ಗುಜರಾತಿನ ಗೋವುಗಳ ಮೂತ್ರದಲ್ಲಿ ಚಿನ್ನದ ಅಂಶ ಪತ್ತೆ!

Posted By:
Subscribe to Oneindia Kannada

ಅಹಮದಾಬಾದ್(ಗುಜರಾತ್), ಜೂನ್ 28: ಹಿಂದೂಗಳ ಪಾಲಿನ 'ಕಾಮಧೇನು' ಗೋವು, ಬೇಡಿದ ವರವನ್ನು ನೀಡುವ ದೇವತೆ. ಗೋವುಗಳ ಮಹತ್ವ, ಗೋ ಮೂತ್ರದ ಬಗ್ಗೆ ಅನೇಕ ಸಂಶೋಧನೆ ನಡೆಸಿರುವ ಜುನಾಗಡ್ ಕೃಷಿ ವಿವಿ ವಿಜ್ಞಾನಿಗಳು ಬಹಿರಂಗ ಪಡಿಸಿರುವ ಹೊಸ ಸಂಗತಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಈ ಸುದ್ದಿ ಖಚಿತವಾದರೆ, ಗೋವುಗಳನ್ನು ಸಾಕುವವರ ಸಂಖ್ಯೆ ದಿಢೀರನೇ ಹೆಚ್ಚಾದರೂ ಅಚ್ಚರಿ ಪಡಬೇಕಾಗಿಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆಯಿಂದ ಕಾಣುವ, ನೆಚ್ಚಿನ ಸಾಕುಪ್ರಾಣಿ ಗೋವುಗಳ ಮೂತ್ರದಲ್ಲಿ ಚಿನ್ನದ ಅಂಶ ಇರುವುದು ಪತ್ತೆಯಾಗಿದೆ.[ಉಡುಪಿಯಲ್ಲಿ ಹೋರಿ ಪ್ರಾಣ ರಕ್ಷಿಸಿದ ಜಮಾತ್ ಸದಸ್ಯರು]

ಜುನಾಗಡ್ ಕೃಷಿ ವಿವಿ(ಜೆಎಯು) ವಿಜ್ಞಾನಿಗಳು ಸತತ 4 ವರ್ಷಗಳ ಸಂಶೋಧನೆ ನಡೆಸಿ ಈ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಗೀರ್ ಪ್ರದೇಶದಲ್ಲಿ ವಾಸಿಸುವ ವಿಶೇಷ ತಳಿಯ 400ಕ್ಕೂ ಗೋವುಗಳ ಮೂತ್ರವನ್ನು ಸಂಗ್ರಹಿಸಿ ವಿಶ್ವ ವಿದ್ಯಾಲಯದ ಆಹಾರ ಪರೀಕ್ಷಾ ಲ್ಯಾಬ್​ನಲ್ಲಿ ಪ್ರಯೋಗಕ್ಕೆ ಒಳಪಡಿಸಿದಾಗ, 1 ಲೀಟರ್ ಗೋಮೂತ್ರದಲ್ಲಿ 3 ರಿಂದ 10 ಮಿಲಿ ಗ್ರಾಮ್ ಚಿನ್ನದ ಅಂಶ ಇರುವುದು ಪತ್ತೆಯಾಗಿದೆ.

ನೀರಿನಲ್ಲಿ ಕರಗಬಲ್ಲ ಅಯಾನ್​ಗಳ ರೂಪದಲ್ಲಿ ಪತ್ತೆಯಾಗಿರುವ ಚಿನ್ನವನ್ನು ರಾಸಾಯನಿಕ ವಿಧಾನದಿಂದ ಘನ ರೂಪಕ್ಕೂ ತರಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಬಯೋ ಟೆಕ್ನಾಲಜಿ ವಿಭಾಗ ಅಧ್ಯಕ್ಷ ಡಾ. ಬಿ.ಎ.ಗೋಲಾಕಿಯಾ ಹೇಳಿದ್ದಾರೆ.[ದೇಸಿ ಗೋ ತಳಿಗಳ ರಕ್ಷಣೆಗೆ 'ಗೋಕುಲ ಕಾಮಧೇನು']

5100 ಸಂಯುಕ್ತ(compounds)ಗಳು ಗೋಮೂತ್ರದಲ್ಲಿ ಕಂಡುಬಂದಿದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಒಲಪಡಿಸಿದ್ದೆವು. ಗೋಮೂತ್ರದಲ್ಲಿ ಕಂಡುಬಂದ ಯಾವುದೇ ಆಂಟಿ ಬಯಾಟಿಕ್​ಗಳು ಅವುಗಳಲ್ಲಿ ಪತ್ತೆಯಾಗಿಲ್ಲ ಎಂದು ಗೋಲಾಕಿಯಾ ವಿವರಿಸಿದ್ದಾರೆ. ಗಿರ್ ತಳಿ ಹಸುಗಳ ಬೆಲೆ 40 ರಿಂದ 70 ಸಾವಿರ ರು ತನಕ ಇದೆ. ಹೆಚ್ಚಿನ ಮಾಹಿತಿಗೆ ವಿಕಿಪೀಡಿಯ ಪುಟ ನೋಡಿ.. ಚಿತ್ರಕೃಪೆ: ಪವನಜ. ಯು.ಬಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Scientists have found gold in the urine of cows in Gir, Gujarat. Scientists at the Junagadh Agricultural University (JAU), who analysed of urine samples of 400 Gir cows, found traces of gold ranging from three mg to 10 mg from one litre urine reported Times of India.
Please Wait while comments are loading...