School Holidays: 2025ರ ಜನವರಿಯಲ್ಲಿ ಶಾಲೆಗಳಿಗೆ ಸಾಲು ರಜೆ; ಎಷ್ಟು ದಿನ ಹಾಗೂ ಕಾರಣ ತಿಳಿಯಿರಿ
School Holidays: 2025ರ ಹೊಸವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಅದರಲ್ಲೂ ಮುಂದಿನ ಜನವರಿಯಲ್ಲಿ ಹಬ್ಬಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಹಿನ್ನೆಲೆ ಸಾಲು ರಜೆಗಳು ಬರಲಿವೆ. ಮತ್ತೊಂದೆಡೆ ರಣಭೀಕರ ಚಳಿ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳ ಶಾಲೆಗಳಿಗೆ ಮುಂದಿನ ತಿಂಗಳಲ್ಲಿ ಯಾವ್ಯಾವಾಗ ರಜೆ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನೇನು 2025ರ ಹೊಸ ವರ್ಷ ಸಮೀಪಿಸುತ್ತಲಿದ್ದು, ಮೊದಲ ತಿಂಗಳಲ್ಲೇ ಹಬ್ಬಗಳು ಮತ್ತು ಆಚರಣೆಗಳ ಸರಮಾಲೆಯೇ ಇವೆ. ಈ ವೇಳೆ ಹಬ್ಬಗಳ ಸಂಭ್ರದಲ್ಲಿ ಜನರಿದ್ದರೆ, ಶಾಲೆಗಳಿಗೆ ರಜೆ ಪಡೆಯುವ ಖಷಿಯಲ್ಲಿ ವಿದ್ಯರ್ಥಿಗಳಿದ್ದಾರೆ. ಈ ಬಾರಿಯ ರಜೆ ಜನವರಿ 1ರಂದು ಆರಂಭವಾಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಭೀಕರ ಚಳಿ ಮುನ್ಸೂಚನೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ತಿಂಗಳವರೆಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಉತ್ತರ ಭಾರತದಲ್ಲಿ ಚಳಿಗಾಲದ ರಜೆ ಆದರೆ, ದಕ್ಷಿಣದಲ್ಲಿ ಮಕರ ಸಂಕ್ರಾತಿ, ಪೊಂಗಲ್, ಗಣರಾಜ್ಯೋತ್ಸವ ಸೇರಿದಂತೆ ಹಲವು ರಜೆಗಳನ್ನು ಈಗಾಗಲೇ ಸರ್ಕಾರ ಕ್ಯಾಲೆಂಡರ್ ಬಿಡುಗಡೆ ಮಾಡುವಾಗ ಘೋಷಣೆ ಮಾಡಿದೆ. ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಜನವರಿ ತಿಂಗಳಲ್ಲಿ ಯಾವ್ಯಾವಾಗ ರಜೆ ಘೋಷಿಸಲಾಗಿದೆ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಳಿಗಾಲದ ರಜೆ: ಜನವರಿ ಪ್ರಾರಂಭದಿಂದ ಭೀಕರ ಚಳಿ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಉತ್ತರ ಭಾರತದಲ್ಲಿ ಜನವರಿ 1ರಿಂದ 15 ವರೆಗೆ 15 ದಿನಗಳ ಕಾಲ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಇನ್ನು ಚಳಿಗಾಲದ ರಜೆಗಳನ್ನು ಹೊರತುಪಡಿಸಿ ಹಬ್ಬಗಳ ಹಿನ್ನೆಲೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಜನವರಿ 1ರಂದು ಹೊಸ ವರ್ಷದ ಸಂಭ್ರಮ ಹಿನ್ನೆಲೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ನೀಡುವ ಸಾಧ್ಯತೆಯಿದೆ. ಇನ್ನು ಜನವರಿ 6ರಂದು ಸಿಖ್ಖರ ಧರ್ಮಗುರು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನ ಇದ್ದು, ಈ ದಿನ ವಿಶೇಷವಾಗಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಶಾಲೆಗಳು, ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಈ ವೇಳೆ ಇನ್ನುಳಿದ ರಾಜ್ಯಗಳಲ್ಲಿರುವ ಸಿಖ್ ಧರ್ಮಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಿಗೂ ವಿಶೇಷ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ.
ಜನವರಿ 14ರಂದು ಮಕರ ಸಂಕ್ರಾತಿ ಆಚರಣೆ ಮಾಡಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಈ ಹಬ್ಬವನ್ನು ಜನವರಿ 15ರಂದು ಆಚರಣೆ ಮಾಡಲಾಗುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರ ಜ್ಯೋತಿ ಬೆಳಗುವ ಸಮಯವನ್ನು ಆಧರಿಸಿ ಕೆಲವು ಕಡೆಗಳಲ್ಲಿ ಈ ಎರಡು ದಿನಗಳಲ್ಲಿ ಒಂದು ದಿನವನ್ನು ಸಂಕ್ರಾತಿ ಎಂದು ಆಚರಣೆ ಮಾಡುತ್ತಾರೆ. ಈ ಹಿನ್ನೆಲೆ ಕರ್ನಾಟಕದ ಬಹುತೇಕ ಶಾಲಾ-ಕಾಲೇಜುಗಳಿಗೆ ಜನವರಿ 14 ಅಥವಾ 15ರಂದು ರಜೆ ಘೋಷಿಸಲಾಗುತ್ತದೆ.
ಇದನ್ನು ಹೊರತುಪಡಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಅನೇಕ ರಾಜ್ಯಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದು ಆಚರಣೆ ಮಾಡುತ್ತಾರೆ. ಇನ್ನು ಅಸ್ಸಾಂನಲ್ಲಿ ಮಾಘ ಬಿಹು ಎಂದು ಆಚರಣೆ ಮಾಡುತ್ತಾರೆ.
ಇನ್ನು ಜನವರಿ 26 ರಂದು ದೇಶಾದ್ಯಂತ ಗಣರಾಜ್ಯೋತ್ಸ (Republic Day) ಆಚರಣೆ ಮಾಡಲಾಗುತ್ತದೆ. ಈ ದಿನ ಶಾಲಾ-ಕಾಲೇಜುಗಳು ಸೇರಿದಂತೆ ದೇಶದ ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ಧ್ವಜಾರೋಹಣ ನೆರವೇರಿಸಿ ಸಮಾರಂಭಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಈ ಬಾರಿ ಈ ದಿನ ಭಾನುವಾರದಂದೇ ಗಣರಾಜ್ಯೋತ್ಸವ ಬಂದಿದೆ.












Click it and Unblock the Notifications