India Cold Wave: ದೆಹಲಿಯಲ್ಲಿ 11ವರ್ಷದಲ್ಲೇ ದಾಖಲೆಯ ಚಳಿ! ತಾಪಮಾನ ಕುಸಿತ, ಈ ಭಾಗಗಳಿಗೆ ಮಳೆ ಎಚ್ಚರಿಕೆ
India Weather Alert: ದೇಶಾದ್ಯಂತ ಗರಿಷ್ಠ ತಾಪಮಾನದ ಜೊತೆಗೆ ಅತ್ಯಧಿಕ ಮೈಕೊರೆವ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ಆರೋಗ್ಯ ಕಳವಳ ಉಂಟು ಮಾಡಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಕುಸಿತವಾಗಿದೆ. ಎಲ್ಲೆಡೆ ಚಳಿ ಆವರಿಸಿದೆ. ಕಳೆದ ಸಾಮಾನ್ಯದಿನಗಳಿಗಿಂತಲೂ ಹೆಚ್ಚಿನ ಪ್ರಮಾಣದ ಚಳಿ ದಾಖಲಾಗಿದೆ. ದೆಹಲಿ ಕನಿಷ್ಠ ತಾಪಮಾನ ದಶಕದ ಬಳಿಕ ಒಂದಂಕಿಗೆ ಇಳಿದಿದೆ ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.
ದೆಹಲಿ, ಬಿಹಾರ, ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಶೀತಗಾಳಿ ಬೀಸುತ್ತಿದೆ. ನವೆಂಬರ್ ಎರಡನೇ ವಾರದ ನಂತರ ಶೀತ ಅಲೆಯ ತೀವ್ರತೆ ಹೆಚ್ಚಾಗುತ್ತಿದೆ. ನವೆಂಬರ್ ನಲ್ಲೇ ಚಳಿಗಾಲ ಆರಂಭದಂತೆ ಭಾಸವಾಗುತ್ತಿದೆ. ಭಾರತ ವಿವಿಧ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2°C ನಿಂದ 6°C ನಷ್ಟು ಕುಸಿತಿದೆ. ದೆಹಲಿ ಸೇರಿದಂತೆ ಇತರ ಕಡೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಕನಿಷ್ಠ ತಾಪಮಾನವು ಇದೇ ರೀತಿ ಮುಂದುವರಿಯಲಿದೆ.

11 ವರ್ಷದಲ್ಲಿ ದೆಹಲಿಯಲ್ಲಿ ದಾಖಲೆಯ ಚಳಿ
ಪ್ರತಿ ವರ್ಷ ದೆಹಲಿಯು ನವೆಂಬರ್ ತಿಂಗಳಲ್ಲಿ ಅಸಮಾನ್ಯ ಮಂಜು ಸಹಿತ ಶೀತದ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ. ನವೆಂಬರ್ 15 ರಿಂದ, ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಆಗಿದೆ. 11 ವರ್ಷಗಳಲ್ಲಿ ತನ್ನ ದೆಹಲಿ ಕನಿಷ್ಠ ತಾಪಮಾನ ಒಂದಂಕಿಗೆ ಇಳಿಕೆ ಆಗಿದೆ. ಬೆಳಗ್ಗೆ ಮತ್ತು ಸಂಜೆ, ರಾತ್ರಿಯಿಡಿ ಚಳಿಯಿಂದ ನಡುಗುತ್ತದೆ. ಹಲವು ಭಾಗಗಳಲ್ಲಿ ಮಧ್ಯಾಹ್ನ ತೀವ್ರ ಬಿಸಿಸಲು ದಾಖಲಾಗುತ್ತಿದೆ. ನಂತರದ ಸಮಯದಲ್ಲಿ ಮೈಕೊರೆವ ಚಳಿ ದಾಖಲಾಗುತ್ತಿದೆ.
ಮೊನ್ನೆ ಸೋಮವಾರ ದೆಹಲಿ ಕನಿಷ್ಠ ಉಷ್ಣಾಂಶ 8.7 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ 3.6 ಡಿಗ್ರಿ ಮತ್ತು ಮೂರು ವರ್ಷಗಳಲ್ಲಿ ನವೆಂಬರ್‌ನಲ್ಲಿ ಅತೀ ಕನಿಷ್ಠ ಎನ್ನಲಾಗಿದೆ. ದೆಹಲಿ ರಾತ್ರಿ ತಾಪಮಾನವು 9-11 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಇಂದಿನಿಂದ ನವೆಂಬರ್ 24ರವರೆಗೆ ಮಂಜು ಸಹಿತ ಚಳಿ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಅಧಿಕ ಚಳಿ, ಮಂಜಿನ ವಾತಾವರಣ ಹೆಚ್ಚಾಗಿದೆ. ಶೀತದ ಅಲೆಯ ಪ್ರಭಾವಕ್ಕೆ ನಿವಾಸಿಗಳು ನಡುಗುತ್ತಿದ್ದಾರೆ. ಬೆಳಗ್ಗೆ, ರಾತ್ರಿ ಹೊರ ಓಡಾಟದ ಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಮಧ್ಯಪ್ರದೇಶದ ಕೆಲವೆಡೆ ತೀವ್ರ ಶೀತದ ಅಲೆ ನಿರೀಕ್ಷಿಸಲಾಗಿದೆ.

