• search

ನ್ಯಾ. ಲೋಯಾ ಸಾವಿನ ಪ್ರಕರಣದಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

By ವಿಕಾಸ್ ನಂಜಪ್ಪ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಮಾರ್ಚ್ 16: ನ್ಯಾ. ಲೋಯಾ ಶಂಕಿತ ಸಾವಿನ ಪ್ರಕರಣದಲ್ಲಿ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ. ಇದಕ್ಕೂ ಮೊದಲು ಮಹಾರಾಷ್ಟ್ರ ಸರಕಾರ ಸೇರಿ ಎಲ್ಲರ ವಾದವನ್ನೂ ಸುಪ್ರೀಂ ಕೋರ್ಟ್ ಆಲಿಸಿತು.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಇಂದು ನಡೆದ ಕೊನೆಯ ದಿನದ ವಿಚಾರಣೆ ವೇಳೆ ಮಹಾರಾಷ್ಟ್ರ ಸರಕಾರ ಇದು ರಾಜಕೀಯವಲ್ಲದೆ ಬೇರೇನೂ ಅಲ್ಲ. ನ್ಯಾಯಮೂರ್ತಿ ಲೋಯಾ ಸಾವಿಗೆ ಸಂಬಂಧಿಸಿದಂತೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ಇರುವುದು ರಾಜಕೀಯ ಮಾತ್ರ ಎಂದು ಹೇಳಿತು.

  ನ್ಯಾಯಮೂರ್ತಿಗಳ ದುರಾದೃಷ್ಟಕರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು. ನಿಗೂಢ ಉದ್ದೇಶಗಳನ್ನು ಇಟ್ಟುಕೊಂಡು ಅರ್ಜಿಗಳನ್ನು ಸಲ್ಲಿಸಲಾಯತು. ಇವರೆಲ್ಲಾ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಸರಕಾರ ಪರ ವಕೀಲರು ವಾದಿಸಿದರು.

  SC reserves verdict in judge Loya death case

  ಇನ್ನು ನ್ಯಾ. ಲೋಯಾ ಸಾವಿನ ಸಂದರ್ಭದಲ್ಲಿ ಅವರು ಹೇಗೆ ಸಾವನ್ನಪಿದರು ಎಂದು ಸ್ಥಳದಲ್ಲಿದ್ದ ನಾಲ್ವರು ನ್ಯಾಯಮೂರ್ತಿಗಳು ನೀಡಿದ ವರದಿಯನ್ನೂ ಸರಕಾರ ಕೋರ್ಟ್ ಗೆ ಸಲ್ಲಿಸಿತು. ಮಹಾರಾಷ್ಟ್ರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಆಸ್ಪತ್ರೆಗೆ ಕರೆತರುವಾಗ ಲೋಯಾ ಸಾವನ್ನಪ್ಪಿದರು ಎಂದು ವೈದ್ಯಕೀಯ ವರದಿಯಲ್ಲಿದೆ ಎಂದು ಹೇಳಿದರು.

  ಇನ್ನು ಇದಕ್ಕೆ ಧ್ವನಿಗೂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ತನಿಖೆಗೆ ಆದೇಶ ನೀಡಬಾರದು. ನೀಡಿದರೆ ಪ್ರತ್ಯಕ್ಷದರ್ಶಿಗಳಾಗಿದ್ದ ನ್ಯಾಯಾಧೀಶರು ಕೊಲೆಯಲ್ಲಿ ಪಾಲುದಾರರು ಎಂದಾಗುತ್ತದೆ ಎಂದರು.

  "ಇಡೀ ವ್ಯವಸ್ಥೆ ಒಬ್ಬ ವ್ಯಕ್ತಿಯ ತಾಳಕ್ಕೆ ಕುಣಿಯುತ್ತಿದೆಯೇ? ಹೌದಾದರೆ ನಾವು ನ್ಯಾಯಾಂಗವನ್ನು ಮುಚ್ಚಿಬಿಡೋಣ. ಕಳೆದ ಕೆಲವು ವಾರಗಳಿಂದ ಇಂಥಹ ಹುಸಿ ಆರೋಪಗಳನ್ನು ಮಾಡಲಾಗುತ್ತಿದೆ. ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದ ನ್ಯಾಯಾಧೀಶರು ಅವರನ್ನು ಕೊಲೆ ಮಾಡಿದರೆ? ಅವರು ಕೊಲೆಗಾರರೇ," ಎಂದು ಪ್ರಶ್ನಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Supreme Court has reserved orders on a petition that sought a probe into the death of Judge Loya. The court reserved its verdict after hearing at length arguments advanced by all sides including the state of Maharashtra.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more