ಉತ್ತರಪ್ರದೇಶ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆ

Written By:
Subscribe to Oneindia Kannada

ನವದೆಹಲಿ, ಲಕ್ನೋ 21 (ಪಿಟಿಐ) : ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಮತ್ತು ರಾಹುಲ್ ಗಾಂಧಿ ಕಾರ್ಯವೈಖರಿಗೆ ಬೇಸತ್ತು ಉತ್ತರಪ್ರದೇಶದಲ್ಲಿ ಪಕ್ಷದ 'ಫೇಸ್' ಎಂದೇ ಕರೆಯಲ್ಪಡುತ್ತಿದ್ದ ಹಿರಿಯ ನಾಯಕಿ ರೀಟಾ ಬಹುಗುಣ ಜೋಷಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ತಮ್ಮ ಪೂರ್ವಜರ ರಾಜಕೀಯ ಕರ್ಮಭೂಮಿ ಉತ್ತರಪ್ರದೇಶದಲ್ಲಿ ನೆಲೆಯೂರಲು ಭಾರೀ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಘಟನೆ ತೀವ್ರ ಹಿನ್ನಡೆ ಎಂದೇ ಹೇಳಲಾಗುತ್ತಿದೆ. (ಉ.ಪ್ರ ಚುನಾವಣಾ ಸಮೀಕ್ಷೆ, ರಂಗೇರುತ್ತಿರುವ ಬಿಜೆಪಿ ಕನಸು)

ಉತ್ತರಪ್ರದೇಶ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರಾಗಿದ್ದ ರೀಟಾ ಬಹುಗುಣ ಜೋಷಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಗುರುವಾರ (ಅ 20) ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ರೀಟಾ ಬಹುಗುಣ ಅವರಿಗೆ ಹೃದಯಪೂರ್ವಕ ಸ್ವಾಗತ ಕೋರಿದೆ.

ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ರೀಟಾ, ರಾಹುಲ್ ಗಾಂಧಿ ಸ್ಥಳೀಯ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ, ಪ್ರಶಾಂತ್ ಕಿಶೋರ್ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.

ದೇಶ ರಾಹುಲ್ ಗಾಂಧಿಯವರನ್ನು ತಿರಸ್ಕರಿಸಿದ್ದರೂ, ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನದಲ್ಲಿ ರಾಹುಲ್ ದೊಡ್ಡ ಚಿಂತೆಯಾಗಲಿದ್ದಾರೆಂದು ರೀಟಾ ಬಹುಗುಣ ಜೋಷಿ ಟೀಕಿಸಿದ್ದಾರೆ. ರೀಟಾ ಸೇರ್ಪಡೆಯಿಂದ ಬಿಜೆಪಿಗೇನು ಲಾಭ, ಮುಂದೆ ಓದಿ..

ರಾಹುಲ್ ಗಾಂಧಿಯೇ ದೊಡ್ಡ ಸಮಸ್ಯೆ

ರಾಹುಲ್ ಗಾಂಧಿಯೇ ದೊಡ್ಡ ಸಮಸ್ಯೆ

ಪಕ್ಷಕ್ಕೆ ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯೇ ದೊಡ್ಡ ಸಮಸ್ಯೆ. ಸೋನಿಯಾ ಜವಾಬ್ದಾರಿ ವಹಿಸಿಕೊಂಡಿದ್ದ ಸಮಯದಲ್ಲಿ ನಮ್ಮ ಮಾತನ್ನು ಕೇಳುತ್ತಿದ್ದರು. ಈಗ ರಾಹುಲ್ ಗಾಂಧಿಗೆ ಅವರಿಗೆ ಅವರು ನಡೆದಿದ್ದೇ ದಾರಿ - ರೀಟಾ ಬಹುಗುಣ ಜೋಷಿ.

ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್

ರಾಜಕೀಯ ತಂತ್ರಗಾರಿಕೆ ರೂಪಿಸುವ ಕೆಲಸವನ್ನು ಪ್ರಶಾಂತ್ ಕಿಶೋರ್ ಮಾಡಬೇಕು. ಅದು ಬಿಟ್ಟು ಪಕ್ಷದ ಚಟುವಟಿಕೆಯ ಮೇಲಲ್ಲ. ಪಕ್ಷಕ್ಕೆ ಇವರಿಂದ ಲಾಭವಾಗಬೇಕೇ ಹೊರತು, ನಷ್ಟವಲ್ಲ ಎಂದು ರೀಟಾ, ಪ್ರಶಾಂತ್ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ರೀಟಾ ಸೇರ್ಪಡೆಯಿಂದ ಬಿಜೆಪಿಗೇನು ಲಾಭ

ರೀಟಾ ಸೇರ್ಪಡೆಯಿಂದ ಬಿಜೆಪಿಗೇನು ಲಾಭ

ಭಾರತದಲ್ಲಿ ಚುನಾವಣೆ ಮತ್ತು ರಾಜಕೀಯ ನಡೆಯುವುದೇ ಜಾತಿ ಲೆಕ್ಕಾಚಾರದಲ್ಲಿ. ಉತ್ತರಪ್ರದೇಶದಲ್ಲಿ ಬ್ರಾಹ್ಮಣರ ವೋಟ್ ಬ್ಯಾಂಕ್ ಜಾಸ್ತಿ ಇರುವುದರಿಂದ ರೀಟಾ ಬಿಜೆಪಿ ಸೇರ್ಪಡೆ ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿದೆ. ಇದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವುದು.

ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವ್ಯಂಗ್ಯ

ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವ್ಯಂಗ್ಯ

ಪಕ್ಷಾಂತರಿಯಾಗಿರುವ ರೀಟಾ ಬಹುಗುಣ ಜೋಷಿ, ನನ್ನ ದುಡ್ಡು ತೆಗೆದುಕೊಂಡು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅವರೆಲ್ಲಾ ಪಕ್ಷಾಂತರಿ ನಾಯಕರು, ಬರುತ್ತಾರೆ, ಹೋಗುತ್ತಾರೆ - ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್.

ಕಾಂಗ್ರೆಸ್ ಬಿಡಲು ಕಾರಣ

ಹಿರಿಯ ಕಾಂಗ್ರೆಸ್ ನಾಯಕಿ, ಪಕ್ಷದ ತೊರೆದು ಬಿಜೆಪಿ ಸೇರಲು ಕಾರಣವೇನು, ಇಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rita Bahuguna Joshi, a prominent Congress leader and former Uttar Pradesh Congress unit president, prefaced her entry into the BJP with a fierce attack on Rahul Gandhi and Prashanth Kishore.
Please Wait while comments are loading...