ಭಾರತೀಯ ನೋಟಿನ ಮೇಲೆ ಶಿವಾಜಿ ಪೋಟೋ: ಬಿಜೆಪಿ ನಾಯಕನ ವಿವಾದ
ಮುಂಬೈ, ಅಕ್ಟೋಬರ್ 27: ಭಾರತೀಯ ಕರೆನ್ಸಿಯ ನೋಟವನ್ನು ಬದಲಾಯಿಸುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಲಹೆಯ ಕುರಿತು ಮರಾಠಾ ಐಕಾನ್ ಛತ್ರಪತಿ ಶಿವಾಜಿಯ ಚಿತ್ರವಿರುವ ಫೋಟೋ ಶಾಪ್ ಮಾಡಿದ 200 ರೂಪಾಯಿ ನೋಟನ್ನು ಬಿಜೆಪಿ ನಾಯಕ ನಿತೇಶ್ ರಾಣೆ ಹಂಚಿಕೊಂಡು ವಿವಾದ ಹುಟ್ಟುಹಾಕಿದ್ದಾರೆ.
ಕಂಕಾವ್ಲಿಯ ಶಾಸಕ ರಾಣೆ ಅವರು ಫೋಟೋವನ್ನು ಟ್ವೀಟ್ ಮಾಡಿ, "ಯೇ ಪರ್ಫೆಕ್ಟ್ ಹೈ (ಇದು ಪರಿಪೂರ್ಣವಾಗಿದೆ)" ಎಂದು ಶೀರ್ಷಿಕೆ ನೀಡಿದ್ದಾರೆ. ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಕೇಜ್ರಿವಾಲ್, ಭಾರತೀಯ ಕರೆನ್ಸಿಯ ಮೇಲೆ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಚಿತ್ರಿಸುವಂತೆ ಸೂಚಿಸಿದ್ದಾರೆ. ಇದು ಆರ್ಥಿಕತೆಯನ್ನು ಹೆಚ್ಚಿಸುವ ಒಂದು ಮಾರ್ಗವಾಗಿದೆ ಮತ್ತು ಇದು ಡಾಲರ್ ವಿರುದ್ಧ ರೂಪಾಯಿಯ ಕುಸಿತವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸೂಚಿಸಿದ್ದಾರೆ.
ಈ ಸಲಹೆಯ ಬಿಜೆಪಿ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಎಎಪಿ ಮುಖ್ಯಸ್ಥರ ಮೇಲೆ ಪಕ್ಷದ ಹಿರಿಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ತಮ್ಮ ಸರ್ಕಾರದ ದೋಷಗಳು ಮತ್ತು ಆಮ್ ಆದ್ಮಿ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜಕೀಯ ನಾಟಕ ದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ರಾಮಮಂದಿರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು
ಕೇಜ್ರಿವಾಲ್ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು ಅವರ ಯು-ಟರ್ನ್ ರಾಜಕೀಯದ ಮತ್ತೊಂದು ಭಾಗವಾಗಿದೆ. ಅವರ ಬೂಟಾಟಿಕೆ ಎದ್ದು ಕಾಣುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಸುದ್ದಿಗಾರರಿಗೆ ತಿಳಿಸಿದರು. ಪಕ್ಷದ ನಾಯಕ ಮನೋಜ್ ತಿವ್ರಿ, ಎಎಪಿ ಹಿಂದೂ ದೇವರು ಮತ್ತು ದೇವತೆಗಳನ್ನು ದುರುಪಯೋಗಪಡಿಸಿಕೊಂಡಿದೆ ಆದರೆ ಈಗ ಚುನಾವಣೆಗೆ ಮುನ್ನ ತಮ್ಮ ಮುಖವನ್ನು ಉಳಿಸಲು ಪ್ರಯತ್ನಿಸುತ್ತಿದೆ. ರಾಮಮಂದಿರಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಹೊಸ ಮುಖವಾಡ ಹಾಕಿಕೊಂಡು ಬಂದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಂದೂ ವಿರೋಧಿ ಧರ್ಮಾಂಧ
ಸಂದರ್ಶನವೊಂದರಲ್ಲಿ, ಹಿರಿಯ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಮಾತನಾಡಿ, ಅರವಿಂದ ಕೇಜ್ರಿವಾಲ್ ಮಹಾತ್ಮಾ ಗಾಂಧಿಯನ್ನು ಬದಿಗಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೇಜ್ರಿವಾರನ್ನು ಟ್ವಿಟ್ಟರ್‌ನಲ್ಲಿ ಹಿಂದೂ ವಿರೋಧಿ ಧರ್ಮಾಂಧ ಎಂದು ಕರೆದಿದ್ದಾರೆ.

ಓವೈಸಿ ಹನುಮಾನ್ ಚಾಲೀಸಾ ಪಠಿಸಬಹುದು
ದೆಹಲಿಯ ವಿಧಾನಸಭಾ ಚುನಾವಣೆಗೆ ಮುನ್ನ ದೂರದರ್ಶನದ ಸಂದರ್ಶನವೊಂದರಲ್ಲಿ ಕೇಜ್ರಿವಾಲ್ ಹನುಮಾನ್ ಚಾಲೀಸಾವನ್ನು ಪಠಿಸಿದಾಗ ಬಿಜೆಪಿ ಈ ಹಿಂದೆಯೂ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ಸದ್ಯಕ್ಕೆ ಕೇಜ್ರಿವಾಲ್ ಮಾತ್ರ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದ್ದಾರೆ. ಸ್ವಲ್ಪ ಕಾದು ನೋಡಿ ಮುಂದೊಂದು ದಿನ ಓವೈಸಿ ಹನುಮಾನ್ ಚಾಲೀಸಾವನ್ನು ಓದುವುದನ್ನು ನೀವು ಕಾಣಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
|
ದೇವತೆಗಳ ಆಶೀರ್ವಾದ ಬೇಕು: ಕೇಜ್ರಿವಾಲ್
ಮಹಾತ್ಮಾ ಗಾಂಧಿಯವರ ಚಿತ್ರಗಳ ಜೊತೆಗೆ ದೇವತೆಗಳ ಚಿತ್ರಗಳನ್ನು ಸೇರಿಸುವುದನ್ನು ಪರಿಗಣಿಸುವಂತೆ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ನಾನು ಹೇಳಿದಂತೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗಿದೆ. ಆದರೆ ಅದರೊಂದಿಗೆ ನಮಗೆ ದೇವರು ಮತ್ತು ದೇವತೆಗಳ ಆಶೀರ್ವಾದ ಬೇಕು. ಕರೆನ್ಸಿ ನೋಟುಗಳಲ್ಲಿ ಒಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ಮತ್ತು ಇನ್ನೊಂದು ಬದಿಯಲ್ಲಿ ಗಾಂಧೀಜಿ ಅವರ ಫೋಟೋ ಇದ್ದರೆ ಇಡೀ ದೇಶವೇ ಆಶೀರ್ವಾದ ಪಡೆಯುತ್ತದೆ ಎಂದು ಅವರು ಹೇಳಿ, ಗಣೇಶನ ಚಿತ್ರವು ಕೆಲವು ಕರೆನ್ಸಿಗಳ ಭಾಗವಾಗಿರುವ ಇಂಡೋನೇಷ್ಯಾದ ಉದಾಹರಣೆಯನ್ನೂ ಅವರು ಉಲ್ಲೇಖಿಸಿದ್ದಾರೆ.












Click it and Unblock the Notifications