ಗುಜರಾತ್ ಸಿಎಂ ವಿಜಯ್ ರೂಪಾಣಿ ಕುಟುಂಬಕ್ಕೆ 'ಸೆಬಿ' ದಂಡ

Subscribe to Oneindia Kannada

ಅಹಮದಾಬಾದ್, ನವೆಂಬರ್ 9: ನ್ಯಾಯಯುತವಲ್ಲದ ವ್ಯಾಪಾರ ನಡೆಸಿದ್ದಕ್ಕಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಕುಟುಂಬ ಹಾಗೂ 22 ಸಂಸ್ಥೆಗಳಿಗೆ ಸೆಬಿ ದಂಡ ವಿಧಿಸಿದೆ.

ರೂಪಾಣಿ ಕುಟುಂಬಸ್ಥರು ಸಾರಂಗ್ ಕೆಮಿಕಲ್ಸ್ ಕಂಪನಿ ಮೂಲಕ ತಿರುಚಿದ ವ್ಯಾಪಾರ ನಡೆಸುತ್ತಿದ್ದರು ಎಂದು ಸೆಬಿ ಹೇಳಿದೆ. ತಮ್ಮೊಳಗೆ ವ್ಯಾಪಾರ ನಡೆಸುತ್ತಾ ಸಾರಂಗ್ ಕೆಮಿಕಲ್ಸ್ ಸಂಸ್ಥೆಯವರು ಕೃತಕ ಶೇರು ಮೌಲ್ಯವನ್ನು ಸೃಷ್ಠಿಸಿದ್ದರು ಎಂದು ಹೇಳಲಾಗಿದೆ.

Sebi fines Gujarat CM Vijay Rupani’s family for unfair trade practices

ಒಟ್ಟು ಸೆಬಿ 6.9 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ ವಿಜಯ್ ರೂಪಾಣಿ ಕುಟುಂಬಸ್ಥರು 16 ಲಕ್ಷಗಳನ್ನು ಪಾವತಿಸಬೇಕಾಗಿದೆ. ಇತರ ಮೂವರು ತಲಾ 70 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗಿದೆ.

2011ರ ಜನವರಿ ಮತ್ತು ಜೂನ್ ನಡುವೆ ಈ ವ್ಯವಹಾರಗಳನ್ನು ನಡೆಸಲಾಗಿತ್ತು. ಇದನ್ನು ಸ ೆಬಿ ತನಿಖೆಗೆ ಒಳಪಡಿಸಿತ್ತು. ನಂತರ ಇದೀಗ ದಂಡ ವಿಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Securities and Exchange Board of India (SEBI) has penalised 22 entities, including Gujarat Chief Vijay Rupani’s Family, for unfair trade practices.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