ಗುಜರಾತ್ ಕಾಂಗ್ರೆಸ್ ಗೆ ಹಿನ್ನಡೆ, ಏಕಾಂಗಿಯಾಗಿ ಎನ್‌ಸಿಪಿ ಕಣಕ್ಕೆ
ಅಹಮದಾಬಾದ್, ನವೆಂಬರ್ 20: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇದೀಗ ಉಲ್ಟಾ ಹೊಡೆದಿದೆ.
ತಾನು ಏಕಾಂಗಿಯಾಗಿ ಗುಜರಾತ್ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವುದಾಗಿ ಎನ್‌ಸಿಪಿ ಹೇಳಿದ್ದು ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.

"ನಾವು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಗುಜರಾತ್ ನಲ್ಲಿ ಕಣಕ್ಕಿಳಿಯಬೇಕು ಎಂದುಕೊಂಡಿದ್ದೆವು. ಆರಂಭದಲ್ಲಿ ಕಾಂಗ್ರೆಸ್ ಜತೆ ಈ ಬಗ್ಗೆ ಮಾತುಕತೆಯನ್ನೂ ನಡೆಸಿದ್ದೆವು. ಆದರೆ ಈ ಬಗ್ಗೆ ಗಂಭೀರವಾಗದ ಕಾಂಗ್ರೆಸ್ ಹೊಂದಾಣಿಕೆಯನ್ನು ಮುಂದೂಡುತ್ತಾ ಬಂತು. ಹೀಗಾಗಿ ನಾವು ಏಕಾಂಗಿಯಾಗಿ ಕಣಕ್ಕಿಳಿಯಲಿದ್ದೇವೆ. ನಾವು ಏಕಾಂಗಿಯಾಗಿ ಕಣಕ್ಕಿಳಿದರೂ ಹಿಂದಿನ ಬಾರಿಗಿಂತ ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂಬ ವಿಶ್ವಾಸವಿದೆ," ಎಂಬುದಾಗಿ ಎನ್‌ಸಿಪಿ ನಾಯಕ ಪ್ರಫುಲ್ಲ ಪಟೇಲ್ ಹೇಳಿದ್ದಾರೆ.
ಅತ್ತ ಪಾಟೀದಾರ್ ಸಮುದಾಯದ ಆಕ್ರೋಶಕ್ಕೂ ಗುರಿಯಾಗಿರುವ ಕಾಂಗ್ರೆಸ್ ಇತ್ತ ಎನ್‌ಸಿಪಿ ಬೆಂಬಲವನ್ನೂ ಕಳೆದುಕೊಂಡು ಬಸವಳಿದಿದೆ. ಹೀಗೆ ದಿನಗಳ ಅಂತರದಲ್ಲಿ ಎರಡು ಭಾರೀ ಹೊಡೆತ ತಿಂದಿದೆ ಕೈ ಪಕ್ಷ.












Click it and Unblock the Notifications