ಧೈರ್ಯವಿದ್ದರೆ ಪಕ್ಷದಿಂದ ಉಚ್ಚಾಟಿಸಿ: ಶತ್ರುಘ್ನ ಸಿನ್ಹ ಸವಾಲು

Posted By:
Subscribe to Oneindia Kannada

ನವದೆಹಲಿ, ಜ. 07: ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹ ಅವರು ಮತ್ತೊಮ್ಮೆ ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ. 'ಎನಿಥಿಂಗ್ ಬಟ್ ಖಾಮೋಶ್' ಆತ್ಮಕಥೆಯ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ.

ನಿರೀಕ್ಷೆಯಂತೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಿಹಾರ ಚುನಾವಣೆ ಹಾಗೂ ಬಿಜೆಪಿ ಸೋಲಿನ ಪರಾಮರ್ಶೆ ನಡೆಯಿತು. ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಯಶ್ವಂತ್ ಸಿನ್ಹ, ಕೀರ್ತಿ ಅಜಾದ್ ಅಲ್ಲದೆ ಕೇಂದ್ರ ಸಚಿವರಾದ ಹರ್ಷ್ ವರ್ಧನ್, ವಿಕೆ ಸಿಂಗ್ ಉಪಸ್ಥಿತರಿದ್ದರು. ಜೊತೆಗೆ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ, ಅಮರ್ ಸಿಂಗ್, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಕೂಡಾ ಬಂದಿದ್ದರು.

ಬಿಹಾರ ಚುನಾವಣೆ ಬಗ್ಗೆ ಶತ್ರುಘ್ನ ಸಿನ್ಹ ನೀಡಿದ ಹೇಳಿಕೆ, ಡಿಡಿಸಿಎ ಹಗರಣದ ಬಗ್ಗೆ ಕೀರ್ತಿ ಅಜಾದ್ ಬಹಿರಂಗ ಪಡಿಸಿದ ವಿಷಯಗಳಿಂದ ಬಿಜೆಪಿ ಭಾರಿ ಮುಖಭಂಗಕ್ಕೀಡಾಗಿತ್ತು. ಅಮಾನತುಗೊಂಡಿರುವ ಕೀರ್ತಿ ಅಜಾದ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿದರೂ ತೊಂದರೆಯಿಲ್ಲ. ಆದರೆ, ಬಿಜೆಪಿಗೆ ನ್ಯೂಟನ್ನಿನ ಮೂರನೇ ನಿಯಮ every reaction has its equal and opposite reaction,ತಿಳಿದಿದೆ ಎಂದು ಕೊಂಡಿದ್ದೇನೆ.

ನಾನು ಉಚ್ಚಾಟಿತರ ಪರ ನಿಂತಿದ್ದು ನಿಜ

ನಾನು ಉಚ್ಚಾಟಿತರ ಪರ ನಿಂತಿದ್ದು ನಿಜ

ನಾನು ಉಚ್ಚಾಟಿತರ ಪರ ನಿಂತಿದ್ದು ನಿಜ, ಈ ಹಿಂದೆ ಉಮಾಭಾರತಿ ಪರ ಪ್ರಚಾರ ಮಾಡಿದ್ದೆ. ಕೀರ್ತಿ ಅಜಾದ್ ಅವರು ಸತ್ಯದ ಹಾದಿಯಲ್ಲಿದ್ದಾರೆ. ಹೀಗಾಗಿ ಅವರ ಪರ ನಿಂತಿದ್ದೆ.

ಎನಿಥಿಂಗ್ ಬಟ್ ಖಾಮೋಶ್ ಪುಸ್ತಕ ಲೋಕಾರ್ಪಣೆ

ಎನಿಥಿಂಗ್ ಬಟ್ ಖಾಮೋಶ್ ಶತ್ರುಘ್ನ ಸಿನ್ಹಾ ಅವರ ಆತ್ಮಕಥೆ ಲೋಕಾರ್ಪಣೆ.

ಶತ್ರುಘ್ನ ಸಿನ್ಹಾ ನನಗಿಂತ ಉತ್ತಮ ನಟ : ಬಿಗ್ ಬಿ

ಶತ್ರುಘ್ನ ಸಿನ್ಹಾ ನನಗಿಂತ ಉತ್ತಮ ನಟ, ನೆಗಟಿವ್ ಶೇಡ್ ಪಾತ್ರಗಳಲ್ಲೂ ಮಿಂಚಿದ್ದಾರೆ. ರಾಜಕಾರಣಿಯಾಗಿ ಕೂಡಾ ಯಶಸ್ವಿಯಾಗಿದ್ದಾರೆ ಎಂದು ಬಿಗ್ ಬಿ ಅಮಿತಾಬ್ ಶುಭ ಹಾರೈಸಿದ್ದಾರೆ.

