School Holidays Extended: ಭಾರೀ ಮಳೆ ಮುನ್ಸೂಚನೆ; ಈ ಭಾಗದಲ್ಲಿ ಶಾಲಾ ರಜೆ ದಿನಗಳ ವಿಸ್ತರಣೆ
School Holidays Extended: ಇದೀಗ ಚಳಿಗಾಲ ಮುಗಿಯುತ್ತಾ ಬಂದರೂ ಹಲವೆಡೆ ರಣಭೀಕರ ಚಳಿ ಮುಂದುವರೆದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಭಾಗಗಳಲ್ಲಿ ಶಾಲೆಗಳ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಎಲ್ಲಿವರೆಗೂ ರಜೆಯನ್ನು ವಿಸ್ತರಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಜಮ್ಮು ವಿಭಾಗದಲ್ಲಿ ಭೀಕರ ಚಳಿ ಮುಂದುವರೆದ ಹಿನ್ನೆಲೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ದ್ವಿತೀಯ ಪಿಯುಸಿವರೆಗೆ ರಜೆಯನ್ನು ವಿಸ್ತರಿಸಿದೆ. ಈ ಬಗ್ಗೆ ಸಚಿವೆ ಸಕಿನಾ ಅವರು ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಜೆ ವಿಸ್ತರಣೆಗೆ ಕಾರಣ ಏನು?: ಹವಾಮಾನದಲ್ಲಿ ಭಾರೀ ಬದಲಾವಣೆ ಕಾರಣ ಕಣಿವೆ ಮತ್ತು ಜಮ್ಮು ವಿಭಾಗದ ಚಳಿಗಾಲದ ವಲಯ ಪ್ರದೇಶಗಳಲ್ಲಿನ ಶಾಲೆಗಳಿಗೆ ಚಳಿಗಾಲದ ರಜೆಯನ್ನು 6 ದಿನಗಳವರೆಗೆ ವಿಸ್ತರಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡ ಆದೇಶದ ಪ್ರಕಾರ, ಶಾಲೆಗಳು ಮಾರ್ಚ್ 6ರ ವರೆಗೆ ಮುಚ್ಚಲಿವೆ. ಮಾರ್ಚ್ 7, 2025ರಂದು ಮತ್ತೆ ತೆರೆಯಲಿವೆ. ಜಮ್ಮು-ಕಾಶ್ಮೀರ ಸಚಿವೆ ಸಕಿನಾ ಅವರು ಈ ಕುರಿತ ಆದೇಶ ಪ್ರತಿಯನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಮ್ಮು ವಿಭಾಗದ ಕಣಿವೆ ಮತ್ತು ಚಳಿಗಾಲದ ವಲಯ ಪ್ರದೇಶಗಳಲ್ಲಿನ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಡಿಸೆಂಬರ್ 10ರಿಂದ ಫೆಬ್ರವರಿ 28ರ ವರೆಗೆ ರಜೆ ಘೋಷಿಸಲಾಗಿತ್ತು. ಅಲ್ಲದೆ, 5 ರಿಂದ 12ನೇ ತರಗತಿಗಳಿಗೆ ಡಿಸೆಂಬರ್ 16ರಿಂದ ಫೆಬ್ರವರಿ 28ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದ್ದು, ಮಾರ್ಚ್ 1ರಂದು ಅಂದರೆ ಇಂದು ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿತ್ತು.
ಭಾರೀ ಮಳೆ ಮುನ್ಸೂಚನೆ: ಆದರೆ, ಇದೀಗ ಪ್ರತಿಕೂಲ ಹವಾಮಾನ ಹಿನ್ನೆಲೆ ಹಾಗೂ ಮಾರ್ಚ್ 3ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮಾರ್ಚ್ 6ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ. ಶುಕ್ರವಾರ ಕಾಶ್ಮೀರದಲ್ಲಿ ರಾತ್ರಿಯಿಡೀ ಹಿಮಪಾತ ಸಂಭವಿಸಿದ ಪರಿಣಾಮ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಮಣ್ಣು ಕುಸಿತ ಸಂಭವಿಸಿದ್ದು, ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿದೆ.
ಇದೀಗ ಕಣಿವೆಯಲ್ಲಿ ಭಾರೀ ಹಿಮಪಾತದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ರಾತ್ರಿ ಸಂಭವುಸದ ಹಿಮಪಾತದಿಂದ ರೈಲು, ವಿಮಾನ ಸೇವೆಗಳು ರದ್ದುಗೊಂಡಿವೆ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಮ್‌ನ ಪ್ರವಾಸಿ ತಾಣಗಳು ಸೇರಿದಂತೆ ಕಣಿವೆಯ ಹಲವು ಪ್ರದೇಶಗಳಲ್ಲಿ ಭಾರೀ ಹಿಮಪಾತ ಸಂಭವಿಸಿದೆ.
ಶ್ರೀನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿದೆ. ಹವಾಮಾನ ಇಲಾಖೆ ಪ್ರಕಾರ, ಶುಕ್ರವಾರ ಮಧ್ಯಾಹ್ನದಿಂದ ಹಿಮಪಾತ ಸಂಭವಿಸಿದ ಪರಿಣಾಮ ಶ್ರೀನಗರ-ಜಮ್ಮು ಭಾಗಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ದೊಡ್ಡ ಮಟ್ಟದಲ್ಲಿ ಅಡತಡೆಗಳಾದವು. ಗುಲ್ಮಾರ್ಗ್, ಸೋನಾಮಾರ್ಗ್, ಪಹಲ್ಗಾಮ್, ಗುರೆಜ್, ಝೋಜಿಲಾ ಆಕ್ಸಿಸ್, ಮೊಘಲ್ ರಸ್ತೆ ಮತ್ತು ಬಂಡಿಪೋರಾ, ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳ ಅನೇಕ ಪ್ರದೇಶಗಳು ಸೇರಿದಂತೆ ಕಣಿವೆಯ ಹಲವು ಸ್ಥಳಗಳಲ್ಲಿ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ, ಗಂಡೇರ್ಬಲ್, ಕುಲ್ಗಾಮ್, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಿ ಸೇರಿದಂತೆ ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಹಿಮಪಾತ ಸಂಭವಿಸಿದೆ.












Click it and Unblock the Notifications