ಥೇಟ್ ಹಿಂದುಗಳಂತೆ ಪಂಚೆ ತೊಟ್ಟು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್
ಸಾಕಷ್ಟು ವಿರೋಧಗಳ ನಡುವೆಯೂ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಾಂಪ್ರದಾಯಿಕ ಬಿಳಿ ಅಂಗಿ, ಧೋತಿ ಉಡುಪನ್ನು ಧರಿಸಿ ಶಾರುಖ್ ಖಾನ್ ವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಪಡೆದಿದ್ದಾರೆ.
ವೈಷ್ಣೋದೇವಿ ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ನಂತರ, ಸೂಪರ್ ಸ್ಟಾರ್ ಶಾರುಖ್ ಖಾನ್ ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ ತಿರುಪತಿಗೆ ಆಗಮಿಸಿದರು. ತಮ್ಮ ಮುಂಬರುವ ಚಿತ್ರ ಜವಾನ್ ಬಿಡುಗಡೆಗೆ ತಯಾರಿ ನಡೆಸುತ್ತಿರುವ ಶಾರುಖ್ ಖಾನ್ ಸಹನಟಿ ನಯನತಾರಾ ಮತ್ತು ಪುತ್ರಿ ಸುಹಾನಾ ಖಾನ್ ಅವರೊಂದಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಆದರೆ ಇದನ್ನು ಕೆಲವರು ವಿರೋಧಿಸಿದ್ದರು. 'ದೇವಸ್ಥಾನದ ಆಡಳಿತ ಮಂಡಳಿಯವರು ಇವರುಗಳನ್ನು ಏಕೆ ಸೇರಿಸಿಕೊಳ್ಳಬೇಕು' ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಶಾರುಖ್ ಖಾನ್ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಬಾರದು ಎಂದು ಅನೇಕರು ಆಗ್ರಹಿಸಿದ್ದರು. ಇದರ ಹೊರತಾಗಿ ಬಾಲಿವುಡ್ ಬಾದ್‌ಶಾ ಇಂದು ಥೇಟ್ ಹಿಂದುಗಳಂತೆ ಪಂಚೆ ತೊಟ್ಟು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಖಾರುಖ್ ಖಾನ್ ಅವರ ಪತ್ನಿ ಗೌರಿ ಹಿಂದೂ ಆಗಿದ್ದರು. ಈ ಕಾರಣದಿಂದಾಗಿ ಶಾರುಖ್ ಖಾನ್ ಕೂಡ ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿದ್ದಾರೆ. ಪತ್ನಿ ಹಿಂದೂ ಆಗಿರುವುದರಿಂದ ಶಾರುಖ್ ಖಾನ್ ಕೂಡ ಗಣೇಶನ ಪೂಜೆ ಸೇರಿದಂತೆ ಇತರ ದೇವಸ್ಥಾನಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಈ ಹಿಂದೆ ಕೂಡ ಅವರು ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಚಿತ್ರ ತಂಡ ಇತ್ತೀಚೆಗೆ ಜವಾನ್‌ನ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಭೇಟಿ ನೀಡಿದ್ದರು. ಈ ವೇಳೆ ಪಾತ್ರವರ್ಗ ಮತ್ತು ಸಿಬ್ಬಂದಿ ಮತ್ತು ತಮಿಳು ಉದ್ಯಮದ ಪ್ರತಿಭಾವಂತ ನಟರು ಮತ್ತು ಸಂಗೀತಗಾರರು ಭಾಗವಹಿಸಿದ್ದರು.
ಜವಾನ್ ಟ್ರೇಲರ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಅವರ ಹಲವು ಪೋಸ್ಟರ್‌ಗಳು ಹೇಳುತ್ತಿವೆ. ಇದು ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಸಂಜೀತಾ ಭಟ್ಟಾಚಾರ್ಯ, ಗಿರಿಜಾ ಓಕ್, ಲೆಹರ್ ಖಾನ್ ಮತ್ತು ಆಲಿಯಾ ಖುರೇಷಿ ಈ ಆರು ಮಹಿಳೆಯರ ತಂಡ ಮೆಟ್ರೋವನ್ನು ಹೈಜಾಕ್ ಮಾಡುವುದನ್ನು ತೋರಿಸುವ ಮೂಲಕ ಪ್ರಾರಂಭವಾಗಿದೆ.












Click it and Unblock the Notifications