ಜಲವಿವಾದಗಳ ವಕೀಲ ಅನಿಲ್ ದಿವಾನ್ ಸಾವಿಗೆ ಸಿಎಂ ಸಂತಾಪ

Subscribe to Oneindia Kannada

ಬೆಂಗಳೂರು, ಮಾರ್ಚ್ 20: ಹಿರಿಯ ವಕೀಲ ಹಾಗೂ ಖ್ಯಾತ ಸಂವಿಧಾನ ತಜ್ಞ ಅನಿಲ್ ಬಿ ದಿವಾನ್ ಇಂದು ನವದೆಹಲಿಯಲ್ಲಿ ಅಸುನೀಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಕಾವೇರಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದಗಳಲ್ಲಿ ದಿವಾನ್ ಕರ್ನಾಟಕ ಪರ ಸುಪ್ರೀಂ ಕೋರ್ಟಿನಲ್ಲಿ ವಕಾಲತ್ತು ವಹಿಸಿದ್ದರು. ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.[ಸರಕಾರಕ್ಕೆ 39 ಕೋಟಿ ಉಂಡೆನಾಮ ತಿಕ್ಕಿ ಸಿಕ್ಕಿಬಿದ್ದ ಸಪ್ತ ಭ್ರಷ್ಟರು]

Senior SC lawyer Anil Divan passed away

"ಜಲ ವಿವಾದಗಳ ರಾಜ್ಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಅನಿಲ್ ದಿವಾನ್ ಸಾವು ದುಃಖ ತಂದಿದೆ. ರಾಜ್ಯಕ್ಕೆ ಅವರು ನೀಡಿದ ಸೇವೆ ಅವಿಸ್ಮರಣೀಯ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


1930ರ ಮೇ 15ರಂದು ಜನಿಸಿದ್ದ ಅನಿಲ್ ದಿವಾನ್ ಅವರದ್ದು ವಕೀಲ ವೃತ್ತಿಯಲ್ಲಿ ದೊಡ್ಡ ಹೆಸರು. ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಸಹ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಹಲವು ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರ ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಿದ್ದರು. ಈ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದರು.[ನಮಸ್ಕಾರ, ದಿಗ್ವಿಜಯ್ ಸಿಂಗ್ ಸರ್, ಹೋಗಿ ಬನ್ನಿ!]

ಅನಿಲ್ ದಿವಾನ್ ಪುತ್ರ ಶ್ಯಾಮ್ ದಿವಾನ್ ಸುಪ್ರೀಂ ಕೊರ್ಟ್ ವಕೀಲರಾಗಿದ್ದು ಅವರ ಸೊಸೆ ಮಾಧವಿಯೂ ನ್ಯಾಯಾಂಗ ವೃತ್ತಿಯಲ್ಲಿದ್ದಾರೆ.

(ಚಿತ್ರ ಕೃಪೆ: ಫೇಸ್ಬುಕ್, ಬ್ರಿಜೇಶ್ ಕಾಳಪ್ಪ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anil Divan, a senior lawyer of Supreme Court and constitutional expert passed away today in New Delhi. He also represented Karnataka in Cauvery and Krishna river water disputes.
Please Wait while comments are loading...