ಸಲ್ಮಾನ್ ಖಾನ್ ವಿರುದ್ಧ ಕಿಡಿಕಾರಿದ ಶಿವಸೇನೆ

Posted By:
Subscribe to Oneindia Kannada

ನವದೆಹಲಿ, ಜೂನ್ 13: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವಾಗಬೇಕು ಎಂಬುವವರನ್ನು ಗಡಿಗೆ ಕಳುಹಿಸಬೇಕು ಎಂದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಶಿವಸೇನೆ ಟೀಕೆ ವ್ಯಕ್ತಪಡಿಸಿದೆ.

ಬುಧವಾರ, ತಮ್ಮ ಟ್ಯೂಬ್ ಲೈಟ್ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ''ಯುದ್ಧಕ್ಕಾಗಿ ಆಗ್ರಹಿಸುವವರನ್ನು ಗಡಿಗೆ ಕಳುಹಿಸಬೇಕು. ಆಗ ಅವರ ಕೈಗಳು ನಡುಗುತ್ತವೆ. ತಮ್ಮ ಜೀವನ ಹೇಗೆ ಯುದ್ಧದಲ್ಲಿ ಕೊನೆಗೊಳ್ಳುತ್ತದೆಯೋ ಎಂಬ ಭೀತಿ ಆವರಿಸುತ್ತದೆ. ಆಗ ಅವರಿಗೆ ಯುದ್ಧದ ಭೀಕರತೆ ಅರ್ಥವಾಗುತ್ತದೆ'' ಎಂದಿದ್ದರು.

'ಐ ಲವ್ ಯು' ಎಂದಿದಕ್ಕೆ ಕತ್ರಿನಾಳಿಂದ ರಣಬೀರ್‌ಗೆ ಕಪಾಳ ಮೋಕ್ಷ

Shiv Sena criticises Salman's statement on Indo-Pak relations

ಇದರ ಜತೆಗೆ, ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಯನ್ನು ಶಾಂತಿಯುತ ಮಾತುಕತೆಗಳ ಮೂಲಕವಷ್ಟೇ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಅವರ ಈ ಮಾತಿಗೆ ಶಿವಸೇನೆ ಕಿಡಿಕಾರಿದೆ. ''ಯುದ್ಧ ಆಗಲೇಬೇಕು ಎಂದು ಯಾರೂ ಬಯಸುತ್ತಿಲ್ಲ. ಆದರೂ, ಸಲ್ಮಾನ್ ಖಾನ್ ಹೇಳಿಕೆ ಆಕ್ಷೇಪಾರ್ಹ. ಪಾಕಿಸ್ತಾನದ ವಿಚಾರದಲ್ಲಿ ಅವರು ಪದೇ ಪದೇ ಎಲ್ಲೆ ಮೀರಿ ಮಾತನಾಡುತ್ತಾರೆ'' ಎಂದು ಹೇಳಿದೆ.

'ದಂಗಲ್' ಅತಿ ಹೆಚ್ಚು ಹಣ ಗಳಿಸಿದ 5ನೇ ನಾನ್-ಇಂಗ್ಲೀಷ್ ಚಿತ್ರ

ಆದರೆ, ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ಅವರ ತಂದೆ ಸಲೀಮ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಮಹಾನ್ ವ್ಯಕ್ತಿಗಳು, ಚರಿತ್ರಕಾರರು ಹೇಳಿದ್ದನ್ನೇ ನನ್ನ ಮಗನೂ ಹೇಳಿದ್ದಾನೆಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shiv Sena criticise bollywood actor Salman Khan's statement regarding India- Pakistan problems. Salman urged to send the people who want war between the nations, to border to fight.
Please Wait while comments are loading...