ಭಾರತ, ಮೊರಾಕ್ಕೊ,ಇರಾಕ್ ರಾಷ್ಟ್ರಗಳಲ್ಲಿ ಉಂಟಾಗಲಿದೆ ನೀರಿನ ಹಾಹಾಕಾರ!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಪರಿಸರ ರಕ್ಷಣೆಗಾಗಿ ದೇಶಾದ್ಯಂತ ಎಲ್ಲ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಏನೆಲ್ಲ ಸರ್ಕಸ್ ಮಾಡುತ್ತಿವೆ. ಏನೆಲ್ಲ ಜಾಗೃತಿ ಮೂಡಿಸಿದರೂ ನೀರಿಗಾಗಿ ಹಾಹಾಕಾರ ಉಂಟಾಗುವ ದಿನಗಳು ದೂರವಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಉಪಗ್ರಹ ಒದಗಿಸಿರುವ ಹೊಸ ಸಾಕ್ಷ್ಯಗಳು ಭಾರತವೂ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ನದಿಗಳು ಬತ್ತಿ ಹೋಗುತ್ತಿರುವುದನ್ನು ದೃಢಪಡಿಸಿವೆ.

ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಜಲಾಶಯಗಳಲ್ಲಿ ಅತಿ ವೇಗವಾಗಿ ನೀರಿನ ಮಟ್ಟ ಕುಸಿಯುತ್ತಿದೆ ಎನ್ನುವ ವರದಿಯನ್ನೂ ನೀಡಿದೆ.

ಐದು ವರ್ಷಗಳಲ್ಲಿ 37 ಕೆರೆಗಳಿಗೆ ಮರುಜೀವ ನೀಡಿದ ಬಿಬಿಎಂಪಿ

ಭಾರತ ಮಾತ್ರವಲ್ಲದೇ ಮೊರಾಕ್ಕೊ, ಇರಾನ್ ಮತ್ತು ಸ್ಪೇನ್ ಕೂಡ ಅಪಾಯಕಾರಿ ಮಟ್ಟ ತಲುಪುತ್ತಿರುವ ರಾಷ್ಟ್ರಗಳಾಗಿವೆ.

ದಿ ಗಾರ್ಡಿಯನ್ ಪತ್ರಿಕೆ ಪ್ರಕಟಿಸಿರುವ ವರದಿಯಲ್ಲಿ ಸ್ಯಾಟಲೈಟ್ ಅಧ್ಯಯನ ನಡೆಸುತ್ತಿರುವ ಜಗತ್ತಿನ 5 ಲಕ್ಷ ಜಲಾಶಯಗಳ ಪೈಕಿ ಭಾರತದದ ಜಲಾಶಯಗಳು ಅತ್ಯಂತ ವೇಗವಾಗಿ ಬತ್ತುತ್ತಿವೆ ಹೀಗಾಗಿ ಭಾರತಕ್ಕೆ ಜಲಶೂನ್ಯದ ದಿನಗಳು ತೀರಾ ಹತ್ತಿರವಾಗಿವೆ ಎಂದು ವರದಿಗಳು ಎಚ್ಚರಿಕೆ ನೀಡಿವೆ.

ಬಯಲುಸೀಮೆ ನೀರಾವರಿ ಯೋಜನೆಗಳ ಸತ್ಯ ಶೋಧನೆಯ ಅನಾವರಣ

ಮೊರಾಕ್ಕೊದ ಎರಡನೇ ಬೃಹತ್ ಜಲಾಶಯವಾದ ಮಸಿರಾ ಶೇ.60ರಷ್ಟು ಬತ್ತಿ ಹೋಗಿದ್ದು ಇದರಿಂದ ಮುಂದಿನ ಮೂರು ವರ್ಷಗಳಲ್ಲಿ ಭೀಕರ ಬರಗಾಲ ಉಂಟಾಗಲಿದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ. ಸ್ಪೇನ್ ದೇಶ ಕೂಡ ಬರಗಾಲದಿಂದ ಬಳಲುತ್ತಿದ್ದು ಶೇ. 60 ರಷ್ಟು ಬುಯೆಂಡಿಯಾ ಜಲಾಶಯ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕಳೆದ ಐದು ವರ್ಷಗಳಲ್ಲಿ ಶೇ.60 ರಷ್ಟು ಬತ್ತಿ ಹೋಗಿದೆ ಎಂದು ಅಧ್ಯಯನ ತಿಳಿಸಿದೆ. ಇರಾಕ್ ನ ಮಸಿಲ್ ಜಲಾಶಯ ಕೂಡ ಬತ್ತಿ ಹೋಗಿದ್ದು ಶೇ.60 1990ರಿಂದ ಈಚೆಗೆ ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ಶಲಾಶಯಗಳು ಬತ್ತಿರುವುದು ಇದೇ ಮೊದಲು ಎಂದು ಅಧ್ಯಯನ ಪ್ರಕಟಿಸಿದೆ.

