ನೋಟಿಗಾಗಿ ಕ್ಯೂ : ಕೇರಳದಲ್ಲಿ ಇಬ್ಬರು, ಮುಂಬೈನಲ್ಲಿ ಓರ್ವ ಸಾವು

Written By: Ramesh
Subscribe to Oneindia Kannada

ಮುಂಬೈ, ನವೆಂಬರ್. 11 : ಬ್ಯಾಂಕ್, ಪೋಸ್ಟ್ ಆಫೀಸ್, ಎಟಿಎಂ ಗಳಲ್ಲಿ ಜನರು ಮೈಲುಗಟ್ಟಲೇ ಸರದಿ ಸಾಲಿನಲ್ಲಿ ನಿಂತು ನೋಟುಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇದೆ ತರ ಹಣ ಬದಲಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದ 73 ವರ್ಷದ ವೃದ್ಧನೋರ್ವ ಕುಸಿದು ಬಿದ್ದು ಸಾವನ್ನೊಪಿರುವ ಘಟನೆ ಶುಕ್ರವಾರ ಮುಂಬೈನ ಮುಲುಂಡ್ ನಲ್ಲಿ ನಡೆದಿದೆ.

ಇನ್ನು ಕೇರಳದಲ್ಲೂ ಅಲಪ್ಪುಜ್ಹ ಜಿಲ್ಲೆಯ ಕುಮಾರಪುರಂ ಮೂಲದ ಕಾರ್ತಿಕೇಯನ್ (75) ಹಾಗೂ ಉನ್ನಿ ಎನ್ನುವರು ಸಹ ಮೃತ ಪಟ್ಟಿದ್ದಾರೆ.

ವಿಶ್ವನಾಥ್ ವರ್ತಕ್ ಎನ್ನುವರು ಮುಲುಂಡ್ ಪೂರ್ವದ ನೌಘರ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತಮ್ಮ ಹಳೆ ನೋಟುಗಳನ್ನು ಬದಲಿಸಿಕೊಳ್ಳಲು ಜನರ ಮಧ್ಯೆ ಸಾಲಿನಲ್ಲಿ ನಿಂತಿದಿದ್ದರು. ಈ ವೇಳೆ ಕೆಳಗೆ ಕುಸಿದು ಬಿದ್ದಿದ್ದಾರೆ. [ನೋಟು ಬದಲಿಸಲು ಬ್ಯಾಂಕಿನ ಮುಂದೆ ನಿಂತ ರಾಹುಲ್ ಗಾಂಧಿ]

Senior Citizen Dies While Waiting in Queue to Exchange Currency Notes

ಸಾಲಿನಲ್ಲಿ ನಿಂತಿದ್ದ ಕೆಲವರು ಇವರನ್ನು ಹತ್ತಿರ ಆಸ್ಪತ್ರೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆ ಹೋಗುವಾಗಲೇ ಮೃತಪಟ್ಟಿದ್ದರು.

ಪೊಲೀಸರು ಆತ ನಿಂತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು. ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amid the woes of customers hit by cash crunch, a 73-year-old man, who was standing in a queue to exchange his old currency notes here, collapsed and died in suburban Mulund.
Please Wait while comments are loading...