ಹೊಸ ಬೇಡಿಕೆ ಮುಂದಿಟ್ಟ ಚಿನ್ನದ ಕನಸಿನ ಸಾಧು!

ಉನ್ನಾವ್‌, ನ.3 : ಉತ್ತರ ಪ್ರದೇಶದ ರಾಜಾ ರಾವ್ ರಾಮ್ ಬಕ್ಷ್ ಸಿಂಗ್ ಕೋಟೆಯಲ್ಲಿ ಚಿನ್ನವಿದೆ ಎಂದು ಹೇಳಿ ಭಾರೀ ಕುತೂಹಲ ಮೂಡಿಸಿರುವ ಸಾಧು ಶೋಭನ್ ಸರ್ಕಾರ್ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ನನ್ನನ್ನು ಉತ್ಪನನ ಸ್ಥಳಕ್ಕೆ ಕರೆದುಕೊಂಡು ಹೋಗದಿದ್ದರೆ, ಚಿನ್ನ ಲಭಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋಟೆಯಲ್ಲಿ ಪುರಾತತ್ವ ಇಲಾಖೆಯಿಂದ ಉತ್ಪನನ ಕಾರ್ಯ ಪ್ರಾರಂಭವಾದ ಎರಡು ವಾರಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಸಾಧು ಶೋಭನ್ ಸರ್ಕಾರ್, ಚಿನ್ನದ ಕನಸು ಬಿದ್ದಿದ್ದು ನಿಜ. ಅದನ್ನು ಸರಕಾರಕ್ಕೆ ತಿಳಿಸಿದ್ದೂ ಸತ್ಯ. ಆದರೆ, ಉತ್ಖನನ ಕಾರ್ಯ ಆರಂಭಿಸಿದ ವೇಳೆ ಪುರಾತತ್ವ ಇಲಾಖೆ ನನ್ನನ್ನು ಆಹ್ವಾನಿಸಲಿಲ್ಲ. ಆದ್ದರಿಂದ ಚಿನ್ನ ಸಿಗುತ್ತಿಲ್ಲ ಎಂಬ ಹೊಸವಾದ ಮುಂದಿಟ್ಟಿದ್ದಾರೆ.

Shobhan Sarkar

"ನಾನು ಆ ಸ್ಥಳಕ್ಕೆ ಬಂದಿದ್ದರೆ ಚಿನ್ನ ಸಿಗುತ್ತಿತ್ತು. ನನ್ನನ್ನು ಆಹ್ವಾನಿಸದೆ ಪುರಾತತ್ವ ಇಲಾಖೆ ತಪ್ಪು ಮಾಡಿದೆ ಎಂದು ಶೋಭನ್ ಸರ್ಕಾರ್ ಹೇಳಿದ್ದಾರೆ. ಉತ್ಪನನಕ್ಕೆ ನನ್ನನ್ನು ಆಹ್ವಾನಿಸದೆ ಇದ್ದುದ್ದರಿಂದ ಅವರಿಗೆ ಮಡಿಕೆ ಚೂರು, ಕಬ್ಬಿಣದ ತುಂಡುಗಳು ದೊರೆಯುತ್ತಿವೆ ಎಂದು ಸರ್ಕಾರ್ ವಿಶ್ಲೇಷಿಸಿದ್ದಾರೆ. ಉತ್ಖನನ ನಡೆಸಲಾಗುತ್ತಿರುವ ಸ್ಥಳದಿಂದ ಮಾಧ್ಯಮದವರನ್ನು ದೂರವಿಟ್ಟಿರುವ ಕ್ರಮದ ಬಗ್ಗೆಯೂ ಕಿಡಿಕಾರಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸಾಧು ಶೋಭನ್ ಸರ್ಕಾರ್ ಉತ್ಪನನ ಕಾರ್ಯದ ನೇರ ಪ್ರಸಾರವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಕುರಿತು ಉತ್ತರ ಪ್ರದೇಶ ಸರ್ಕಾರ ಅಥವ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚಿನ್ನದ ಬದಲು, ಕಬ್ಬಿಣದ ಚೂರು : ರಾಜಾ ರಾವ್ ರಾಮ್ ಬಕ್ಷ್ ಸಿಂಗ್ ಕೋಟೆಯಲ್ಲಿ ಉತ್ಖನನ ನಡೆಸುತ್ತಿರುವ ಪುರಾತತ್ವ ಇಲಾಖೆ ಸಿಬ್ಬಂದಿಗೆ ಸ್ಥಳದಲ್ಲಿ ತುಕ್ಕು ಹಿಡಿದಿರುವ ಕಬ್ಬಿಣದ ತುಂಡುಗಳು ಹಾಗೂ ಬಳೆ ಹಾಗೂ ಮಡಕೆಯ ಚೂರುಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಪುರಾತತ್ವ ಇಲಾಖೆ ಇದನ್ನು ಸ್ಪಷ್ಟಪಡಿಸಿಲ್ಲ. ಚಿನ್ನದ ನಿಧಿ ಸಿಗೋದು ಡೌಟ್ ಅಂತವ್ರೆ ಎಎಸ್ಐ ಚೀಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+