 ಮಳೆಯನ್ನು ಎದುರು ನೋಡುತ್ತಾ ಕುಳಿತಿರುವ ರೈತರು

ಮಳೆಯನ್ನು ಎದುರು ನೋಡುತ್ತಾ ಕುಳಿತಿರುವ ರೈತರು

ದಕ್ಷಿಣಾ ಆಫ್ರಿಕಾದಲ್ಲಿ ನೀರಿನ ಸಂರಕ್ಷಣೆಗಾಗಿ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಇನ್ನುಳಿದ ರಾಷ್ಟ್ರಗಳಲ್ಲಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಪೂರಕ ಯೋಜನೆಗಳು ರೂಪುಗೊಂಡಿಲ್ಲ ಎಂದು ವಿಶ್ವ ಜಲಮೂಲಗಳ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಅಮೇರಿಕ ಮೂಲದ ಈ ಸಂಸ್ಥೆ ಜಗತ್ತಿನ ನೀರಿಗೆ ಸಂಬಂಧಿಸಿದ ವಿಚಾರಗಳ ಕುರಿತಾಗಿ ಅಧ್ಯಯನ ನಡೆಸುತ್ತಿದೆ.ವಿಶ್ವದ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಮೇಲೆ ಆಗುತ್ತಿರುವ, ನೀರಿನ ಕೊರತೆಯ ಪರಿಣಾಮವನ್ನು ತಗ್ಗಿಸಲು ಡಬ್ಲ್ಯೂ ಆರ್ ಐ ರಾಜ್ಯ ಸರ್ಕಾರದ ಜತೆ ಕೆಲಸ ಮಾಡುತ್ತಿದ್ದು, ಜನರ ವಲಸೆ ಹೋಗುವ ಪ್ರವೃತ್ತಿಯನ್ನು ತಪ್ಪಿಸಲು ಕೂಡ ಪ್ರಯತ್ನಿಸುತ್ತಿದೆ.

 ಭಾರತ, ಮೊರಾಕ್ಕೊ, ಇರಾನ್ ನಲ್ಲಿಯೂ ನೀರಿಗೆ ಹಾಹಾಕಾರ

ಭಾರತ, ಮೊರಾಕ್ಕೊ, ಇರಾನ್ ನಲ್ಲಿಯೂ ನೀರಿಗೆ ಹಾಹಾಕಾರ

ಈ ಅಧ್ಯಯನದ ಪ್ರಕಾರ ಭಾರತದ ಜಲಾಶಯಗಳಲ್ಲಿ ನೀರಿ ಮಟ್ಟ ಹಾಗೂ ಜಲಾಶಗಳ ನೀರಿನ ಬಳಕೆ ಅವುಗಳಿಗಿಂತ ಹೆಚ್ಚಾಗು ದುರ್ಬಳಕೆ ಇದರಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿಯ ಕುರಿತಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಭಾರತ ಅತ್ಯಂತ ಶೀಘ್ರದಲ್ಲೇ ಜಲಶೂನ್ಯ ದಿನಗಳನ್ನು ಎದುರಿಸುವ ಅಪಾಯದಲ್ಲಿದೆ ಎಂದು ವರದಿ ಎಚ್ಚರಿಕೆ ನೀಡಿದೆ.

ಈಗಾಗಲೇ ಭಾರತದ ಅನೇಕ ರಾಜ್ಯಗಳಲ್ಲಿ ಕುಡಿಯುವ ಹಾಗೂ ಬಳಕೆ ನೀರಿನ ನದಿ ಜೋಡಣೆಯಂತಹ ಬೃಹತ್ ಯೋಜನೆಗಳಿಗೆ ಸರ್ಕಾರ ಚಿಂತನೆ ನಡೆಸಿದೆ. ನರ್ಮದಾ ನದಿಯಂತಹ ಬೃಹತ್ ನದಿಯಿಂದ ನೀರು ಹಂಚಿಕೆ ಸಂಬಂಧ ಎರಡು ರಾಜ್ಯಗಳ ನಡುವೆ ಇತ್ತೂಚೆಗೆ ಉದ್ಭವವಾಗಿದ್ದ ಬಿಕ್ಕಟ್ಟು ಕುರಿತಾಗಿಯೂ ವರದಿಯಲ್ಲಿ ಹೇಳಲಾಗಿದ್ದು, ನೀರಿಗಾಗಿ ನಡೆಯುವ ವಿವಾದಗಳು ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

