ಚುನಾವಣೆ ಹಿನ್ನಲೆ, ಬಜೆಟ್ ಮುಂದೂಡಿಕೆಗೆ ಸುಪ್ರಿಂ ನಕಾರ

By: ಒನ್ ಇಂಡಿಯಾ ಸಿಬ್ಬಂದಿ
Subscribe to Oneindia Kannada

ನವದೆಹಲಿ, ಜನವರಿ 23: ಪಂಚ ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಬಜೆಟ್ ಮುಂದೂಡಬೇಕು ಎಂಬ ವಾದವನ್ನು ಸುಪ್ರಿಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.

ಬಜೆಟ್ ನಿಂದ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದವನ್ನು ಸುಪ್ರಿಂ ಕೊರ್ಟ್ ಒಪ್ಪಿಕೊಂಡಿಲ್ಲ. ಮುಖ್ಯ ನ್ಯಾಯಾಮೂರ್ತಿ ಜೆ.ಎಸ್.ಖೇಹರ್ ಮತ್ತು ಡಿ ವೈ ಚಂದ್ರಚೂಡ್ ಅಚರಿದ್ದ ಪೀಠ ಈ ಆದೇಶ ನೀಡಿದ್ದು, ಈ ವಿಚಾರದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.[ 2017ರ ಕೇಂದ್ರ ಬಜೆಟ್ ನಲ್ಲಿ ಈ ಅಂಶಗಳು ಇರಲಿವೆ...!]

SC dismisses plea to defer union budget

ಕೇಂದ್ರ ಬಜೆಟನ್ನು ಮುಂದೂಡಬೇಕು ಎಂದು ಕೋರಿ ಈ ಹಿಂದೆ ಸುಪ್ರಿಂ ಕೊರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಕೋರ್ಟ್, ಈ ವಿಚಾರದಲ್ಲಿ ತಕ್ಷಣ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ಬಜೆಟ್ ಮುಂದೂಡುವಂತೆ ಸರಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.[ 2017-18 ಬಜೆಟ್: ವಿಮಾ ಉದ್ಯಮಕ್ಕೆ ಯಾವ ಲಾಭ ಸಿಗಲಿದೆ?]

ಅರ್ಜಿದಾರರ ಪರವಾಗಿ ವಾದಿಸಿದ್ದ ವಕೀಲ ಮನೋಹರ್ ಲಾಲ್ ಶರ್ಮ, ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡುವುದರಿಂದ ಹೊಸ ಯೋಜನೆ, ಪರಿಹಾರಗಳನ್ನು ಘೋಷಣೆ ಮಾಡಲಾಗುತ್ತದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘೆನೆ ಎಂದು ವಾದಿಸಿದರು. ಆದರೆ ಈ ವಾದವನ್ನು ಸುಪ್ರಿಂ ಕೋರ್ಟ್ ಒಪ್ಪಿಕೊಂಡಿಲ್ಲ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday dismissed a petition seeking postponement of the Union Budget.
Please Wait while comments are loading...