ತೆಹೆಲ್ಕಾ ರಕ್ಷಿಸಲು ಚಿದಂಬರಂಗೆ ಸೋನಿಯಾ ಸೂಚಿಸಿದ್ರುǃ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 07: ತೆಹೆಲ್ಕಾ ಸ್ಟಿಂಗ್ ಆಪರೇಷನ್ ವೆಸ್ಟ್ ಎಂಡ್ ಬಗ್ಗೆ ಸಮತಾ ಪಾರ್ಟಿಯ ಅಧ್ಯಕ್ಷೆ ಜಯಾ ಜೇಟ್ಲಿ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಗೆ ತೆಹಲ್ಕಾ ರಕ್ಷಣೆಗೆ ಮುಂದಾಗಿದ್ದರು. ಈ ಬಗ್ಗೆ ಅಂದಿನ ವಿತ್ತ ಸಚಿವ ಪಿ ಚಿದಂಬರಂಗೆ ಏನೆಲ್ಲ ನಿರ್ದೇಶನ ನೀಡಿದ್ದರು ಎಂಬುದನ್ನು ಜಯಾ ಅವರು ವಿವರಿಸಿದ್ದಾರೆ.

Shield Tehelka financiers, Sonia told Chidambaram claims book by Jaya Jaitly

2001ರಲ್ಲಿ ತೆಹೆಲ್ಕಾ ಆಪರೇಷನ್ ವೆಸ್ಟ್ ಎಂಡ್ ನಂತರ ಸಮತಾ ಪಾರ್ಟಿಯ ಮುಖಂಡ ಅಂದಿನ ರಕ್ಷಣಾ ಸಚಿವ ಸ್ಥಾನದಿಂದ ಜಾರ್ಜ್ ಫರ್ನಾಂಡೀಸ್ ಅವರು ಬಲವಂತವಾಗಿ ಕೆಳಗಿಳಿಯಬೇಕಾಯಿತು. ತೆಹೆಲ್ಕಾ ಹೂಡಿಕೆದಾರರನ್ನು ಚೆನ್ನಾಗಿ ನೋಡಿಕೊಳ್ಳಿ ಯಾವುದೇ ರೀತಿ ಅನ್ಯಾಯವಾಗಬಾರದು ಎಂದು ಅಂದಿನ ವಿತ್ತ ಸಚಿವ ಪಿ ಚಿದಂಬರಂಗೆ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದರು ಎಂದು ಜಯಾ ಜೇಟ್ಲಿ ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress president, Sonia Gandhi has been accused of having a hand in the Tehelka sting, "Operation West End." This allegation was made by former Samata party president, Jaya Jaitly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