 ಕುಡಿಯುವ ನೀರಿಗಾಗಿ ಪರದಾಡುವ ದಿನಗಳು ದೂರವಿಲ್ಲ

ಕುಡಿಯುವ ನೀರಿಗಾಗಿ ಪರದಾಡುವ ದಿನಗಳು ದೂರವಿಲ್ಲ

ಮಧ್ಯಪ್ರದೇಶದ ಇಂದಿರಾಸಾಗರ ಜಲಾಶಯದ ಕಣಿವೆ ಪ್ರದೇಶಗಳಲ್ಲೂ ಕೂಡ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಪ್ರಮಾಣ ಕಡಿಮೆಯಾಗಿದ್ದು, ಈ ರಾಜ್ಯದ ಜಲಾಶಯಗಳು ವರ್ಷದಿಂದ ವರ್ಷಕ್ಕೆ ಕಡಿಮೆ ನೀರು ಸಂಗ್ರಹಗೊಳ್ಳುತ್ತಿರುವುದನ್ನು ದಾಖಲಿಸಿವೆ. ಅಲ್ಲದೇ 30 ಮಿಲಿಯನ್ ಜನರಿಗೆ ಕುಡಿಯುವ ನೀರಿಗಾಗಿ ಪರದಾಡುವ ದಿನಗಳು ಮಧ್ಯಪ್ರದೇಶದಲ್ಲಿ ಶೀಘ್ರದಲ್ಲೇ ಬರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

 ಭಾರತ, ಸ್ಪೇನ್, ಇರಾಕ್ ನಲ್ಲಿ ನೀರಿನ ಕೊರತೆ

ಭಾರತ, ಸ್ಪೇನ್, ಇರಾಕ್ ನಲ್ಲಿ ನೀರಿನ ಕೊರತೆ

ಈ ಅಧ್ಯಯನ ಸಂಸ್ಥೆಗೆ ಲಭ್ಯವಾಗಿರುವ ಸ್ಯಾಟಲೈಟ್ ದೃಶ್ಯಗಳನ್ನು ಆಧರಿಸಿ ಭಾರತಕ್ಕೆ ಉಂಟಾಗಿರುವ ನೀರಿನ ತೀವ್ರ ಕೊರತೆಯ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನಿಸಿದೆ.ಇದೇ ವೇಳೆ ಮೊರಾಕ್ಕೊದ ಎರಡನೇ ಬೃಹತ್ ಜಲಾಶಯವಾದ ಮಸಿರಾ ಶೇ.60ರಷ್ಟು ಬತ್ತಿ ಹೋಗಿದ್ದು ಇದರಿಂದ ಮುಂದಿನ ಮೂರು ವರ್ಷಗಳಲ್ಲಿ ಭೀಕರ ಬರಗಾಲ ಉಂಟಾಗಲಿದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ. ಸ್ಪೇನ್ ದೇಶ ಕೂಡ ಬರಗಾಲದಿಂದ ಬಳಲುತ್ತಿದ್ದು ಶೇ. 60 ರಷ್ಟು ಬುಯೆಂಡಿಯಾ ಜಲಾಶಯ . ಕಳೆದ ಐದು ವರ್ಷಗಳಲ್ಲಿ ಶೇ.60 ರಷ್ಟು ಬತ್ತಿ ಹೋಗಿದೆ ಎಂದು ಅಧ್ಯಯನ ತಿಳಿಸಿದೆ. ಇರಾಕ್ ನ ಮಸಿಲ್ ಜಲಾಶಯ ಕೂಡ ಬತ್ತಿ ಹೋಗಿದ್ದು ಶೇ.60 1990ರಿಂದ ಈಚೆಗೆ ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ಶಲಾಶಯಗಳು ಬತ್ತಿರುವುದು ಇದೇ ಮೊದಲು ಎಂದು ಅಧ್ಯಯನ ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Remember how repeated appeals and environmental campaigns on television, social media and newspapers warned of a day when you might wake up and find that you no longer have running water available in taps. Well, new satellite evidence has revealed that that day is about to come very soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