ಉಳಿದಂತೆ ಕೊಂಕಣ, ಗೋವಾ, ಮಧ್ಯಪ್ರದೇಶದ ಪಶ್ಚಿಮ ಭಾಗ, ಸೌರಾಷ್ಟ್ರ, ಕಚ್, ವಿದರ್ಭ, ತೆಲಂಗಾಣ, ಜಾರ್ಖಂಡ್, ಚತ್ತೀಸ್‌ಗಢ ಮತ್ತು ಒಡಿಶಾದ ಪ್ರತ್ಯೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 05 ಡಿಗ್ರಿ ಕುಸಿಯಲಿದೆ. ಸಂಕ್ಷಿಪ್ತ ತಾಪಮಾನ ಏರಿಕೆ ಸಾಧ್ಯತೆ ಇದೆ. ದೇಶದ ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಮುಂದಿನ ನಾಲ್ಕು ದಿನ ಕನಿಷ್ಠ ಉಷ್ಣಾಂಶ 2°C ರಿಂದ 3°C ನಷ್ಟು ಹೆಚ್ಚಾಗಬಹುದು.
ಕಡಿಮೆ ಒತ್ತಡ ಪ್ರದೇಶ: ಈ ಭಾಗಗಳಲ್ಲಿ ಮಳೆ ನಿರೀಕ್ಷೆ
ಬಂಗಾಳಕೊಲ್ಲಿ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಚಂಡಮಾರುತ ಪ್ರಸರಣ ಸಹ ಇದೆ. ನವೆಂಬರ್ 21ರವರೆಗೆ ಶೀತ ಅಲೆ ಎಚ್ಚರಿಕೆ ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಉಷ್ಣ ಅಲೆ ಕಾಣಬಹುದು. ಭಾರತದ ದಕ್ಷಿಣ ಭಾಗಗಳಲ್ಲಿ ಪ್ರತ್ಯೇಕ ಕಡೆಗಳಲ್ಲಿ ಮಳೆ ಆಗಲಿದೆ. ನವೆಂಬರ್ 24 ರವರೆಗೆ ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶನಿವಾರದವರೆಗೆ ಭಾರೀ ಮಳೆ ಸಾಧ್ಯತೆ ಇದೆ. ಕೇರಳ, ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾದಲ್ಲಿ ಗುಡುಗು ಮಿಂಚು ಸಹಿತ ಜೋರು ಮಳೆ ನಿರೀಕ್ಷೆ ಇದೆ.












Click it and Unblock the Notifications