ಶಿಯಾ ಮುಸ್ಲಿಮರ ಗುಂಪಿಂದ ಗೋ ರಕ್ಷಣೆ ದಳ ರಚನೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಖನೌ, ಏಪ್ರಿಲ್ 8: ಶಿಯಾ ಮುಸ್ಲಿಮರ ಗುಂಪೊಂದು ತಂಡ ಮಾಡಿಕೊಂಡಿದ್ದು, ಉತ್ತರ ಪ್ರದೇಶದಲ್ಲಿ ಗೋಹತ್ಯೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಈ ಗುಂಪು ಗೋ ರಕ್ಷಕ ದಳ ಎಂಬ ಹೆಸರಿಂದ ಕರೆದುಕೊಂಡಿದ್ದು, ಉತ್ತರಪ್ರದೇಶ ರಾಜ್ಯದಾದ್ಯಂತ ಸಂಚರಿಸಿ, ಸದ್ಯಕ್ಕೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿರುವ ಗೋಹತ್ಯೆ ವಿಚಾರವಾಗಿ ಜಾಗೃತಿ ಮೂಡಿಸಲು ನಿರ್ಧರಿಸಿದೆ.

ಅಖಿಲ ಭಾರತ ಶಿಯಾ ವೈಯಕ್ತಿಕ ಮಂಡಳಿಯು ಈ ತಂಡದ ರಚನೆಗೆ ಕ್ರಮ ತೆಗೆದುಕೊಂಡಿದೆ. ಗೋ ಹತ್ಯೆ ವಿರುದ್ಧ ಫತ್ವಾ ಹೊರಡಿಸಿದೆ. ಗೋ ಹತ್ಯೆಯಿಂದ ಕೋಮು ಸಂಘರ್ಷ ಉದ್ಭವಿಸುತ್ತದೆ ಎಂದು ಅದು ಅಭಿಪ್ರಾಯ ಪಟ್ಟಿದೆ. ಶಿಯಾ ಮುಸ್ಲಿಮರ ಪಾಲಿನ ಪ್ರಮುಖ ಧಾರ್ಮಿಕ ಗುರು ಇರಾಕ್ ನ ಅಯೋತೊಲ್ಲಾ ಶೇಖ್ ಬಶೀರ್ ನಜಾಫಿ ಒಪ್ಪಿಗೆ ಮೇರೆಗೆ ಫತ್ವಾ ಹೊರಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.[ಹಸುವಿನ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶಕ್ಕೇ ನಂಬರ್ ವನ್]

Cow

ಗೋಹತ್ಯೆ ಎಂಬುದು ಪ್ರತಿದಿನ ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಶೀರ್ಷಿಕೆಯಾಗುತ್ತಿದೆ. ಗೋರಕ್ಷಣೆ ವಿಚಾರವಾಗಿ ನಡೆಯುತ್ತಿರುವ ಕೃತ್ಯದ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಆರು ರಾಜ್ಯಗಳಿಗೆ ವಿವರಣೆ ಕೇಳಿದೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಮುಖ್ಯಮಂತ್ರಿ ಆದ ನಂತರ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.[ಮಂಗಳೂರಿನ ಈ ಮುಸ್ತಫಾರಿಗೆ ಹಸುಗಳೇ ಮಕ್ಕಳು..!]

ಇದರಿಂದ ಉತ್ತರಪ್ರದೇಶದಲ್ಲಿ ಕಸಾಯಿಖಾನೆಗಳು ಅನಿರ್ದಿಷ್ಟಾವಧಿಗೆ ಮುಚ್ಚಲು ಕಾರಣವಾಗಿತ್ತು. ಆದರೆ ಮುಖ್ಯಮಂತ್ರಿ ಮಾತುಕತೆ ನಡೆಸಿದ ನಂತರ ಸಮಸ್ಯೆ ಬಗೆಹರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A group of Shia Muslims in Uttar Pradesh have formed a group to educate people on the issue. The group known as the Gau Rakshak Dal will go around the state and educate people on the issue which has become a subject matter of debate in the country.
Please Wait while comments are loading...