ರಾಜ್ಯಪಾಲ ಹುದ್ದೆಗೆ ಶಂಕರಮೂರ್ತಿ, ಆನಂದಿ ಬೆನ್ ಹೆಸರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 18 : ತಮಿಳುನಾಡಿನ ಮುಂದಿನ ರಾಜ್ಯಪಾಲರು ಯಾರು? ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ. ಸದ್ಯ, ರಾಜ್ಯಪಾಲರಾಗಿರುವ ಕೆ.ರೋಸಯ್ಯ ಅವರ ಅವಧಿ ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದ್ದು, ನೂತನ ರಾಜ್ಯಪಾಲರ ನೇಮಕವಾಗಬೇಕಿದೆ.

ತಮಿಳುನಾಡು ರಾಜ್ಯಪಾಲರ ಹುದ್ದೆಗೆ ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಡಿ.ಎಚ್.ಶಂಕರಮೂರ್ತಿ ಅವರ ಹೆಸರು ಬಹುತೇಕ ಅಂತಿಮವಾಗಿತ್ತು. ಆದರೆ, ಈಗ ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹೆಸರು ಕೇಳಿಬರುತ್ತಿದೆ.[ತಮಿಳುನಾಡು ರಾಜ್ಯಪಾಲರಾಗಿ ಡಿ.ಎಚ್.ಶಂಕರಮೂರ್ತಿ ಆಯ್ಕೆ?]

Anandiben Patel

ಕೆ.ರೋಸಯ್ಯ ಅವರ ಅವಧಿ ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ನೇಮಕವಾದ ರಾಜ್ಯಪಾಲರಲ್ಲಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿರುವುದು ರೋಸಯ್ಯ ಅವರು ಮಾತ್ರ. ರೋಸಯ್ಯ ಅವರ ನಂತರ ಡಿ.ಎಚ್.ಶಂಕರಮೂರ್ತಿ ಅವರು ರಾಜ್ಯಪಾಲರಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.[ಗುಜರಾತಿಗೆ ವಿಜಯ್ ರೂಪಾನಿ ಸಿಎಂ, ನಿತಿನ್ ಪಟೇಲ್ ಡಿಸಿಎಂ]

ಹೆಸರು ಅಂತಿಮವಾಗಿತ್ತು : ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಹೆಸರು ರಾಜ್ಯಪಾಲ ಹುದ್ದೆಗೆ ಬಹುತೇಕ ಅಂತಿಮವಾಗಿತ್ತು. ಕೆಲವು ದಿನಗಳ ಹಿಂದೆ ಅವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳುಲು ಸಿದ್ಧರಾಗುವಂತೆ ಸೂಚನೆ ನೀಡಿದ್ದರು.[ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014]

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮೊದಲಿನಿಂದಲೂ ಕಾವೇರಿ ನದಿ ನೀರು ಹಂಚಿಕೆ ವಿವಾದವಿದೆ. ಆದ್ದರಿಂದ, ಕರ್ನಾಟಕದ ಡಿ.ಎಚ್.ಶಂಕರಮೂರ್ತಿ ಅವರ ಬದಲಾಗಿ ಆನಂದಿಬೆನ್ ಪಟೇಲ್ ಅವರ ಹೆಸರನ್ನು ಪರಿಗಣಿಸಲಾಯಿತು.

Shankarmurthy

ಕರ್ನಾಟಕದವರನ್ನು ರಾಜ್ಯಪಾಲರಾಗಿ ನೇಮಕ ಮಾಡುವ ಬಗ್ಗೆ ಬಿಜೆಪಿ ರಾಷ್ಟ್ರೀ ನಾಯಕರ ಜೊತೆ ತಮಿಳುನಾಡಿನವರು ಮಾತುಕತೆ ನಡೆಸಿದ್ದಾರೆ ಎಂಬುದು ಸದ್ಯದ ಸುದ್ದಿ. ಮುಖ್ಯಮಂತ್ರಿ ಜಯಲಲಿತಾ ಅವರು ಮಹಿಳೆಯರನ್ನು ನೇಮಕ ಮಾಡುವ ಕುರಿತು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಒನ್ ಇಂಡಿಯಾ ಜೊತೆ ಮಾತನಾಡಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಹಲವು ಹೊಸ ಹೆಸರುಗಳು ಪರಿಶೀಲನೆಯಲ್ಲಿದ್ದು, ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is still some suspense remaining on who would replace K Rosaiah as the Governor of Tamil Nadu. While the name of senior BJP leader, D.H.Shankarmurthy was almost finalized there appears to be a twist in the tale.
Please Wait while comments are loading...