ಖ್ಯಾತ ವಿಜ್ಞಾನಿ ಪದ್ಮವಿಭೂಷಣ ಯಶ್ ಪಾಲ್ ನಿಧನ

Posted By:
Subscribe to Oneindia Kannada

ನೋಯ್ಡಾ, ಜುಲೈ 25: ಖ್ಯಾತ ವಿಜ್ಜಾನಿ, ಪದ್ಮವಿಭೂಷಣ ಯಶ್ ಪಾಲ್(90) ಅವರು ಉತ್ತರ ಪ್ರದೇಶದ ನೋಯ್ಡಾದ ತಮ್ಮ ನಿವಾಸದಲ್ಲಿ ನಿನ್ನೆ(ಜುಲೈ 24) ಕೊನೆಯುಸಿರೆಳೆದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೆಲ ವರ್ಷಗಳ ಹಿಂದೆ ಚೇತರಿಸಿಕೊಂಡಿದ್ದರು. ಆದರೆ ಇದೀಗ ಅವರ ಏಕಾಏಕಿ ಅಗಲಿಕೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ

ಈಗಿನ ಪಾಕಿಸ್ತಾನಕ್ಕೆ ಸೇರಿದ ಝಾಂಗ್ ಎಂಬಲ್ಲಿ ಜನಿಸಿದ ಯಶ್ ಸಿಂಗ್ ಪಾಲ್(26, ನವೆಂಬರ್ 1926- 24, ಜುಲೈ 2017) ಬಾಹ್ಯಾಕಾಶ ವಿಜ್ಞಾನದಲ್ಲಿ ಪರಿಣಿತಿ ಪಡೆದಿದ್ದರು. ಶಿಕ್ಷಣ ತಜ್ಞರಾಗಿ, ಟಿವಿ ನಿರೂಪಕರಾಗಿಯೂ ಅವರು ಪ್ರಸಿದ್ಧಿ ಪಡೆದಿದ್ದರು.

Scientist-academician Padma Vibhushan Professor Yash Pal passes away in Noida

ಜುಲೈ 24 ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ದುರದೃಷ್ಟದ ದಿನವಿದ್ದಿರಬೇಕು. ಬೆಳಗ್ಗಿನ ಜಾವವಷ್ಟೇ ಇಸ್ರೋ ವಿಜ್ಞಾನಿ ಯು.ಆರ್.ರಾವ್ ಅವರ ನಿಧನದ ಸುದ್ದಿಯಿಂದ ಆಘಾತಗೊಂಡಿದ್ದ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಆದೇ ದಿನ ರಾತ್ರಿ, ಇನ್ನೊಬ್ಬ ಪದ್ಮವಿಭೂಷಣ ವಿಜ್ಞಾನಿಯ ಅಗಲಿಕೆಯ ನೋವು ಮೆತ್ತಿಕೊಂಡಿದೆ.

ISRO former chairman 85 year old U R Rao passes away | Oneindia Kannada

ಕಾಸ್ಮಿಕ್ ಕಿರಣಗಳು, ಖಭೌತಶಾಸ್ತ್ರದ ಕುರಿತು ಅಪಾರ ಜ್ಞಾನ ಹೊಂದಿದ್ದ ಯಶ್ ಪಾಲ್ ಅವರಿಗೆ 1976 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ನಂತರ 2013 ರಲ್ಲಿ ಪದ್ಮವಿಭೂಷಣವೂ ಅವರ ತೆಕ್ಕೆ ಸೇರಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Scientist and academician Padma Vibhushan Professor Yash Pal, 90, passes away at his residence in Noida.
Please Wait while comments are loading...