ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಟ್ ಫಂಡ್ ಹಗರಣ : ನಟ ಮಿಥುನ್ ಹಣ ವಾಪಸ್ ಮಾಡಿದ್ದೇಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಕೋಲ್ಕತ್ತಾ, ಜೂ.16: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿರುವ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರು ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ 1.19 ಕೋಟಿ ರು ಹಿಂದಕ್ಕೆ ನೀಡಿ ಸುದ್ದಿಯಾಗಿದ್ದಾರೆ.

ಶಾರಾದಾ ಸಮೂಹದ ಆಯೋಜನೆಯ ಚಾಟ್ ಶೋ ನಡೆಸಿಕೊಡಲು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸಂಸದ, ನಟ ಮಿಥುನ್ ಚಕ್ರವರ್ತಿ ಅವರು ಭಾರಿ ಮೊತ್ತದ ಸಂಭಾವನೆ ಪಡೆದಿದ್ದರು. ಅದರೆ, ಸುದಿಪ್ತೋ ಸೇನ್ ಮಾಲೀಕತ್ವದ ಶಾರದಾ ಸಮೂಹದ ಚಿಟ್ ಫಂಡ್ ಅವ್ಯವಹಾರ ಬಯಲಿಗೆ ಬಂದ ಮೇಲೆ ಮಿಥುನ್ ಅವರ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿತ್ತು.

ಸುಮಾರು 20,000 ಕೋಟಿ ರು ಮೌಲ್ಯ ಹಗರಣದ ರುವಾರಿಗಳಾದ ಪಶ್ಚಿಮ ಬಂಗಾಳದ ಬ್ಲೇಡ್ ಕಂಪನಿ ಸ್ಥಾಪಕರು ಸದ್ಯ ಜೈಲಿನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.[ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ಹಗರಣಗಳು]

Mithun Chakraborty returns Rs 1.19 crore to ED

ನುಡಿದಂತೆ ನಡೆದ ಮಿಥುನ್
ಕಳೆದ ತಿಂಗಳು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ಮಿಥುನ್ ಅವರು, ತಾವು ಪಡೆದ ಅಷ್ಟು ಮೊತ್ತವನ್ನು ಹಿಂತಿರುಗಿಸುವುದಾಗಿ ಹೇಳಿದ್ದರು. ಅದರಂತೆ, ಮೊತ್ತವನ್ನು ನೀಡಿ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. [ವಂಚನೆ: ಅಪರ್ಣಾ ಸೇನ್ ವಿಚಾರಣೆ]

ಇಷ್ಟಕ್ಕೂ ಅಷ್ಟು ದೊಡ್ಡ ಮೊತ್ತ ನೀಡಿದ್ದೇಕೆ ಎಂಬುದಕ್ಕೆ ಉತ್ತರಿಸಿರುವ ಮಿಥುನ್, ಶಾರದಾ ಸಂಸ್ಥೆಯಿಂದ ಅನೇಕ ಮಂದಿ ವಂಚಿತರಾಗಿದ್ದಾರೆ. ನಾನು ನೀಡುವ ಮೊತ್ತದಿಂದ ಅವರಿಗೆ ಅಲ್ಪಮಟ್ಟದ ರಿಲೀಫ್ ಸಿಗುತ್ತದೆ ಎಂದಿದ್ದಾರೆ.

ನಾನು ರಾಜಕೀಯ ಆಧಾರಿತ ಚಾಟ್ ಶೋ ನಡೆಸಿಕೊಡಲು ಒಪ್ಪಿದ್ದೆ ಅದಕ್ಕಾಗಿ ಹಣ ಪಡೆದಿದ್ದೆ ಅಷ್ಟು ಬಿಟ್ಟರೆ ಯಾರನ್ನೂ ವಂಚಿಸುವ ಉದ್ದೇಶ ನನಗಿಲ್ಲ ಎಂದಿದ್ದಾರೆ.ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸಿ ಸೂಕ್ತ ದಾಖಲೆಗಳನ್ನು ಒದಗಿಸಿದ್ದರು. ಮಿಥುನ್ ನೀಡಿದ ಹೇಳಿಕೆ, ದಾಖಲೆ ಹಾಗೂ ಈಗ ನೀಡಿರುವ ಮೊತ್ತ ಎಲ್ಲವನ್ನು ಪರಿಶೀಲಿಸಿದ ಜಾರಿ ನಿರ್ದೇಶನಾಲಯ ನಟ ಮಿಥುನ್ ಗೆ ದೊಡ್ಡ ರಿಲೀಫ್ ನೀಡಿದೆ. (ಒನ್ ಇಂಡಿಯಾ ಸುದ್ದಿ)

English summary
Mithun Chakraborty, actor and politician has returned Rs 1.19 crore that was paid to him by the Saradha group for hosting a political chat show.Why Mithun returned the money? Here is the answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X