಿಸಿಕೊಂಡರು ಮತ್ತು ಅವುಗಳನ್ನು ಅಪರಾಧಕ್ಕೆ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಲು ಬಳಸಿದ್ದ ಗರಗಸ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ಕಳೆದ ಗುರುವಾರ ಮಧ್ಯಾಹ್ನ ಹರಿಯಾಣದ ಫರಿದಾಬಾದ್‌ನ ಅರಣ್ಯ ಪ್ರದೇಶದಲ್ಲಿ ಸೂಟ್‌ಕೇಸ್‌ನಿಂದ ಮೃತದೇಹ ಪತ್ತೆಯಾಗಿದ್ದು, ಇದನ್ನು ದೆಹಲಿಯಲ್ಲಿ ಹತ್ಯೆಗೀಡಾದ ಮುಂಬೈನ 27 ವರ್ಷದ ಶ್ರದ್ಧಾ ವಾಕರ್ ಅವರ ಮೃತದೇಹ ಎಂದು ಶಂಕಿಸಲಾಗಿದೆ.ಮೃತ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸೂಟ್‌ಕೇಸ್ ನಲ್ಲಿಟ್ಟು ಎಸೆಯಲಾಗಿದೆ. ಅದರ ಬಳಿ ಬಟ್ಟೆ ಮತ್ತು ಬೆಲ್ಟ್ ಸಹ ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ, ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಮತ್ತು ಗುರುತು ತಪ್ಪಿಸಲು ದೇಹದ ಒಂದು ಭಾಗವನ್ನು ಇಲ್ಲಿ ಎಸೆಯಲಾಗಿದೆ ಎಂದು ಫರಿದಾಬಾದ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತೋರ್ವ ಪ್ರೇಯಸಿಗೆ ಅಫ್ತಾಬ್ ಕೊಟ್ಟಿದ್ದ ಉಂಗುರ

ಮತ್ತೋರ್ವ ಪ್ರೇಯಸಿಗೆ ಅಫ್ತಾಬ್ ಕೊಟ್ಟಿದ್ದ ಉಂಗುರ

ಶ್ರದ್ಧಾ ಹಂತಕನ ವಿಕೃತಿ ಬಗೆದಷ್ಟು ಬಯಲಾಗುತ್ತಿದೆ. ವಿಚಾರಣೆ ವೇಳೆ ಅಫ್ತಾಬ್ ಪೂನಾವಾಲಾ ತನ್ನ ಮತ್ತೋರ್ವ ಪ್ರೇಯಸಿ ಬಗ್ಗೆ ತಿಳಿದು ಬಂದಿದೆ. ಮತ್ತೋರ್ವ ಯುವತಿಯ ಜೊತೆಗಿನ ಈತನ ಸಂಬಂಧವೇ ಶ್ರದ್ಧಾ ಕೊಲೆಗೆ ಕಾರಣ ಎಂಬುದಕ್ಕೆ ಈ ವಿಚಾರಣೆ ಪುಷ್ಠಿ ನೀಡಿದೆ. ಶ್ರದ್ಧಾ ಖರೀದಿಸಿದ ಉಂಗುರವೊಂದು ಅಫ್ತಾಬ್ ಪೂನಾವಾಲಾ ತನ್ನ ಇನ್ನೋರ್ವ ಪ್ರೇಯಸಿಗೆ ನೀಡಿದ್ದ ಎಂದು ತಿಳಿದು ಬಂದಿದೆ. ಈ ಮಾಹಿತಿ ಪಡೆದ ಪೊಲೀಸರು ಅಫ್ತಾಬ್ ಪೂನಾವಾಲಾ ಮತ್ತೋರ್ವ ಪ್ರೇಯಸಿಯನ್ನ ಕರೆಸಿ ವಿಚಾರಣೆ ನಡೆಸಿದ್ದಾರೆ. ಆಕೆ ಹಾಕಿಕೊಂಡಿದ್ದ ಉಂಗುರುವನ್ನು ಪಡೆದು ಪರಿಶೀಲನೆಗೆ ಒಳಪಡಿಸಿದ್ದಾರೆಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಶ್ರದ್ಧಾ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

English summary
Aftab Poonawala accused in the Shraddha murder case, will undergo a polygraph test today and it is said that the narco test will be conducted on December 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X