ನನ್ನ ಆತ್ಮಕಥೆ ಬಗ್ಗೆ ಗಾಳಿಸುದ್ದಿ ಓದಬೇಡಿ

ನನ್ನ ಆತ್ಮಕಥೆ ಬಗ್ಗೆ ಹಬ್ಬಿರುವ ಗಾಳಿಸುದ್ದಿ ಓದಬೇಡಿ ಬದಲಿಗೆ ನನ್ನ ಅತ್ಮಕಥೆ ಪೂರ್ತಿಯಾಗಿ ಓದಿ ಎಂದು ಶತ್ರುಘ್ನ ಸಿನ್ಹಾ ಮನವಿ ಮಾಡಿದ್ದಾರೆ.

ಅರುಣ್ ಜೇಟ್ಲಿಗೆ ಕಿವಿಮಾತು ಹೇಳಿದ ಸಿನ್ಹಾ

ಡಿಡಿಸಿಎ ಪ್ರಕರಣದಲ್ಲಿ ಸಿಲುಕಿರುವ ಅರುಣ್ ಜೇಟ್ಲಿಗೆ ಕಿವಿಮಾತು ಹೇಳಿದ ಸಿನ್ಹಾ, ಅಡ್ವಾಣಿ ಅವರ ಹಾದಿ ಹಿಡಿಯುವಂತೆ ಸೂಚಿಸಿದ್ದಾರೆ.

ರಾಜೇಶ್ ಖನ್ನ ವಿರುದ್ಧ ಸ್ಪರ್ಧಿಸಿದ್ದು ದೊಡ್ಡ ಪ್ರಮಾದ

ರಾಜೇಶ್ ಖನ್ನ ವಿರುದ್ಧ ಸ್ಪರ್ಧಿಸಿದ್ದು ದೊಡ್ಡ ಪ್ರಮಾದ

ಬಾಲಿವುಡ್ ನ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನ ವಿರುದ್ಧ ಸ್ಪರ್ಧಿಸಿದ್ದು ನನ್ನ ಜೀವನದ ದೊಡ್ಡ ಪ್ರಮಾದ ಇದಕ್ಕಾಗಿ ನಾನು ಆತನ ಕ್ಷಮೆಯನ್ನು ಕೋರಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ಆದರೆ, ನನ್ನ ಗುರು ಎಲ್ ಕೆ ಅಡ್ವಾಣಿ ಅವರ ಮಾತಿಗೆ ಬೆಲೆ ಕೊಟ್ಟು ನಾನು 1991ರ ಬೈ ಎಲೆಕ್ಷನ್ ಮೂಲಕ ರಾಜಕೀಯ ಎಂಟ್ರಿ ಪಡೆದೆ ಎಂದಿದ್ದಾರೆ.

ಸೋಲು ನನಗೆ ಪಾಠವನ್ನು ಕಲಿಸಿದೆ

ಸೋಲು ನನಗೆ ಪಾಠವನ್ನು ಕಲಿಸಿದೆ

ಎಲೆಕ್ಷನ್ ಸೋತ ನನಗೆ ಅಶೋಕ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಆದ ಅಪಮಾನ ಇನ್ನೂ ನೆನಪಿದೆ. ಜೀವನದಲ್ಲಿ ಮೊದಲ ಬಾರಿಗೆ ತಿರಸ್ಕಾರದ ಪಟ್ಟ ಹೊತ್ತು ತಿರುಗಬೇಕಾಯಿತು. ಪಕ್ಷದ ಕಚೇರಿಯಲ್ಲಿ ಕೂರಲು ಸ್ಥಾನ ಸಿಗದ ಪರಿಸ್ಥಿತಿ ಎದುರಿಸಬೇಕಾಯಿತು ಇದರಿಂದ ಒಳ್ಳೆ ಪಾಠ ಕಲಿತೆ ಎಂದಿದ್ದಾರೆ.

ಶತ್ರುಘ್ನ ಸಿನ್ಹ ಆತ್ಮಕಥೆ ಬಗ್ಗೆ ಟ್ವಿಟ್ಟರಲ್ಲಿ ಗುಸುಗುಸು

ಶತ್ರುಘ್ನ ಸಿನ್ಹ ಆತ್ಮಕಥೆ ಬಗ್ಗೆ ಟ್ವಿಟ್ಟರಲ್ಲಿ ಗುಸುಗುಸು

ಪುತ್ರಿ, ನಟಿ ಸೋನಾಕ್ಷಿ ಸಿನ್ಹಾಗೆ ಪ್ರತಿ ನೀಡಿದ ಶತ್ರುಘ್ನ ಸಿನ್ಹ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I have done nothing against the party, but they can expel me if they want. If they do expel me though, they shouldn't forget Newton's third law; every reaction has its equal and opposite reaction," Actor-turned politician Shatrughan Sinha said.
Please Wait while comments are loading...